33ರಲ್ಲಿ 23 ಮಹಿಳಾ ಸಂಘಗಳಿಗೆ ಬ್ಯಾಂಕ್‌ ಸಾಲ ಸೌಲಭ್ಯ

KannadaprabhaNewsNetwork |  
Published : Feb 18, 2025, 12:32 AM IST
ಹೊನ್ನಾಳಿ ಫೋಟೋ 17ಎಚ್.ಎಲ್.ಐ3। ಪಟ್ಟಣದ  ತಾ.ಪಂ. ಸಾಮಾರ್ಥ್ಯ ಸೌಧದಲ್ಲಿ ತಾ.ಪಂ. ಇಒ ಪ್ರಕಾಶ್ ಹಾಗೂ ಮಾರ್ಗದರ್ಶಿ ಬ್ಯಾಂಕ್ ನ ವ್ಯವಸ್ಥಾಪಕ ಎಸ್.ಎಸ್. ಆಚಾರ್ಯ ಅವರು ಮಹಿಳಾ ಸ್ವಸಹಾಯ ಗುಂಪುಗಳಿಗೆ  ಸಾಲದ   ಚೆಕ್ ಗಳನ್ನು  ವಿತರಿಸಿದರು.   | Kannada Prabha

ಸಾರಾಂಶ

ಈ ಹಿಂದೆ ಸಾಲ ಬೇಕು ಎಂದರೆ ನೀವುಗಳು ಬ್ಯಾಂಕುಗಳಿಗೆ ಹುಡುಕಿಕೊಂಡು ಹೋಗಬೇಕಾಗಿತ್ತು, ಆದರೆ ಈಗ ಬ್ಯಾಂಕುಗಳೇ ಗ್ರಾಹಕರನ್ನು ಹುಡುಕಿಕೊಂಡು ಬಂದು ಸಾಲ ಸೌಲಭ್ಯ ಕಲ್ಪಿಸಲು ಮುಂದೆ ಬರುತ್ತಿವೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಪ್ರಕಾಶ್ ಹೇಳಿದ್ದಾರೆ.

- ಹೊನ್ನಾಳಿ ಸಾಮರ್ಥ್ಯ ಸೌಧದಲ್ಲಿ ಸಾಲದ ಚೆಕ್‌ಗಳ ವಿತರಿಸಿ ತಾಪಂ ಇಒ ಪ್ರಕಾಶ್‌ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಈ ಹಿಂದೆ ಸಾಲ ಬೇಕು ಎಂದರೆ ನೀವುಗಳು ಬ್ಯಾಂಕುಗಳಿಗೆ ಹುಡುಕಿಕೊಂಡು ಹೋಗಬೇಕಾಗಿತ್ತು, ಆದರೆ ಈಗ ಬ್ಯಾಂಕುಗಳೇ ಗ್ರಾಹಕರನ್ನು ಹುಡುಕಿಕೊಂಡು ಬಂದು ಸಾಲ ಸೌಲಭ್ಯ ಕಲ್ಪಿಸಲು ಮುಂದೆ ಬರುತ್ತಿವೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಪ್ರಕಾಶ್ ಹೇಳಿದರು.

ಸೋಮವಾರ ತಾ.ಪಂ. ಸಾಮರ್ಥ್ಯ ಸೌಧದಲ್ಲಿ ಅವಳಿ ತಾಲೂಕುಗಳ 21 ಸ್ವಸಹಾಯ ಮಹಿಳಾ ಗುಂಪುಗಳಿಗೆ ₹1.37 ಕೋಟಿ ಮೊತ್ತದ ಸಾಲದ ಚೆಕ್‌ಗಳನ್ನು ವಿತರಿಸಿ ಅವರು ಮಾತನಾಡಿದರು. ಹೊನ್ನಾಳಿ ತಾಲೂಕಿನಲ್ಲಿ 90 ಹಾಗೂ ನ್ಯಾಮತಿ ತಾಲೂಕಿನ 33 ಸಂಘಗಳಿಂದ ಸಾಲಕ್ಕಾಗಿ ಬೇಡಿಕೆ ಬಂದಿದೆ. ಅದರಲ್ಲಿ ಇಂದು 23 ಸಂಘಗಳಿಗೆ ಬ್ಯಾಂಕುಗಳು ಸಾಲ ಸೌಲಭ್ಯ ನೀಡಿವೆ ಎಂದರು.

ಮಹಿಳೆಯರು ಈ ಸಾಲ ಸೌಲಭ್ಯ ಪಡೆದು ಆರ್ಥಿಕ ಸಬಲರಾಗಿ, ಮುಂದೆ ಬರಬೇಕು ಎನ್ನುವ ಉದ್ದೇಶವನ್ನು ಈ ಸಾಲಮೇಳ ಹೊಂದಿದೆ. ಸಂಘದ ಮಹಿಳೆಯರು ಯಾವುದಾದರೂ ಒಂದು ಚಟುವಟಿಕೆ ಮಾಡುವ ಕುರಿತು ತಮಗೆ ಸಾಲ ಬೇಕು ಎಂದರೆ ಅದಕ್ಕೆ ಸಾಲ ಒದಗಿಸಲಾಗುವುದು. ಹಳೆಯ ಉದ್ಯೋಗಗಳ ಬದಲಿಗೆ ಹೊಸ ಹೊಸ ಉದ್ಯೋಗಗಳನ್ನು ಮಾಡಲು ಮುಂದೆ ಬರಬೇಕು. ಪ್ರಸ್ತುತ ಶಾಲೆಗಳಲ್ಲಿ ಮೊಟ್ಟ, ಚಕ್ಕಿ ನೀಡಲಾಗುತ್ತಿದ್ದು, ಕೋಳಿ ಸಾಕಾಣಿಕೆ ಮಾಡಿದರೆ ಮೊಟ್ಟೆ ಮಾರಾಟದಿಂದ ಆದಾಯ ಗಳಿಸಬಹುದು. ಬಾಳೆ ನಾರಿನಿಂದ ವಿವಿಧ ವಸ್ತುಗಳ ಉತ್ಪಾದನೆ, ಚಿಕ್ಕಿ ತಯಾರಿಕೆ, ಅಣಬೆ, ಹೂವಿನ ಕೃಷಿಯಂಥ ಉದ್ಯೋಗಗಳತ್ತ ಒಲವು ತೋರಿದರೆ ಒಳಿತು ಎಂದು ಹೇಳಿದರು.

ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಎಸ್.ಎಸ್. ಆಚಾರ್ಯ, ಎಫ್‌ಎಲ್‌ಸಿ ಶಿವಪ್ಪ, ಟಿಪಿಎಂ ಧರ್ಮಣ್ಣ ಮಾತನಾಡಿದರು. ಕೆನರಾ ಬ್ಯಾಂಕ್, ಎಚ್‌ಡಿಎಫ್‌ಸಿ, ಎಸ್‌ಬಿಐ, ಡಿಸಿಸಿ ಬ್ಯಾಂಕ್ ಹಾಗೂ ಐಸಿಐಸಿ ಬ್ಯಾಂಕುಗಳು ಈ ಸಾಲ ಸೌಲಭ್ಯ ಕೊಟ್ಟಿವೆ ಎಂದು ಎನ್‌ಆರ್‌ಎಲ್‌ಎಂನ ಆಶಾ ಹೇಳಿದರು.

ಈ ಸಂದರ್ಭದಲ್ಲಿ ನ್ಯಾಮತಿ ತಾ.ಪಂ. ಇಒ ರಾಘವೇಂದ್ರ, ಹೊನ್ನಾಳಿ ತಾ.ಪಂ. ಸಹಾಯಕ ನಿರ್ದೇಶಕ ನಾಗರಾಜ್ ಉಪಸ್ಥಿತರಿದ್ದರು.

- - -

ಕೋರ್ಟ್ ಸರ್ಕಾರದ ದುಡ್ಡು ವಿಷ ಇದ್ದಂಗೆ. ಅದನ್ನು ಸದುಪಯೋಗ ಮಾಡಿಕೊಳ್ಳಬೇಕು. ಯಾರೇ ಬಂದು ಹಣ ಬಿಡಿಸಿಕೊಡಿ ಎಂದು ಕೇಳಿದರೂ ಕೊಡಬಾರದು. ಇದು ನಿಮ್ಮನ್ನು ಮತ್ತು ದುಡ್ಡು ಹೊಡೆದುಕೊಂಡು ಹೋದವರನ್ನು ಬಿಡುವುದಿಲ್ಲ

- ಪ್ರಕಾಶ್‌, ಇಒ, ತಾಪಂ, ಹೊನ್ನಾಳಿ

- - - -17ಎಚ್.ಎಲ್.ಐ3.ಜೆಪಿಜಿ:

ಹೊನ್ನಾಳಿ ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ಇಒ ಪ್ರಕಾಶ್, ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಎಸ್.ಎಸ್. ಆಚಾರ್ಯ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲದ ಚೆಕ್‌ಗಳನ್ನು ವಿತರಿಸಿದರು.

PREV

Recommended Stories

ಇಂದಿನಿಂದ ಪ್ರೊ ಕಬಡ್ಡಿ ಲೀಗ್‌ ಶುರು : 12ನೇ ಆವೃತ್ತಿ । 12 ತಂಡ, ಒಟ್ಟು 117 ಪಂದ್ಯ
‘ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವವರು ಕಷ್ಟಕ್ಕೆ ಸಿಲುಕ್ತಾರೆ’