- ಶಿವಯೋಗಿ ಮಂದಿರದಲ್ಲಿ ಬಸವ ಸಂಸ್ಕೃತಿ ಅಭಿಯಾನ ಜಾಗೃತಿ ಕಾರ್ಯಕ್ರಮ । ಅಣಬೇರು ರಾಜಣ್ಣ ಚಾಲನೆ - - -
ಬಸವ ತತ್ವಗಳನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ನಾಡಿನಾದ್ಯಂತ ಬಸವ ಸಂಸ್ಕೃತಿ ಅಭಿಯಾನವನ್ನು ಸೆ. 15 ರಂದು ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದೇವೆ ಎಂದು ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ನುಡಿದರು.
ನಗರದ ಜಯದೇವ ವೃತ್ತದ ಶಿವಯೋಗಿ ಮಂದಿರ ಆವರಣದಲ್ಲಿ ಶುಕ್ರವಾರ ಸಂಜೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಆಯೋಜಿಸಿದ್ದ ಬಸವ ಸಂಸ್ಕೃತಿ ಅಭಿಯಾನದ ಜಾಗೃತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಬಸವ ತತ್ವವನ್ನು ತಿಳಿಸುವುದು ಅಭಿಯಾನದ ಮುಖ್ಯ ಗುರಿಯಾಗಿದೆ. ಬಸವ ತತ್ವಗಳು ಕೇವಲ ವೀರಶೈವರ, ಲಿಂಗಾಯತರ ಸ್ವತ್ತಲ್ಲ. ಅವು ಇಡೀ ಮಾನವ ಕುಲದ ಆಸ್ತಿಯಾಗಿವೆ. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ....ಸೂತ್ರಗಳು ಇಡೀ ಮನುಕುಲದ ಸತ್ವಗಳು ಬಸವ ತತ್ವದಲ್ಲಿದೆ. ಯಾರು ಬಸವ ತತ್ವಗಳನ್ನು ಆಚರಣೆ ಮಾಡುತ್ತಾರೋ ಅವರು ಜೀವನದಲ್ಲಿ ಸುಖ- ಶಾಂತಿ- ನೆಮ್ಮದಿ- ಸಮೃದ್ಧಿ ನ್ನು ಕಾಣುತ್ತಾರೆ ಎಂದರು.
ಸೆ.1ರಿಂದ ವಿಜಯಪುರದ ಬಸವನ ಬಾಗೇವಾಡಿಯಿಂದ ಪ್ರಾರಂಭವಾಗಿ ಬೆಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ. ಬರುವ ಅಕ್ಟೋಬರ್ 5ರಂದು ಪ್ರತಿಯೊಂದು ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. 2ರಂದು ಕಲ್ಬುರ್ಗಿ, 3ರಂದು ಬೀದರ್, 4ರಂದು ಯಾದಗಿರಿ, 5ರಂದು ರಾಯಚೂರಿನಲ್ಲಿ ನಡೆಯುತ್ತಿದೆ. ಎಲ್ಲ ಕಡೆಗೆ ಭಕ್ತರು ಅಭೂತಪೂರ್ವಕ ಸ್ವಾಗತ ನೀಡುತ್ತಿದ್ದಾರೆ. ಹಾಗಾಗಿ ಇಂತಹ ಕಾರ್ಯಕ್ರಮಗಳು, ಒಳ್ಳೆಯ ವಿಚಾರಗಳು ಜನರಿಗೆ ನೀಡುವಂತಹ ಕಾರ್ಯವನ್ನು ನಾವೆಲ್ಲರೂ ಮಾಡಬೇಕಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ಎಂ.ಶಿವಕುಮಾರ, ಅಭಾವೀಮ ಅಧ್ಯಕ್ಷ ಐಗೂರು ಚಂದ್ರಶೇಖರ, ಆವರಗೆರೆ ರುದ್ರಮುನಿ, ಡಾ. ಎಚ್.ಎಸ್. ಮಂಜುನಾಥ ಕುರ್ಕಿ, ರುದ್ರಗೌಡ, ವಿಶ್ವೇಶ್ವರಯ್ಯ, ಮೆಳ್ಳೆಕಟ್ಟೆ ನಾಗರಾಜಪ್ಪ, ಹಿರಿಯ ವಕೀಲ ಅನೀಸ್ ಪಾಷ, ಮಂಜುನಾಥ್ ಕರೀಗೌಡ, ಮರುಳ ಸಿದ್ದಯ್ಯ, ಪರಮೇಶ್ವರಪ್ಪ, ಶಶಿಧರ, ಶಿವನಗೌಡ ಪಾಟೀಲ್, ವನಜ ಮಹಾಲಿಂಗಯ್ಯ, ಮಮತಾ ನಾಗರಾಜ್, ಕುಸುಮ ಲೋಕೇಶ, ಪ್ರೇಮಾ ಮಂಜುನಾಥ್, ವೀಣಾ ಮಂಜುನಾಥ್, ಮಧುಮತಿ ಗಿರೀಶ್, ಶೋಭಾ, ಭಕ್ತರು ಭಾಗವಹಿಸಿದ್ದರು.
-5ಕೆಡಿವಿಜಿ46: