12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸಮಾನತೆ, ಕಾಯಕ ಮತ್ತು ದಾಸೋಹ ತತ್ವಗಳ ಮೂಲಕ ಹೊಸ ಸಮಾಜವನ್ನು ಕಟ್ಟಿದರು. ಅಂತಹ ಮಹಾನ್ ಚೇತನರ ಸ್ಮರಣೆ ಮಾಡುವುದು ನಮ್ಮೆಲ್ಲರ ಭಾಗ್ಯ ಎಂದು ನಾಡೋಜ ಬಸವಲಿಂಗ ಪಟ್ಟದ್ದೇವರು ನುಡಿದರು.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸಮಾನತೆ, ಕಾಯಕ ಮತ್ತು ದಾಸೋಹ ತತ್ವಗಳ ಮೂಲಕ ಹೊಸ ಸಮಾಜವನ್ನು ಕಟ್ಟಿದರು. ಅಂತಹ ಮಹಾನ್ ಚೇತನರ ಸ್ಮರಣೆ ಮಾಡುವುದು ನಮ್ಮೆಲ್ಲರ ಭಾಗ್ಯ ಎಂದು ನಾಡೋಜ ಬಸವಲಿಂಗ ಪಟ್ಟದ್ದೇವರು ನುಡಿದರು.
47ನೆಯ ಶರಣ ಕಮ್ಮಟ ಹಾಗೂ ಅನುಭವಮಂಟಪ ಉತ್ಸವ-2026 ನಿಮಿತ್ತ ಅನುಭವ ಮಂಟಪದಲ್ಲಿ ಬಸವ ಗುರುಪೂಜೆ ಹಾಗೂ ವಚನ ಪಠಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಬಸವಪೂಜೆ ಎಂದರೆ ಕೇವಲ ಬಾಹ್ಯ ಆಚರಣೆಯಲ್ಲ, ಅದು ನಮ್ಮ ಅಂತರಂಗವನ್ನು ಶುದ್ಧಗೊಳಿಸಿಕೊಳ್ಳುವ ಮಾರ್ಗ. ವಚನ ಸಾಹಿತ್ಯ ಬದುಕಿನ ಸಾರವನ್ನು ಸರಳ ಕನ್ನಡದಲ್ಲಿ ತಿಳಿಸುವ ಅಮೃತವಾಗಿದೆ. ಕಾಯಕವೇ ಕೈಲಾಸ ಎಂಬ ತತ್ವದಂತೆ ನಾವು ಮಾಡುವ ಪ್ರತಿಯೊಂದು ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು.
ಇಂದು ಪಠಿಸಿದ ವಚನಗಳ ತತ್ವಗಳನ್ನು ಕೇವಲ ಕೇಳುವುದಕ್ಕೆ ಸೀಮಿತಗೊಳಿಸದೆ, ನಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಈ ಪೂಜೆಗೆ ನಿಜವಾದ ಸಾರ್ಥಕತೆ ಬರುತ್ತದೆ ಎಂದು ಆಶೀರ್ವಚನ ನೀಡಿದರು.
ಪೂಜ್ಯ ಗುರುಬಸವ ಪಟ್ಟದ್ದೇವರು, ಪೂಜ್ಯ ಶಿವಾನಂದ ಸ್ವಾಮಿಗಳು, ಪೂಜ್ಯ ಮಹಾಲಿಂಗ ಸ್ವಾಮಿಗಳು, ಪೂಜ್ಯ ಬಸವಲಿಂಗ ಸ್ವಾಮಿಗಳು ಮುಂತಾದ ಪೂಜ್ಯರು ಹಾಗೂ ಅಕ್ಕಮಹಾದೇವಿ ಪೀಠದ ಸಕಲ ಶರಣೆಯರು ಉಪಸ್ಥಿತರಿದ್ದರು.
ಸಿದ್ಧಣ್ಣ ಲಂಗೋಟಿ ದಂಪತಿಗಳಿಂದ ಷಟ್ಸ್ಥಲ ಧ್ವಜಾರೋಹಣ ನಡೆಯಿತು. ಶಿವಯೋಗಿ ಸಿದ್ಧರಾಮೇಶ್ವರ ವೇದಿಕೆಯನ್ನು ಸುಭಾಷಚಂದ್ರ ನಾಗರಾಳೆ ಅವರಿಂದ ಉದ್ಘಾಟನೆ ಮಾಡಲಾಯಿತು. ಮಹಾ ದಾಸೋಹಿ ಶರಣ ಬಸವೇಶ್ವರ ಪ್ರಸಾದ ಮಂಟಪದ ಉದ್ಘಾಟನೆಯನ್ನು ಶರಣ ಬಸವರಾಜ ಸ್ವಾಮಿ ಅವರಿಂದ ನಡೆಯಿತು.
ಪೂಜ್ಯ ಸಿದ್ಧಗಂಗೆಯ ಶಿವಕುಮಾರ ಮಹಾಸ್ವಾಮಿಗಳ ಮಹಾದ್ವಾರದ ಉದ್ಘಾಟನೆಯನ್ನು ಚನ್ನಬಸವಣ್ಣ ಬಳತೆ ಅವರು ಉದ್ಘಾಟಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.