ಕನ್ನಡಪ್ರಭ ವಾರ್ತೆ ಮಂಗಳೂರು
ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್‌ನಲ್ಲಿ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಆಯೋಜಿಸಲಾದ ಬಂಟ ಕ್ರೀಡೋತ್ಸವ-2026ರ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಉದ್ಯಮಿ ಗಿರೀಶ್ ಎಂ.ಶೆಟ್ಟಿ ಕಟೀಲು ಮಾತನಾಡಿ, ಬಂಟರು ಶಿಸ್ತನ್ನು ಕಾಪಾಡಿ ಬೇರೆ ಸಮುದಾಯದವರನ್ನೂ ಪ್ರೀತಿಸಿದವರು. ಕ್ರೀಡೆಯ ಮೂಲಕ ಬಂಟರು ಸಂಘಟಿತರಾಗಿ ಕೆಲಸ ಮಾಡುವಂತಾಗಲಿ ಎಂದರು.ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಯಶೀಲ ಅಡ್ಯoತಾಯ ಅಡ್ಯಾರುಗುತ್ತು ಮಾತನಾಡಿ, ಕ್ರೀಡಾಕೂಟ ಹಮ್ಮಿಕೊಂಡ ಸಂಘಟಕರನ್ನು ಅಭಿನಂದಿಸಿದರು.ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು.
ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ ಉಳ್ಳಾಲ ಬಂಟರ ಸಂಘ ಪ್ರಥಮ, ನೀರುಮಾರ್ಗ ಬಂಟರ ಸಂಘ ದ್ವಿತೀಯ, ಪುರುಷರ ಹಗ್ಗ ಜಗ್ಗಾಟದಲ್ಲಿ ಜಪ್ಪಿನ ಮೊಗರು ಬಂಟರ ಸಂಘ ಪ್ರಥಮ, ಪುತ್ತೂರು ಬಂಟರ ಸಂಘ ದ್ವಿತೀಯ, ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಸುರತ್ಕಲ್ ಬಂಟರ ಸಂಘ ಎ ಪ್ರಥಮ, ಸುರತ್ಕಲ್ ಬಂಟರ ಸಂಘ ಬಿ ದ್ವಿತೀಯ, ಗುರುಪುರ ಬಂಟರ ಮಾತೃ ಸಂಘ ಸಮಗ್ರ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿತು.
ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಸದಾಶಿವ ಶೆಟ್ಟಿ ಬಿಜೈ ಸ್ವಾಗತಿಸಿದರು. ಬಂಟ ಕ್ರೀಡಾ ಕೂಟದ ಸಂಚಾಲಕ ಜಗದೀಶ್ ಶೆಟ್ಟಿ ಬಿಜೈ ವಂದಿಸಿದರು. ಗಣೇಶೋತ್ಸವ ಸಮಿತಿ ಸಮನ್ವಯಕಾರ ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್ ಸನ್ಮಾನಿತರ ಪರಿಚಯಿಸಿದರು. ಭಾಗ್ಯರಾಜ್ ಶೆಟ್ಟಿ ನಿರೂಪಿಸಿದರು.