ತಿಪಟೂರು: ಪ್ರಸ್ತುತ ಹವಾಮಾನ ವೈಪರಿತ್ಯವು ತುಮಕೂರು ಜಿಲ್ಲೆ ಹಾಗೂ ರಾಜ್ಯಾದ್ಯಂತ ಕಾಣಿಸುತ್ತಿದ್ದು, ಬರಗಾಲದ ಛಾಯೆಯು ಹೆಚ್ಚಾಗಿ ಉಲ್ಬಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ ರೈತರು ಸೂಕ್ತ ಬೆಳೆ ಪದ್ಧತಿ, ತಳಿಗಳ ಆಯ್ಕೆ, ಹೈನುಗಾರಿಕೆಯಲ್ಲಿ ಸೂಕ್ತ ನಿರ್ವಹಣ ಕ್ರಮಗಳನ್ನು ಅನುಸರಿಸಬೇಕಾದ ಅನಿವಾರ್ಯತೆಯಿದೆ ಎಂದು ಕೊನೆಹಳ್ಳಿ ಕೆವಿಕೆ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಡಾ. ಎಂ.ಹೆಚ್. ಶಂಕರ್ ತಿಳಿಸಿದ್ದಾರೆ. ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಮಳೆಯ ಅಭಾವದಿಂದ ಅನೇಕ ರೈತರು ಉದ್ದು, ಹೆಸರು, ಎಳ್ಳು ಇಂತಹ ಅನೇಕ ಬೆಳೆಗಳನ್ನು ಬೆಳೆಯದೇ ತಮ್ಮ ಜಮೀನನ್ನು ಪಾಳು ಬಿಟ್ಟುಕೊಂಡು ತೊಗರಿ ಮತ್ತು ರಾಗಿ ಬೆಳೆಯ ಬಿತ್ತನೆಗಾಗಿ ಮಳೆಯನ್ನು ಕಾಯುತ್ತಿದ್ದಾರೆ. ಜೊತೆಗೆ ಮುಖ್ಯವಾಗಿ ಜಾನುವಾರುಗಳಿಗೆ ಮೇವಿನ ಅಭಾವ ಸಹ ಉಲ್ಬಣವಾಗುತ್ತಿರುವುದರಿಂ ದ ಸೂಕ್ತ ಬರ ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕಾಗಿದೆ. ಇವುಗಳಲ್ಲಿ ಮುಖ್ಯವಾಗಿ ರೈತರು ರಾಗಿಯಲ್ಲಿ ಮಧ್ಯಮ ಮತ್ತು ಅಲ್ಪಾವಧಿ ತಳಿಗಳನ್ನು ಬಿತ್ತನೆ ಮಾಡುವುದರ ಜೊತೆಗೆ ಬರ ನಿರೋಧಕ ತಳಿಗಳ ಆಯ್ಕೆ ಸಹ ಪ್ರಮುಖವಾಗಿರುತ್ತದೆ. ರಾಗಿಯ ಮಧ್ಯಮ ಅವಧಿ ತಳಿಗಳಾದ ಜಿ.ಪಿ.ಯು-೨೮(ಬಿತ್ತನೆ ಸಮಯ: ಜುಲೈ-ಆಗಸ್ಟ್), ಕೆ.ಎಂ.ಆರ್-೩೦೧ (ಬಿತ್ತನೆ ಸಮಯ: ಜೂನ್-ಜುಲೈ), ಎಂ.ಎಲ್-೩೬೫(ಜೂನ್-ಆಗಸ್ಟ್), ಎಂ.ಎಲ್-೩೨೨(ಜೂನ್-ಜುಲೈ). ಅಲ್ಪಾವಧಿ ತಳಿಗಳಾದ ಜಿ.ಪಿ.ಯು-೪೫(ಎಲ್ಲಾ ಕಾಲದಲ್ಲೂ), ಜಿ.ಪಿ.ಯು-೪೮(ಏಪ್ರಿಲ್-ಆಗಸ್ಟ್), ಕೆ.ಎಂ.ಆರ್-೨೦೪(ಜುಲೈ- ಆಗಸ್ಟ್), ರಾಗಿಯ ಬದಲು ಸಿರಿಧಾನ್ಯಗಳಾದ ನವಣೆ, ಸಾಮೆ, ಬರಗೂ, ಊದಲು, ಹಾರಕ ಬೆಳೆಗಳನ್ನು ಬೆಳೆಯುವುದು ಸೂಕ್ತ. ಭತ್ತದಲ್ಲಿ ಏರೋಬಿಕ್ ಭತ್ತ ಬೆಳೆಯುವ ಪದ್ಧತಿ ಅಥವಾ ಪರ್ಯಾಯ ಒದ್ದೆ ಮತ್ತು ಒಣಗಿಸುವ ಪದ್ಧತಿ ಅಳವಡಿಸಿಕೊಳ್ಳಬೇಕು. ಅನೇಕ ರೈತರು ತುಮಕೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಯಲ್ಲಿ ಈ ವರ್ಷದಲ್ಲಿ ಅಡಿಕೆ ಮತ್ತು ತೆಂಗು ನಾಟಿ ಮಾಡುತ್ತಿದ್ದು, ಸಂಧಿಗ್ಧ ಪರಿಸ್ಥಿತಿಯಲ್ಲಿ ನೀರನ್ನು ಹಾಯುಸುವುದು ಅಥವಾ ತುಂತುರು ಮತ್ತು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು. ಮಿಶ್ರ ಬೆಳೆ ಪದ್ಧತಿ ಅನುಸರಿಸಬೇಕು. ಕೊಳವೆ ಬಾವಿಗಳನ್ನು ಅಂತರ್ಜಾಲ ಮಟ್ಟವನ್ನು ಹೆಚ್ಚಿಸಲು ಮರುಪೂರಣ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಜಮೀನಿನಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿಕೊಳ್ಳಬೇಕು. ದೀರ್ಘಾವಧಿ ತೋಟಗಾರಿಕಾ ಬೆಳೆಗಳಾದ ಗೋಡಂಬಿ, ನಿಂಬೆ, ಹುಣಸೆ, ಸೀಬೆ ಇತ್ಯಾದಿಗಳನ್ನು ಕಡಿಮೆ ನೀರಾವರಿಯಲ್ಲಿ ಬೆಳೆಯಬಹುದಾಗಿದೆ. ಮಲ್ಚಂಗ್ ಅಥವಾ ಬೆಳೆಗಳ ಬುಡಕ್ಕೆ ಒಣ ಹುಲ್ಲು, ತೆಂಗಿನ ಸಿಪ್ಪೆಯ ಒದಿಕೆ ಹಾಕಿ ತೇವಾಂಶ ಕಾಪಾಡುವುದು. ಹೈನುಗಾರಿಕೆಯಲ್ಲಿ ಸೂಕ್ತ ಮೇವಿನ ಬೆಳೆಗಳಾದ ಸಿ.ಓ.ಎಫ್.ಎಸ್-೩೧, ಸಿ.ಓ.ಎಫ್.ಎಸ್-೨೯, ಸೂಪರ್ ನೇಪಿಯರ್ ಇತ್ಯಾದಿಗಳ ಆಯ್ಕೆ. ಜಾನುವಾರುಗಳಿಗೆ ಇಲಾಖೆ ವತಿಯಿಂದ ಕೊಡುವ ಸೂಕ್ತ ಚುಚ್ಚು ಮದ್ದುಗಳ ಲಸಿಕೆ ಹಾಕಿಸುವುದು. ಬಿಸಿಲಿನಲ್ಲಿ ಹೆಚ್ಚಾಗಿ ಹಸು, ಕುರಿ, ಮೇಕೆಗಳನ್ನು ಬಿಡಬಾರದು. ಕಡಿಮೆ ಅವಧಿಯ ೬ ತಿಂಗಳ ಗಿಪ್ಟ್ ತಿಲೋಪಿಯ ತಳಿಯ ಮೀನು ಸಾಕಾಣಿಕೆ. ಸರ್ಕಾರದ ಕೃಷಿ ಭಾಗ್ಯ ಯೋಜನೆ ಅಳವಡಿಕೆ, ಬೆಳೆ ವಿಮೆ, ಜಾನುವಾರು ವಿಮೆ ಮಾಡಿಸುವುದು. ಹೀಗೆ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಸುಸ್ಥಿರ ಆದಾಯವನ್ನು ಗಳಿಸುವುದು ಸೂಕ್ತವಾಗಿದ್ದು ಕಡಿಮೆ ಮಳೆ ಬಿದ್ದರೂ ರೈತರು ಎದೆಗುಂದದೆ ಈ ಮೇಲಿನ ಕ್ರಮಗಳನ್ನು ಅನುಸರಿಸುವುದು ಬರನಿರ್ವಹಣೆ ಸಾಧ್ಯವಿದೆ ಎಂದು ಅವರು ತಿಳಿಸಿದ್ದಾರೆ.ತಿಪಟೂರು: ಪ್ರಸ್ತುತ ಹವಾಮಾನ ವೈಪರಿತ್ಯವು ತುಮಕೂರು ಜಿಲ್ಲೆ ಹಾಗೂ ರಾಜ್ಯಾದ್ಯಂತ ಕಾಣಿಸುತ್ತಿದ್ದು, ಬರಗಾಲದ ಛಾಯೆಯು ಹೆಚ್ಚಾಗಿ ಉಲ್ಬಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ ರೈತರು ಸೂಕ್ತ ಬೆಳೆ ಪದ್ಧತಿ, ತಳಿಗಳ ಆಯ್ಕೆ, ಹೈನುಗಾರಿಕೆಯಲ್ಲಿ ಸೂಕ್ತ ನಿರ್ವಹಣ ಕ್ರಮಗಳನ್ನು ಅನುಸರಿಸಬೇಕಾದ ಅನಿವಾರ್ಯತೆಯಿದೆ ಎಂದು ಕೊನೆಹಳ್ಳಿ ಕೆವಿಕೆ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಡಾ. ಎಂ.ಹೆಚ್. ಶಂಕರ್ ತಿಳಿಸಿದ್ದಾರೆ. ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಮಳೆಯ ಅಭಾವದಿಂದ ಅನೇಕ ರೈತರು ಉದ್ದು, ಹೆಸರು, ಎಳ್ಳು ಇಂತಹ ಅನೇಕ ಬೆಳೆಗಳನ್ನು ಬೆಳೆಯದೇ ತಮ್ಮ ಜಮೀನನ್ನು ಪಾಳು ಬಿಟ್ಟುಕೊಂಡು ತೊಗರಿ ಮತ್ತು ರಾಗಿ ಬೆಳೆಯ ಬಿತ್ತನೆಗಾಗಿ ಮಳೆಯನ್ನು ಕಾಯುತ್ತಿದ್ದಾರೆ. ಜೊತೆಗೆ ಮುಖ್ಯವಾಗಿ ಜಾನುವಾರುಗಳಿಗೆ ಮೇವಿನ ಅಭಾವ ಸಹ ಉಲ್ಬಣವಾಗುತ್ತಿರುವುದರಿಂ ದ ಸೂಕ್ತ ಬರ ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕಾಗಿದೆ. ಇವುಗಳಲ್ಲಿ ಮುಖ್ಯವಾಗಿ ರೈತರು ರಾಗಿಯಲ್ಲಿ ಮಧ್ಯಮ ಮತ್ತು ಅಲ್ಪಾವಧಿ ತಳಿಗಳನ್ನು ಬಿತ್ತನೆ ಮಾಡುವುದರ ಜೊತೆಗೆ ಬರ ನಿರೋಧಕ ತಳಿಗಳ ಆಯ್ಕೆ ಸಹ ಪ್ರಮುಖವಾಗಿರುತ್ತದೆ. ರಾಗಿಯ ಮಧ್ಯಮ ಅವಧಿ ತಳಿಗಳಾದ ಜಿ.ಪಿ.ಯು-೨೮(ಬಿತ್ತನೆ ಸಮಯ: ಜುಲೈ-ಆಗಸ್ಟ್), ಕೆ.ಎಂ.ಆರ್-೩೦೧ (ಬಿತ್ತನೆ ಸಮಯ: ಜೂನ್-ಜುಲೈ), ಎಂ.ಎಲ್-೩೬೫(ಜೂನ್-ಆಗಸ್ಟ್), ಎಂ.ಎಲ್-೩೨೨(ಜೂನ್-ಜುಲೈ). ಅಲ್ಪಾವಧಿ ತಳಿಗಳಾದ ಜಿ.ಪಿ.ಯು-೪೫(ಎಲ್ಲಾ ಕಾಲದಲ್ಲೂ), ಜಿ.ಪಿ.ಯು-೪೮(ಏಪ್ರಿಲ್-ಆಗಸ್ಟ್), ಕೆ.ಎಂ.ಆರ್-೨೦೪(ಜುಲೈ- ಆಗಸ್ಟ್), ರಾಗಿಯ ಬದಲು ಸಿರಿಧಾನ್ಯಗಳಾದ ನವಣೆ, ಸಾಮೆ, ಬರಗೂ, ಊದಲು, ಹಾರಕ ಬೆಳೆಗಳನ್ನು ಬೆಳೆಯುವುದು ಸೂಕ್ತ. ಭತ್ತದಲ್ಲಿ ಏರೋಬಿಕ್ ಭತ್ತ ಬೆಳೆಯುವ ಪದ್ಧತಿ ಅಥವಾ ಪರ್ಯಾಯ ಒದ್ದೆ ಮತ್ತು ಒಣಗಿಸುವ ಪದ್ಧತಿ ಅಳವಡಿಸಿಕೊಳ್ಳಬೇಕು. ಅನೇಕ ರೈತರು ತುಮಕೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಯಲ್ಲಿ ಈ ವರ್ಷದಲ್ಲಿ ಅಡಿಕೆ ಮತ್ತು ತೆಂಗು ನಾಟಿ ಮಾಡುತ್ತಿದ್ದು, ಸಂಧಿಗ್ಧ ಪರಿಸ್ಥಿತಿಯಲ್ಲಿ ನೀರನ್ನು ಹಾಯುಸುವುದು ಅಥವಾ ತುಂತುರು ಮತ್ತು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು. ಮಿಶ್ರ ಬೆಳೆ ಪದ್ಧತಿ ಅನುಸರಿಸಬೇಕು. ಕೊಳವೆ ಬಾವಿಗಳನ್ನು ಅಂತರ್ಜಾಲ ಮಟ್ಟವನ್ನು ಹೆಚ್ಚಿಸಲು ಮರುಪೂರಣ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಜಮೀನಿನಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿಕೊಳ್ಳಬೇಕು. ದೀರ್ಘಾವಧಿ ತೋಟಗಾರಿಕಾ ಬೆಳೆಗಳಾದ ಗೋಡಂಬಿ, ನಿಂಬೆ, ಹುಣಸೆ, ಸೀಬೆ ಇತ್ಯಾದಿಗಳನ್ನು ಕಡಿಮೆ ನೀರಾವರಿಯಲ್ಲಿ ಬೆಳೆಯಬಹುದಾಗಿದೆ. ಮಲ್ಚಂಗ್ ಅಥವಾ ಬೆಳೆಗಳ ಬುಡಕ್ಕೆ ಒಣ ಹುಲ್ಲು, ತೆಂಗಿನ ಸಿಪ್ಪೆಯ ಒದಿಕೆ ಹಾಕಿ ತೇವಾಂಶ ಕಾಪಾಡುವುದು. ಹೈನುಗಾರಿಕೆಯಲ್ಲಿ ಸೂಕ್ತ ಮೇವಿನ ಬೆಳೆಗಳಾದ ಸಿ.ಓ.ಎಫ್.ಎಸ್-೩೧, ಸಿ.ಓ.ಎಫ್.ಎಸ್-೨೯, ಸೂಪರ್ ನೇಪಿಯರ್ ಇತ್ಯಾದಿಗಳ ಆಯ್ಕೆ. ಜಾನುವಾರುಗಳಿಗೆ ಇಲಾಖೆ ವತಿಯಿಂದ ಕೊಡುವ ಸೂಕ್ತ ಚುಚ್ಚು ಮದ್ದುಗಳ ಲಸಿಕೆ ಹಾಕಿಸುವುದು. ಬಿಸಿಲಿನಲ್ಲಿ ಹೆಚ್ಚಾಗಿ ಹಸು, ಕುರಿ, ಮೇಕೆಗಳನ್ನು ಬಿಡಬಾರದು. ಕಡಿಮೆ ಅವಧಿಯ ೬ ತಿಂಗಳ ಗಿಪ್ಟ್ ತಿಲೋಪಿಯ ತಳಿಯ ಮೀನು ಸಾಕಾಣಿಕೆ. ಸರ್ಕಾರದ ಕೃಷಿ ಭಾಗ್ಯ ಯೋಜನೆ ಅಳವಡಿಕೆ, ಬೆಳೆ ವಿಮೆ, ಜಾನುವಾರು ವಿಮೆ ಮಾಡಿಸುವುದು. ಹೀಗೆ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಸುಸ್ಥಿರ ಆದಾಯವನ್ನು ಗಳಿಸುವುದು ಸೂಕ್ತವಾಗಿದ್ದು ಕಡಿಮೆ ಮಳೆ ಬಿದ್ದರೂ ರೈತರು ಎದೆಗುಂದದೆ ಈ ಮೇಲಿನ ಕ್ರಮಗಳನ್ನು ಅನುಸರಿಸುವುದು ಬರನಿರ್ವಹಣೆ ಸಾಧ್ಯವಿದೆ ಎಂದು ಅವರು ತಿಳಿಸಿದ್ದಾರೆ.
ಬರ ನಿರ್ವಹಣೆಗೆ ರೈತರಿಗೆ ಸಲಹೆ
ರೈತರು ಸೂಕ್ತ ಬೆಳೆ ಪದ್ಧತಿ, ತಳಿಗಳ ಆಯ್ಕೆ, ಹೈನುಗಾರಿಕೆಯಲ್ಲಿ ಸೂಕ್ತ ನಿರ್ವಹಣ ಕ್ರಮಗಳನ್ನು ಅನುಸರಿಸಬೇಕಾದ ಅನಿವಾರ್ಯತೆಯಿದೆ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.