ಬಂಟರ ಸಂಘ ಬಂಟವಾಳ ತಾಲೂಕು ಸಂಘದ ವಾರ್ಷಿಕೋತ್ಸವ, ಮೇಳೈಸಿದ ‘ಸಾಂಸ್ಕೃತಿಕ ವೈಭವ’

KannadaprabhaNewsNetwork |  
Published : Jun 16, 2026, 03:00 AM IST
ಬಂಟರ ಸಂಘ | Kannada Prabha

ಸಾರಾಂಶ

ಬಂಟರ ಸಂಘ ಬಂಟವಾಳ ತಾಲೂಕು ಇದರ ನೇತೃತ್ವದಲ್ಲಿ ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ವಲಯ ಬಂಟರ ಸಂಘಗಳ ಸಹಯೋಗದಲ್ಲಿ ಸಂಘದ 14ನೇ ವಾರ್ಷಿಕೋತ್ಸವ ಹಾಗೂ ಬಂಟರ ವಿವಿಧ ‘ಸಾಂಸ್ಕೃತಿಕ ವೈಭವ’ ಭಾನುವಾರ ಬ್ರಹ್ಮರಕೂಟ್ಲುವಿನ ಬಂಟವಾಳದ ಬಂಟರ ಭವನದಲ್ಲಿ ಮೇಳೈಸಿತು.

ಬಂಟ್ವಾಳ: ಬಂಟರ ಸಂಘ ಬಂಟವಾಳ ತಾಲೂಕು ಇದರ ನೇತೃತ್ವದಲ್ಲಿ ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ವಲಯ ಬಂಟರ ಸಂಘಗಳ ಸಹಯೋಗದಲ್ಲಿ ಸಂಘದ 14ನೇ ವಾರ್ಷಿಕೋತ್ಸವ ಹಾಗೂ ಬಂಟರ ವಿವಿಧ ‘ಸಾಂಸ್ಕೃತಿಕ ವೈಭವ’ ಭಾನುವಾರ ಬ್ರಹ್ಮರಕೂಟ್ಲುವಿನ ಬಂಟವಾಳದ ಬಂಟರ ಭವನದಲ್ಲಿ ಮೇಳೈಸಿತು.ಪ್ರಗತಿಪರ ಕೃಷಿಕರಾದ ನಿರಂಜನ್ ಸೇಮಿತ ಕುಂದಬೆಟ್ಟು ಅವರು ಸಾಂಸ್ಕೃತಿಕ ವೈಭವವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಬಂಟರ ಸಂಘದ ಬಂಟವಾಳ ತಾಲೂಕು ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಅವರ ಅಧ್ಯಕ್ಷತೆ ವಹಿಸಿದ್ದರು.ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪರಿಶ್ರಮದ ಬದುಕು ನಮ್ಮದಾಗಲಿ: ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮವನ್ನು ಪ್ರಧಾನ ಅತಿಥಿಯಾಗಿದ್ದ ಮುಂಬೈ ಶ್ರೀಪ್ಯಾಕ್ ಕಂಟೈನರ್ ಪ್ರೈ.ಲಿ.ನ ಮ್ಯಾನೇಜಿಂಗ್ ಡೈರೆಕ್ಟರ್ ಬಾಲಕೃಷ್ಣ ಎಂ.ರೈ. ಉದ್ಘಾಟಿಸಿದರು.

ಜೀವನದಲ್ಲಿ ನಂಬಿಕೆಯೇ ಬಂಡವಾಳವಾಗಿದೆ. ಅಲ್ಲದೆ ನಿರ್ಧಿಷ್ಠ ಗುರಿಯನ್ನು ಹೊಂದಿರಬೇಕು. ಪರಿಶ್ರಮದ ಮೂಲಕ ಗೆದ್ದು ನಾವು ಬದುಕನ್ನು ಕಟ್ಟಿಕೊಳ್ಳಬೇಕು. ತನ್ನ ಶ್ರಮದ ಫಲವಾಗಿ ಸಂಸ್ಥೆಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ದೊರೆತಿದ್ದು, ಇದು ಬಂಟ್ವಾಳ ತಾಲೂಕಿನ ಬಂಟ ಸಮುದಾಯಕ್ಜೆ ಸಂದ ಹೆಮ್ಮೆಯಾಗಿದೆ ಎಂದರು.

ಸಂಘದ ಮೂಲಕ ಶಿಕ್ಷಣಕ್ಜೆ ಹೆಚ್ಚಿನ ಒತ್ತು ನೀಡಬೇಕು. ಮುಂದಿನ ವರ್ಷದಿಂದ ನಮ್ಮ ಸಂಸ್ಥೆ ವತಿಯಿಂದ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದಾಗಿ ಪ್ರಕಟಿಸಿದರು.

ಮಂಗಳೂರು ತಾಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಸುರೇಂದ್ರ ಬಿ. ಕಂಬಳಿ ಅಡ್ಯಾರ್ ಗುತ್ತು ಮುಖ್ಯ ಅತಿಥಿಯಾಗಿದ್ದರು. ಕಾರ್ಯದರ್ಶಿ ಸದಾನಂದ ಆಳ್ವ ಕಂಪ, ಜತೆ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಸಜಿಪ, ಮಹಿಳಾ ವಿಭಾಗದ ಅಧ್ಯಕ್ಷೆ ಸುಜಾತ ಪಿ. ರೈ ಕಲ್ಲಡ್ಕ, ಯುವ ವಿಭಾಗದ ಅಧ್ಯಕ್ಷ ಗೋಕುಲ್ ಭಂಡಾರಿ ಬಿಜಂದಾರು ಗುತ್ತು, ಕಲೆ, ಸಾಂಸ್ಕೃತಿಕ ವಿಭಾಗದ ಸಂಚಾಲಕ ಗಣೇಶ್‌ ಶೆಟ್ಟಿ ಗೋಳ್ತಮಜಲು ಹಾಗೂ ತಾಲೂಕಿನ 15 ವಲಯಗಳ ಬಂಟರ ಸಂಘದ ಅಧ್ಯಕ್ಷರು ವೇದಿಕೆಯಲ್ಲಿದ್ದರು.

ಸಂಘದ ಮಹಿಳಾ ವಿಭಾಗದಿಂದ ಇಬ್ಬರಿಗೆ ಸಹಾಯ ಧನ ವಿತರಿಸಲಾಯಿತು. ವಲಯ ಬಂಟರ ಸಂಘಗಳಿಂದ ‘ಬಂಟೆರೆ ಕಲಾ ಪಂಥ, ಮಹಿಳಾ ವಿಭಾಗದಿಂದ ‘ಅಳಿಯಕಟ್ಟು’ ಕಿರು ಪ್ರಹಸನ, ಯುವ ವಿಭಾಗದಿಂದ ‘ಗುತ್ತುದ ಇಲ್ಲ್’ ಕಿರು ಪ್ರಹಸನ ನಡೆಯಿತು.

ಇದೇ ವೇಳೆ ಸಾಂಸ್ಕೃತಿಕ ವೈಭವದಲ್ಲಿ ವಿಜೇತ ವಲಯ ಬಂಟರ ಸಂಘಕ್ಕೆ ಬಹುಮಾನ ವಿತರಿಸಲಾಯಿತು. ಬಂಟರ ಸಂಘದ ಬಂಟವಾಳ ತಾಲೂಕು ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಅಧ್ಯಕ್ಷತೆ ವಹಿಸಿ ಪ್ರಸ್ತಾವನೆಗೈದರು.ಸಂಘದ ಉಪಾಧ್ಯಕ್ಷ ಐತಪ್ಪ ಆಳ್ವ ಸುಜೀರು ಗುತ್ತು ಸ್ವಾಗತಿಸಿದರು. ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ

ವಂದಿಸಿದರು. ಮಾಣಿ ಗ್ರಾಪಂ ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕೊಡಾಜೆ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಿಮ ಅಧಿಸೂಚನೆ ಪ್ರತಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ
ಟೌನ್‌ಶಿಪ್‌ ವಿರುದ್ಧ ವಿಧಾನಸೌಧ ದೆಹಲಿ ಚಲೋ