ಆಗುಂಬೆ ಘಾಟ್‌ನ ಮೊದಲ ತಿರುವಿನಲ್ಲಿ ಕಂದಕಕ್ಕೆ ಉರುಳಿದ ಪಿಕಪ್

KannadaprabhaNewsNetwork |  
Published : Sep 13, 2026, 03:15 AM IST
ಪಿಕಪ್ | Kannada Prabha

ಸಾರಾಂಶ

ಆಗುಂಬೆ ಘಾಟ್‌ನ ಮೊದಲ ತಿರುವಿನಲ್ಲಿ ತರಕಾರಿ ಸಾಗಿಸುತ್ತಿದ್ದ ಪಿಕಪ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಘಟನೆ ಶನಿವಾರ ಸಂಜೆ ಹೆಬ್ರಿ ತಾಲೂಕಿನ ನಾಡ್ಪಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

ಕಾರ್ಕಳ: ಆಗುಂಬೆ ಘಾಟ್‌ನ ಮೊದಲ ತಿರುವಿನಲ್ಲಿ ತರಕಾರಿ ಸಾಗಿಸುತ್ತಿದ್ದ ಪಿಕಪ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಘಟನೆ ಶನಿವಾರ ಸಂಜೆ ಹೆಬ್ರಿ ತಾಲೂಕಿನ ನಾಡ್ಪಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.ಚಿಕ್ಕಮಗಳೂರಿನಿಂದ ತರಕಾರಿ ತುಂಬಿಕೊಂಡು ಮಂಗಳೂರಿನತ್ತ ತೆರಳುತ್ತಿದ್ದ ಪಿಕಪ್‌ ಆಗುಂಬೆ ಘಾಟ್‌ನ ಮೊದಲ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಕಂದಕಕ್ಕೆ ಉರುಳಿದೆ. ಅಪಾಯವನ್ನು ಅರಿತ ಚಾಲಕ ತಕ್ಷಣ ವಾಹನದಿಂದ ಜಿಗಿದ ಪರಿಣಾಮ ಯಾವುದೇ ಗಾಯಗಳಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಘಟನೆಯ ಬಳಿಕ ಸಂಜೆ ಕ್ರೇನ್‌ ಮೂಲಕ ಕಂದಕಕ್ಕೆ ಉರುಳಿದ್ದ ಪಿಕಪ್‌ ವಾಹನವನ್ನು ಮೇಲಕ್ಕೆತ್ತಲಾಯಿತು. ಘಟನೆಯಿಂದಾಗಿ ಕೆಲಕಾಲ ಸ್ಥಳದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಖನ್ ನಿವಾಸಕ್ಕೆ ಸಂಸದ ಜಗದೀಶ ಶೆಟ್ಟರ್ ಭೇಟಿ
13ನೇ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ ಶಿಪ್‌ಗೆ ಚಾಲನೆ