ತುಳಿತಕ್ಕೆ ಒಳಗಾದವರಿಗೆ ಸಮಾನತೆ ನೀಡಿದ ಬಸವಣ್ಣ

KannadaprabhaNewsNetwork |  
Published : May 01, 2025, 12:50 AM IST
57 | Kannada Prabha

ಸಾರಾಂಶ

ಬಸವಣ್ಣನವರ ತತ್ವ, ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಕಾಯಕಕ್ಕೆ ನಿಷ್ಠರಾಗಿ

ಕನ್ನಡಪ್ರಭ ವಾರ್ತೆ ನಂಜನಗೂಡು 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ತುಳಿತಕ್ಕೆ ಒಳಗಾದವರಿಗೆ ಸಮಾನತೆ ನೀಡಿದ ಮಹಾತ್ಮ ಬಸವಣ್ಣನವರು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.ಪಟ್ಟಣದ ಆಡಳಿತ ಸೌಧದ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬಸವಣ್ಣನವರ ತತ್ವ, ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಕಾಯಕಕ್ಕೆ ನಿಷ್ಠರಾಗಿ ತಮ್ಮ ಕ್ಷೇತ್ರದಲ್ಲಿ ದುಡಿಯುವಂತಾದರೆ ಬಸವಣ್ಣನವರನ್ನು ಗೌರವಿಸಿದಂತೆ, ಅವರು ಹನ್ನೆರಡನೆ ಶತಮಾನದಲ್ಲಿ ಪಾಲಿಸಿದ ಕಾಯಕ ನಿಷ್ಠೆ, ತುಳಿತಕ್ಕೊಳಗಾದ ಸಮಾಜಗಳನ್ನು ಗುರ್ತಿಸಿ ಅವರಿಗೆ ಸಮಾನತೆ ದೊರಕಿಸಿ, ಸಮಾಜ ಸುಧಾರಣೆ ಮಾಡಿದ ಕ್ರಾಂತಿ ಪುರುಷ ಬಸವಣ್ಣನವರು, ಶಾಸಕನಾಗಿ ಜಾತ್ಯತೀತವಾಗಿ ಎಲ್ಲರನ್ನೂ ಒಳಗೊಂಡಂತೆ ನಿಸ್ವಾರ್ಥದಿಂದ ಕ್ಷೇತ್ರದ ಜನತೆಯ ಸೇವೆ ಮಾಡುತ್ತಿದ್ದೇನೆ, ಬುದ್ಧ, ಬಸವ, ಅಂಬೇಡ್ಕರ್ ಅವರ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದ್ದೇನೆ, ಇದರಿಂದ ತೃಪ್ತಿ ದೊರಕಿದೆ ಎಂದು ಹೇಳಿದರು.ಲಿಂಗಾಯಿತ, ವೀರಶೈವ ಮಹಾಸಭಾ ವತಿಯಿಂದ ಮೇ 25 ರಂದು ಅದ್ಧೂರಿಯಾಗಿ ಬಸವ ಜಯಂತಿ ಕಾರ್ಯಕ್ರಮ ಆಯೋಜಿಸಿದೆ, ಅಂದು ಪಟ್ಟಣದಲ್ಲಿ ಅದ್ಧೂರಿ ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ, ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶಾಸಕ ದರ್ಶನ್‌ ಧ್ರುವನಾರಾಯಣ ಲ್ಯಾಪ್ ಟಾಪ್ ವಿತರಿಸಿ, ಸನ್ಮಾನಿಸಿದರು.ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಾಲೂಕು ವೀರಶೈವ, ಲಿಂಗಾಯಿತ ಮಹಾಸಭಾ ಅಧ್ಯಕ್ಷ ಕೆಂಪಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹೇಶ್, ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ, ಉಪಾಧ್ಯಕ್ಷೆ ರೆಹೆನಬಾನು, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕೆ. ಮಾರುತಿ, ಮುಖಂಡರಾದ ಎಂ. ಮಾದಪ್ಪ, ಎಚ್.ಕೆ. ಚೆನ್ನಪ್ಪ, ಶಿವಪ್ಪದೇವರು, ನಗರಸಭಾ ಸದಸ್ಯರಾದ ಗಾಯಿತ್ರಿ, ಶ್ವೇತಲಕ್ಷ್ಮಿ, ರವಿ, ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ತಾಪಂ ಜೆರಾಲ್ಡ್ ರಾಜೇಶ್, ನಗರಸಭೆ ಆಯುಕ್ತ ವಿಜಯ್, ಬಿಇಒ ಮಹೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ