ಮೂಲ್ಕಿ: ಪ್ಪನಾಡು ದೇವಸ್ಥಾನದಲ್ಲಿ ಕಳೆದ ವರ್ಷದ ಜಾತ್ರಾ ಮಹೋತ್ಸವ ಸಂದರ್ಭ ನಡೆದ ರಥ ಅವಘಡದ ಬಳಿಕ ದೇವಸ್ಥಾನದಲ್ಲಿ ಪ್ರಶ್ನಾ ಚಿಂತನೆ ಹಾಗೂ ಪ್ರಾಯಶ್ಚಿತ ಕಾರ್‍ಯಕ್ರಮಗಳು ನಡೆದಿದ್ದವು. ನೂತನ ರಥ ನಿರ್ಮಾಣಕ್ಕೆ 3 ವರ್ಷ ತಗುಲಲಿದ್ದು, ಹಳೆಯ ಬ್ರಹ್ಮ ರಥ ದುರಸ್ತಿಗೆ ದಾನಿಗಳು ಮುಂದೆ ಬಂದಿದ್ದು, ಹಳೆಯ ಬ್ರಹ್ಮ ರಥ ದುರಸ್ತಿ ಮಾಡಿ ಮುಂದಿನ ಜಾತ್ರಾ ಮಹೋತ್ಸವದ ದಿನಗಳಲ್ಲಿ ಉಪಯೋಗಿಸುವ ಬಗ್ಗೆ ಭಕ್ತಾದಿಗಳು ಸಲಹೆ ಸೂಚನೆ ನೀಡಬೇಕೆಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಾರ್‍ಯ ನಿರ್ವಹಣಾಧಿಕಾರಿ ಶ್ವೇತ ಪಳ್ಳಿ ಹೇಳಿದರು.
ಸಭೆಯಲ್ಲಿ ನಡೆದ ಭಕ್ತರ ತೀರ್ಮಾನದಂತೆ ಹಳೆ ಬ್ರಹ್ಮರಥ ದುರಸ್ತಿ ಮಾಡಿ ಜಾತ್ರೆಯಲ್ಲಿ ರಥೋತ್ಸವ ನಡೆಸಿ ಬ್ರಹ್ಮರಥವನ್ನು ಸಾಂಕೇತಿಕವಾಗಿ ಎಳೆದು ಬಳಿಕ ದೇವರನ್ನು ವಿಮಾನ ರಥದಲ್ಲಿ ಕುಳ್ಳಿರಿಸಿ ದೇವಸ್ಥಾನದ ಸುತ್ತಲೂ ವಿಮಾನ ರಥ ಎಳೆಯಲು ತೀರ್ಮಾನಿಸಲಾಯಿತು. ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ, ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್, ಮಾಜಿ ಆಡಳಿತ ಮೊಕ್ತೇಸರ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಅಭಿವೃದ್ಧಿ ಸಮಿತಿಯ ವೇ.ಮೂ. ವಾದಿರಾಜ ಉಪಾಧ್ಯಾಯ ಕೊಲಕಾಡಿ, ಅತುಲ್ ಕುಡ್ಡ, ಕೊಲ್ನಾಡುಗುತ್ತು ರಾಮಚಂದ್ರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ದೇವಸ್ಥಾನದ ಕಾರ್‍ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ ಸ್ವಾಗತಿಸಿದರು. ಸುನಿಲ್ ಆಳ್ವ ವಂದಿಸಿದರು. ದೇವಸ್ಥಾನದ ನೂತನ ಅಭಿವೃದ್ಧಿ ಸಮಿತಿ ರಚನೆ ಮಾಡಿ ಸದಸ್ಯರಾಗಿ ರಾಮಚಂದ್ರ ನಾಯಕ್ ಕೊಲ್ನಾಡುಗುತ್ತು, ಅತುಲ್ ಕುಡ್ವ, ಚಂದ್ರಶೇಖರ ಸುವರ್ಣ, ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ, ಯದು ನಾರಾಯಣ್ ಶೆಟ್ಟಿ, ಚಂದ್ರಶೇಖರ ಕಾಸಪ್ಪಯ್ಯನವರ ಮನೆ, ಸುನಿಲ್ ಆಳ್ವ, ಸೂರ್ಯ ಕುಮಾರ್ ಹಳೆಯಂಗಡಿ, ಭಾಸ್ಕರ್ ಸಾಲ್ಯಾನ್, ಸಂತೋಷ್ ಕುಮಾರ್ ಹೆಗ್ಡೆ, ಸಂಜೀವ ದೇವಾಡಿಗ, ಸುಜಿತ್ ಎಸ್. ಸಾಲ್ಯಾನ್, ಪುರಂದರ ಶೆಟ್ಟಿಗಾರ್, ಉದಯ ಕುಮಾರ್ ಶೆಟ್ಟಿ ಅಧಿಧನ್, ಕರುಣಾಕರ ಶೆಟ್ಟಿ ನೇಮಕದ ಬಗ್ಗೆ ತಿಳಿಸಲಾಯಿತು.