ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಜಗಜ್ಯೋತಿ ಬಸವಣ್ಣ ಹಾಗೂ ಹೇಮರೆಡ್ಡಿ ಮಲ್ಲಮ್ಮ ನವರ ಜಯಂತಿ ಕಾರ್ಯಕ್ರಮಕ್ಕೆ ಅವರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಪ್ರಜಾಪ್ರಭುತ್ವದ ರೂವಾರ ಬಸವಣ್ಣಬಸವಣ್ಣ ನವರ ಸಿದ್ದಾಂತಗಳ ಮೇಲೆ ಇಂದಿನ ನಮ್ಮ ಪ್ರಜಾಪ್ರಭುತ್ವ ನಿಂತಿದೆ. ದೊಡ್ಡ ದೊಡ್ಡ ಮಹಾ ಗ್ರಂಥಗಳಲ್ಲಿರುವ ಆದರ್ಶಗಳ ಸಾರಂಶವನ್ನು ವಚನಗಳ ಮೂಲಕ ಸರಳ ವಿಧಾನದಲ್ಲಿ ಜನರಿಗೆ ತಲುಪಿಸುವ ಕಾರ್ಯವನ್ನು ಬಸವಣ್ಣ ಮಾಡಿದ್ದಾರೆ. ಸಮಾಜದಲ್ಲಿ ರಾಜಕೀಯ, ಆರ್ಥಿಕ, ಶೆಕ್ಷಣಿಕ ಮತ್ತು ಸಾಮಾಜಿಕ ಸಮಾನತೆ ಎಲ್ಲರಿಗೂ ಸಮಾನ ಎಂದು ಬಸವಣ್ಣನವರು ಸಾರಿದರು. ಅಂದಿನ ಅನುಭವ ಮಂಟಪವು ಇಂದಿನ ಸಂಸತ್ ಹಾಗೂ ವಿಧಾನ ಪರಿಷತ್‌ಗೆ ಸಮ ಎಂದು ತಿಳಿಸಿದರು. ಮಹಿಳೆಯರಿಗೆ ಮಾದರಿ ಮಲ್ಲಮ್ಮ
ಪ್ರಣಿಗಳ ಬಗ್ಗೆ ದಯೆ ತೋರಿ
ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವುದು ಎಲ್ಲರ ಕರ್ತವ್ಯ ಎಂಬುದು ಇಂದಿಗೂ ಪ್ರಸ್ತುತವಾಗಿದೆ. ಬರಗಾಲದ ಸಂದರ್ಭದಲ್ಲಿ ನೀರಿಗಾಗಿ ಆಹಾರಕ್ಕಾಗಿ ಪ್ರಾಣಿಗಳು ಕಾಡಿನಿಂದ ಹಳ್ಳಿಗಳತ್ತ ನೀರು ಆಹಾರ ಅರಸಿ ಬರುವ ಸಂದರ್ಭದಲ್ಲಿ ನಾವು ಪ್ರಾಣಿದಯೆಯುಳ್ಳವರಾಗಿ ಅವುಗಳಿಗೂ ಈ ಪರಿಸರದ ಮೇಲೆ ಹಕ್ಕಿದೆ ಎಂದು ಜೀವದಯೆ ತೋರಿ ನೆರವಾಗುವುದಾದರೆ ಬಸವಣ್ಣನವರ ಬೋಧನೆ ಅನುಷ್ಠಾನಗೊಂಡಂತೆ ಎಂದರು.ಬುದ್ಧ, ಬಸವ, ಅಂಬೇಡ್ಕರ್ ರವರು ಸಮಾನತೆಯೆಂಬ ಒಂದೇ ವಿಚಾರವನ್ನು ಅವರವರ ಕಾಲಕ್ಕೆ ಅನುಗುಣವಾಗಿ ವಿಭಿನ್ನವಾಗಿ ನಿರೂಪಿಸಿದರು. ಅನುಭವ ಮಂಟಪವು ಹಲವರ ಅನುಭವಗಳನ್ನು ವ್ಯಕ್ತಪಡಿಸಲು ಸಿಕ್ಕಿದ ಒಂದು ಬೃಹತ್ ವೇದಿಕೆಯಾಗಿತ್ತು.ಇವರ ತತ್ವಗಳನ್ನು ಹಾಗೂ ವಿಚಾರಗಳನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿದೆ.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದ ರೈ,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶೇಷಾದ್ರಿ,ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಪ್ರತಿನಿಧಿ ಸದಾಶಿವ , ವೀರಶೈವ ಸೇವಾ ಸಮಾಜದ ಮುಖಂಡರಾದ ಪರಶಿವಮೂರ್ತಿ, ಗುಬ್ಬಿಶೆಟ್ಟರು, ರಾಜೇಂದ್ರ ಕುಮಾರ್, ಕಿರಣ್, ಪ್ರಜ್ವಲ್, ಚೇತನ್, ಸಮುದಾಯದ ಮುಖ್ಯಸ್ಥರು,ಪದಾಧಿಕಾರಿಗಳು ಸಾರ್ವಜನಿಕರು ಇದ್ದರು.