ಕನ್ನಡಪ್ರಭ ವಾರ್ತೆ ಮೂಲ್ಕಿ
ಮೂಲ್ಕಿಯ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬೈಯ ಜಾಗತಿಕ ಬಂಟರ ಸಂಘದ ಅನೇಕ ಪದಾಧಿಕಾರಿಗಳು, ದಾನಿಗಳು ಮಾರಿಯಮ್ಮ ದೇವಸ್ಥಾನಕ್ಕೆ ಅನೇಕ ದೇಣಿಗೆ, ಕೊಡುಗೆಗಳನ್ನು ನೀಡಿದ್ದಾರೆಂದು ತಿಳಿಸಿದರು.
ಹೊರೆಕಾಣಿಕೆ ಸಮಿತಿಯ ಅಧ್ಯಕ್ಷ ದೇವೀಪ್ರಸಾದ ಶೆಟ್ಟಿ ಬೆಳಪು ಮಾತನಾಡಿ, ಫೆ.25ರಿಂದ ಮಾ.5ರ ವರೆಗೆ ಒಂಭತ್ತು ದಿನಗಳ ಕಾಲ ವೈಭವದ ಬ್ರಹ್ಮಕಲಶೋತ್ಸವ ನಡೆಯಲಿದ್ದು ಐಕಳ ಹರೀಶ ಶೆಟ್ಟರ ಮುತುವರ್ಜಿಯಲ್ಲಿ ಬಂಟರ ಸಂಘಗಳ ಒಕ್ಕೂಟದಿಂದ ಹೊರೆಕಾಣಿಕೆ ಬರಲಿದೆ. ಮುಂಬೈ ಹಾಗೂ ನಾನಾ ಕಡೆಗಳ ಊರ ದಾನಿಗಳ ಸಹಕಾರದಲ್ಲಿ 99 ಕೋಟಿ ರು.ವೆಚ್ಚದಲ್ಲಿ ಮಾರಿಗುಡಿ ದೇಗುಲ ನಿರ್ಮಾಣ ಅತ್ಯಂತ ಸುಂದರವಾಗಿ ಆಗಿದೆ. ಮೂಲ್ಕಿಯ ಒಕ್ಕೂಟದ ಕಚೇರಿಗೆ ಹೊರೆಕಾಣಿಕೆ ನೀಡುವವರು 22 ರ ಬೆಳಿಗ್ಗೆ ತಲುಪಿಸಬಹುದು. 22ರಂದು ದಕ್ಷಿಣ ಕನ್ನಡದಿಂದ ಹಾಗೂ 23 ಕ್ಕೆ ಉಡುಪಿ ಜಿಲ್ಲೆಯಿಂದ ಹೊರೆಕಾಣಿಕೆ ಬರಲಿದ್ದು ಎಲ್ಲ ಬಂಟರ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳನ್ನು ಸಂಪರ್ಕಿಸಿ ಸಂಘಟಿಸಲಾಗಿದೆ ಎಂದು ತಿಳಿಸಿದರು.99,999 ಭಕ್ತರು ಸೇರಿ ನವದುರ್ಗಾ ಲೇಖನದಲ್ಲಿ ತೊಡಗಿಸಿಕೊಂಡಿದ್ದು . ರಾಜ್ಯದ ಎಲ್ಲ ಬಂಟರ ಸಂಘಗಳನ್ನು ಸಂಪರ್ಕಿಸಲಾಗಿದೆ. ಸ್ವಸ್ತಿಕ್ ಬ್ರಾಂಡ್ ಅಕ್ಕಿಯನ್ನೇ ನೀಡಬೇಕು ಎಂದು ವಿನಂತಿಸಲಾಗಿದೆ. ಹೆಚ್ಚು ಸಮಯ ಉಳಿಯುವ ತರಕಾರಿಗಳನ್ನು ನೀಡಬೇಕು. ತೆಂಗಿನ ಕಾಯಿ ಕೂಡ ಇತ್ಯಾದಿ ಯಾವ ರೀತಿಯಲ್ಲಿ ಹೊರೆಕಾಣಿಕೆ ನೀಡಬೇಕು ಎಂದು ಮಾಹಿತಿ ನೀಡಲಾಗಿದೆ. 150 ಕ್ಕೂ ಹೆಚ್ಚಿನ ಬಂಟರ ಸಂಘಗಳು ಹೊರೆಕಾಣಿಕೆಯಲ್ಲಿ ಭಾಗವಹಿಸಲಿದ್ದು ಅನ್ನಸಂತರ್ಪಣೆಗೆ ಪಾತ್ರೆಗಳನ್ನೂ ನೀಡಬಹುದು. ಎಂದು ಚಂದ್ರಹಾಸ ಶೆಟ್ಟಿ ತಿಳಿಸಿದರು.