ಶೃಂಗೇರಿ ಮಳೆ ನಡುವೆಯೂ ತಡೆಗೋಡೆ ದುರಸ್ತಿ ಕಾಮಗಾರಿ

KannadaprabhaNewsNetwork |  
Published : Jul 18, 2026, 12:15 AM IST
17 ಶ್ರೀ ಚಿತ್ರ 2 -ಶೃಂಗೇರಿ ತಾಲೂಕು ಕಚೇರಿ ಬಳಿ ಕುಸಿಯುವ ಹಂತದಲ್ಲಿರುವ ತಡೆಗೋಡೆ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿರುವುದು. | Kannada Prabha

ಸಾರಾಂಶ

ಶೃಂಗೇರಿಪಟ್ಟಣದ ತಾಲೂಕು ಕಚೇರಿ ಬಳಿ ಬಿರುಕು ಬಿಟ್ಟು, ಕುಸಿಯುವ ಹಂತದಲ್ಲಿದ್ದ ತಡೆಗೋಡೆ ದುರಸ್ತಿ ಕಾರ್ಯ ಮಳೆ ನಡುವೆಯೂ ಶುಕ್ರವಾರ ಮುಂದುವರಿಯಿತು.

ನಿಟ್ಟುಸಿರು ಬಿಟ್ಟ ಜನರಲ್ಲಿ ಮತ್ತೆ ಮಳೆಯಿಂದ ಆತಂಕ । ಹೆಚ್ಚುತ್ತಿರುವ ಅಪಾಯಕನ್ನಡಪ್ರಭ ವಾರ್ತೆ ಶೃಂಗೇರಿಪಟ್ಟಣದ ತಾಲೂಕು ಕಚೇರಿ ಬಳಿ ಬಿರುಕು ಬಿಟ್ಟು, ಕುಸಿಯುವ ಹಂತದಲ್ಲಿದ್ದ ತಡೆಗೋಡೆ ದುರಸ್ತಿ ಕಾರ್ಯ ಮಳೆ ನಡುವೆಯೂ ಶುಕ್ರವಾರ ಮುಂದುವರಿಯಿತು.ಬೆಳಿಗ್ಗೆಯಿಂದಲೇ ಹಿಟಾಚಿಗಳ ಮೂಲಕ ಮಣ್ಣು ತೆರವುಗೊಳಿಸಿ ಟಿಪ್ಪರ್ ಗಳಲ್ಲಿ ಬೇರೆಡೆಗೆ ಕೊಂಡೊಯ್ದು ಹಾಕುತ್ತಾ ಒಂದೆಡೆ ತಡೆಗೋಡೆ ಕುಸಿದು ಬೀಳದಂತೆ ಗೋಡೆಗೆ ಒತ್ತಡವಾಗಿದ್ದ ಮಣ್ಣು, ಕಾಂಕ್ರೀಟ್ ಸ್ಲಾಬ್ ಕಟಿಂಗ್ ಮಾಡಿ ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿತು.ಗುರುವಾರ ಮಣ್ಣು ತೆರವು, ಕಾಂಕ್ರೀಟ್ ಸ್ಲಾಬ್ ಕಟಿಂಗ್ ಕಾಮಗಾರಿ ಆರಂಭವಾದರೂ ಬೆಳಿಗ್ಗೆಯಿಂದ ಸುರಿದ ಭಾರೀ ಮಳೆ ಹಿನ್ನಲೆ ಮಧ್ಯಾಹ್ನ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ತಡೆಗೋಡೆಯೊಳಗೆ ಹಾಕಿರುವ ಮಣ್ಣು ತೆರವು ಗೊಳಿಸಿ, ಬಿರುಕು ಬಿಟ್ಟಿರುವವರೆಗೂ ತಡೆಗೋಡೆ ಕಟ್ ಮಾಡಿ, ಗುಡ್ಡ ಕುಸಿಯದಂತೆ ತಾತ್ಕಾಲಿಕ ಕಾರ್ಯ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಎಂಜಿನಿಯರ್ ಗಳು,ಅಧಿಕಾರಿಗಳು ಶುಕ್ರವಾರ ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದು ತೆರವು ಕಾರ್ಯ ಮುಂದುವರಿಸಿದರು.ಕೆಲದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದ ಬಿರುಕು ಬಿಟ್ಟು, ಕುಸಿಯುವ ಹಂತದಲ್ಲಿದ್ದ ಪಟ್ಟಣದ ತಾಲೂಕು ಕಚೇರಿ ಬಳಿ ಗೋರಿ ಗುಡ್ಡದ ತಡೆಗೋಡೆಯ ಮಣ್ಣು ತೆರವು ಕಾರ್ಯ ಮತ್ತೆ ಗುರುವಾರ ಆರಂಭಗೊಂಡಿದೆ. ಮಳೆ ಕ್ಷೀಣಗೊಂಡಾಗ ಮಣ್ಣು ತೆರವುಗೊಳಿಸುವ ಕಾಮಗಾರಿ ನಡೆದರೂ ಸ್ಥಗಿತಗೊಂಡಿತ್ತು ಇದೀಗ ಬೆಂಗಳೂರಿನಿಂದ ಹಿಟಾಚಿ ಬೂಮ್, ವಿಶೇಷ ಪರಿಣತರು, ತಂತ್ರಜ್ಞರು, ಕಾರ್ಮಿಕರ ತಂಡ ಹಾಗೂ ಕಾಂಕ್ರೀಟ್ ವಾಲ್ ಕಟಿಂಗ್ ಮಾಡುವ ಮಂಗಳೂರಿನ ತಂಡ ಬೆಳಿಗ್ಗೆ ಯಿಂದಲೇ ಕಾರ್ಯಾಚರಣೆ ತೀವ್ರಗೊಳಿಸಿದ್ದರಿಂದ ಟಿಪ್ಪರ್ ಗಳ ಮೂಲಕ ಮಣ್ಣು ಸಾಗಿಸುವ ಹಾಗೂ ಕಾಂಕ್ರಿಂಟ್ ಕಟಿಂಗ್ ಕೆಲಸ ಕೂಡ ಭರದಿಂದ ನಡೆಯುತ್ತಿದೆ.ಮಳೆಗೆ ಕಾರ್ಯಾಚರಣೆ ಸ್ಥಗಿತ:ವಾಲಿದ್ದ ತಡೆಗೋಡೆ ಕಾರ್ಯಾಚರಣೆ ನಡೆಯುತ್ತಿದ್ದಂತೆ ಮಳೆ ಆರಂಭಗೊಂಡಿದ್ದರಿಂದ ಮಣ್ಣು ತೆರವು, ಕಾಂಕ್ರೀಟ್ ಕಟಿಂಗ್ ಗೆ ಅಡೆತಡೆಯಾಗಿದ್ದರೂ ಕೆಲಕಾಲ ನಡೆಯಿತು. ಎಡಬಿಡದೇ ಮಳೆ ಅಬ್ಬರಿಸಲಾರಂಭಿಸಿದಾಗ ಕೆಲಸ ಸ್ಥಗಿತ ಗೊಳ್ಳಬೇಕಾಯಿತು. ಗುಡ್ಡದ ಮೇಲ್ಬಾಗದಿಂದ ಮಳೆ ನೀರು ಮತ್ತೆ ತಡೆಗೋಡೆಯತ್ತ ಹರಿಯುತ್ತಿದ್ದರಿಂದ ಇಡೀ ಗುಡ್ಡಕ್ಕೆ ಟಾರ್ಪಾಲು ಹಾಕಿ ಮುಚ್ಚಲಾಯಿತು. ಹಿಟಾಚಿಗಳು ಮಣ್ಣಿನ ಗುಡ್ಡದಿಂದ ಮೇಲೆ ಬರಲಾಗದೇ ಅಲ್ಲಲ್ಲಿಯೇ ನಿಲ್ಲ ಬೇಕಾಯಿತು. ತಡೆಗೋಡೆ ಕೆಳಭಾಗದಲ್ಲಿ ಕುಸಿಯದಂತೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಯಿತು.ಜನರಲ್ಲಿ ಹೆಚ್ಚಿದ ಆತಂಕ:ತಡೆಗೋಡೆ ಮಣ್ಣು ತೆರವು ಕಾರ್ಯಾಚರಣೆ ಆರಂಭವಾಗಿರುವ ನಡುವೆಯೇ ಬೆಳಿಗ್ಗೆಯಿಂದ ಮಳೆ ಬಿಡುವ ನೀಡದೇ ಸಂಜೆಯವರೆಗೂ ಸುರಿಯುತ್ತಿರುವುದು ಜನರಲ್ಲಿ ಮತ್ತೆ ಆತಂಕ ಹೆಚ್ಚಿಸಿದೆ. ಮೊದಲೇ ತಡೆಗೋಡೆಯಲ್ಲಿ ಬಿರುಕುಗಳು ಹೆಚ್ಚಾಗಿದೆ. ದಿನೇ ದಿನೇ ವಾಲುತ್ತಾ ಕುಸಿಯುವ ಹಂತದಲ್ಲಿದ್ದು ಕಾಮಗಾರಿ ನಡೆದು ನಿಟ್ಟುಸಿರು ಬಿಡಬಹುದು ಎನ್ನುವಷ್ಟರಲ್ಲಿ ಬಿಸಿಲು ಆವರಿಸಿದ್ದ ಶೃಂಗೇರಿಯಲ್ಲಿ ಮತ್ತೆ ಮಳೆ ಬರುತ್ತಿರುವುದು ಇನ್ನಷ್ಟು ಭೀತಿ ಮೂಡಿಸಿದೆ. ಗುಡ್ಡದ ಕೆಳಭಾಗದಲ್ಲಿ ವಾಸವಿದ್ದ ಕೆಲವರು ಸ್ಥಳಾಂತರ ಗೊಂಡಿದ್ದರೆ,ಇನ್ನು ಕೆಲವರು ಅಲ್ಲಿಯೇ ಇದ್ದು ತಡೆಗೋಡೆ ಸಮಸ್ಯೆ ಶೀಘ್ರ ಪರಿಹಾರವಾಗಲಿ ಎಂದು ಕಾಯುತ್ತಿದ್ದಾರೆ.ಗುರುವಾರ ತಡೆಗೋಡೆಗೆ ಬೆಂಬಲವಾಗಿದ್ದ ಕಾಂಕ್ರೀಟ್ ಸ್ಲಾಬ್ ಅರ್ಧ ಭಾಗ ಕಟ್‌ ಮಾಡಿ ತೆಗೆಯಲಾಗಿದೆ. ತಡೆಗೋಡೆಗೆ ತಾಗಿಕೊಂಡಂತೆ ಇದ್ದ ಕೆಲ ಭಾಗದ ಮಣ್ಣು ತೆಗೆದಿರುವುದರಿಂದ ಮಳೆ ಬಂದರೆ ಮತ್ತಷ್ಚು ಅಪಾಯವಾಗುವ ಸಾಧ್ಯತೆ ಹೆಚ್ಚಿದೆ. ತಾಲೂಕು ಕಚೇರಿ ಸುತ್ತಮುತ್ತ ಕೆಸರೇ ತುಂಬಿದ್ದು, ಮಳೆಯ ನೀರೆಲ್ಲ ಗುಡ್ಡದ ಕೆಳಗೆ ಹರಿಯುತ್ತಿರುವುದರಿಂದ ತಡೆಗೋಡೆ ಕುಸಿಯುವ ಆತಂಕ ಹೆಚ್ಚಿಸಿದೆ.17 ಶ್ರೀ ಚಿತ್ರ 2-ಶೃಂಗೇರಿ ತಾಲೂಕು ಕಚೇರಿ ಬಳಿ ಕುಸಿಯುವ ಹಂತದಲ್ಲಿರುವ ತಡೆಗೋಡೆ ಬಳಿ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರ ನಿರ್ವಹಣೆಗೆ ರೈತರಿಗೆ ಸಲಹೆ
ಬೈಕ್‌ನ ಗಾಲಿಗೆ ಬುರ್ಕಾ ಸಿಲುಕಿ ಮಹಿಳೆ ಸಾವು