ಇದೇ ಸಂದರ್ಭದಲ್ಲಿ ಮೈಸೂರಿನ ಬಿ.ಇ.ಎಂ.ಎಲ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಡಿ.ನಾರಾಯಣ, ಮೈಸೂರಿನ ಹಾಕ್ಟರ್ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಡಾ.ಎನ್.ಪಿ.ಶಿವಕುಮಾರ್, ಚನ್ನಪಟ್ಟಣ ತಾಲೂಕಿನ ಸಹಕಾರ ಸಂಘಗಳ ಉಪನಿಬಂಧಕ ಬಿ.ಎಸ್.ಜವರಾಯಿಗೌಡ ಅವರಿಗೆ ಶ್ರೀ ವಿಶ್ವಗುರು ಪ್ರಶಸ್ತಿ ನೀಡಲಾಯಿತು. ಸಾಧಕರಾದ ಸಾರ್ವಜನಿಕ ಆಸ್ಪತ್ರೆ ಡಾ.ಕೆ.ಆರ್.ಮುರಳಿಧರ, ಹಾಡ್ಲಿ ಸರ್ಕಲ್ ನ ಲೇಖಕಿ ಶಿಲ್ಪಮುತ್ತು, ಸಾವಯವ ಕೃಷಿಕ ಗಜೇಂದ್ರ ಮಹದೇವಪ್ಪ ಅವರನ್ನು ಅಭಿನಂದಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಸಹಕಾರಿ ಸಂಘಗಳಲ್ಲಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ನಿಷ್ಠೆ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಜೊತೆಗೆ ಸಾರ್ವಜನಿಕರಿಗೆ ಹೊಸತನದ ಸವಲತ್ತುಗಳನ್ನು ನೀಡಿದರೆ ಯಶಸ್ವಿನತ್ತ ಸಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಡಿವೈಎಸ್ಪಿ ಎಸ್.ಬಿ.ಯಶವಂತ ಕುಮಾರ್ ತಿಳಿಸಿದರು.
ಪಟ್ಟಣದ ಸಾರಂಗಪಾಣಿ ದೇವಸ್ಥಾನ ರಸ್ತೆಯ ಗಾಯಿತ್ರಿ ಮಂದಿರದಲ್ಲಿ ವಿಶ್ವಗುರು ಕೋ-ಆಪರೇಟಿವ್ ಸೊಸೈಟಿ ವತಿಯಿಂದ ನಡೆದ ಬಸವ ಜಯಂತಿ, ಶ್ರೀ ವಿಶ್ವಗುರು ಪ್ರಶಸ್ತಿ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ದೇಶಕ್ಕೆ ಸಮಾನತೆ ಸಾರಿದ ಬಸವಣ್ಣ ಅವರ ಆದರ್ಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಬಸವಣ್ಣ ಹೆಸರಿನಲ್ಲಿ ಬ್ಯಾಂಕ್ ಸ್ಥಾಪಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ವಿಶ್ವಗುರು ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಕುಂದೂರು ರಸಸಿದ್ದೇಶ್ವರ ಮಠದ ನಂಜುಂಡಸ್ವಾಮಿ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿ, ಕಾಯಕವೇ ಕೈಲಾಸ ಎನ್ನುವ ಬಸವಣ್ಣ ಅವರ ವಚನವನ್ನು ಪಾಲಿಸಬೇಕು. ದುಡಿದ ಹಣದಲ್ಲಿ ಸ್ವಲ್ಪ ಭಾಗವನ್ನು ಸಮಾಜದೊಂದಿಗೆ ಹಂಚಿಕೊಳ್ಳುವ ಅದರ್ಶವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಹಲವಾರು ವರ್ಷಗಳಿಂದ ಸಹಕಾರ ಸಂಘಗಳಲ್ಲಿ ಅನುಭವವನ್ನು ಪಡೆದ ಹಿರಿಯಲು ಬಸವಣ್ಣ ಅವರ ಚಿಂತನೆಗೆ ಅನುಗುಣವಾಗಿ ಎಲ್ಲಾ ಸಮುದಾಯದ ಜನರನ್ನು ಒಗ್ಗೂಡಿಸಿ ವಿಶ್ವಗುರು ಕೋ ಆಪರೇಟಿವ್ ಸೊಸೈಟಿ ಸ್ಥಾಪಿಸಿಕೊಂಡು ಸ್ವ ಉದ್ಯೋಗ ಕೈಗೊಳ್ಳುವವರಿಗೆ ಧನಸಹಾಯ ನೀಡುತ್ತಾ ಸಮಾಜದಲ್ಲಿ ಉನ್ನತ ಸ್ಥಾನ ಪಡೆದವರು ಹಾಗೂ ಸಾಧಕರಿಗೆ ಅಭಿನಂದನೆ ಸಲ್ಲಿಸಿ ಕಾಯಕದಲ್ಲಿ ಸ್ಫೂರ್ತಿ ತುಂಬುವ ಕೆಲಸದಲ್ಲಿ ಕೈಗೊಂಡಿರುವುದು ವಿಶೇಷತೆ ಎನ್ನಿಸಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮೈಸೂರಿನ ಬಿ.ಇ.ಎಂ.ಎಲ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಡಿ.ನಾರಾಯಣ, ಮೈಸೂರಿನ ಹಾಕ್ಟರ್ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಡಾ.ಎನ್.ಪಿ.ಶಿವಕುಮಾರ್, ಚನ್ನಪಟ್ಟಣ ತಾಲೂಕಿನ ಸಹಕಾರ ಸಂಘಗಳ ಉಪನಿಬಂಧಕ ಬಿ.ಎಸ್.ಜವರಾಯಿಗೌಡ ಅವರಿಗೆ ಶ್ರೀ ವಿಶ್ವಗುರು ಪ್ರಶಸ್ತಿ ನೀಡಲಾಯಿತು. ಸಾಧಕರಾದ ಸಾರ್ವಜನಿಕ ಆಸ್ಪತ್ರೆ ಡಾ.ಕೆ.ಆರ್.ಮುರಳಿಧರ, ಹಾಡ್ಲಿ ಸರ್ಕಲ್ ನ ಲೇಖಕಿ ಶಿಲ್ಪಮುತ್ತು, ಸಾವಯವ ಕೃಷಿಕ ಗಜೇಂದ್ರ ಮಹದೇವಪ್ಪ ಅವರನ್ನು ಅಭಿನಂದಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸೊಸೈಟಿ ಅಧ್ಯಕ್ಷ ಎಂ.ಜಿ.ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಂ.ಎಸ್.ಸಿದ್ದಲಿಂಗಸ್ವಾಮಿ, ನಿರ್ದೇಶಕರಾದ ಎಂ.ವಿ.ಕೃಷ್ಣಶೆಟ್ಟಿ, ಆರ್.ಎನ್.ವಿಶ್ವಾಸ್, ಎಂ.ಎಸ್.ದಯಾಶಂಕರ್, ಕೆ.ಎಸ್.ಗುರುಪ್ರಸಾದ್, ಸಿ.ಪಿ.ರಾಜು, ಮಲ್ಲಿಕಾರ್ಜುನಸ್ವಾಮಿ, ಬಿ.ಮಹದೇವು, ಚಂದ್ರಮ್ಮ, ಎಂ.ಎನ್.ಮಹೇಶ್ ಕುಮಾರ್, ಬಿ.ಕೆ.ರೂಪ, ಎಂ.ಜಿ.ಮಹೇಶ್ ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.