ಕನ್ನಡಪ್ರಭವಾರ್ತೆ ಪುತ್ತೂರು
ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶ್ರೀಕೃಷ್ಣನ ವಿಗ್ರಹಕ್ಕೆ ೮ನೇ ತರಗತಿಯ ವಿದ್ಯಾರ್ಥಿ ಶ್ರೀವತ್ಸ ಗಂಟೆಯ ನಾದ ಹಾಗೂ ವಿಧಿ ವಿಧಾನದೊಂದಿಗೆ ಪೂಜೆ ನೆರವೇರಿಸಿ, ವಿಶೇಷವಾಗಿತ್ತು. ಅಷ್ಟಮಿಯಂದು ಬಾಲ ರಾಧಾ- ಕೃಷ್ಣರಾಗಿ ಬಂದಿದ್ದ ಮಕ್ಕಳಿಗೆ ಆರತಿ ಬೆಳಗಲಾಯಿತು. ಶ್ರೀಕೃಷ್ಣನ ಕುರಿತಾದ ಹಾಡುಗಳ ಕುಣಿತ ಭಜನೆ ಮಾಡುವ ಮೂಲಕ ವಿದ್ಯಾರ್ಥಿಗಳು ಗಮನ ಸೆಳೆದರು.
ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಹಮ್ಮಿಕೊಂಡಿದ್ದ ಶ್ರೀಕೃಷ್ಣನ ಬಾಲಲೀಲೆಯ ಕಥೆ ಹೇಳುವುದು, ಶುಭಾಶಯ ಪತ್ರವನ್ನು ತಯಾರು ಮಾಡುವುದು, ಮೊಸರು ಕುಡಿಕೆ ಒಡೆಯುವ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಬಹುಮಾನ ವಿತರಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಪೋಷಕರು ಉಪಸ್ಥಿತರಿದ್ದರು.ಪ್ರಾಂಶುಪಾಲೆ ಮಾಲತಿ ಡಿ. ಹಾಗೂ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ಇದ್ದರು. ವಿದ್ಯಾರ್ಥಿ ಅಕ್ಷರ ಎ. ಪ್ರಾರ್ಥಿಸಿದರು. ಸೌಪರ್ಣಿಕಾ ಎಸ್. ದಾನೇಗೊಂಡರ್ ಹಾಗೂ ಮಾನ್ಯಲಕ್ಷ್ಮೀ ಎನ್. ಪಿ. ನಿರ್ವಹಿಸಿದರು.