ಸಂಸ್ಕಾರವಂತ ಸಮಾಜ ನಿರ್ಮಿಸಲು ಬಸವಲಿಂಗ ಸ್ವಾಮೀಜಿ ಸಲಹೆ

KannadaprabhaNewsNetwork |  
Published : Aug 03, 2024, 12:31 AM IST
ಚಿತ್ರಶೀರ್ಷಿಕೆ1mlk3ಮೊಳಕಾಲ್ಮುರು ಮೊಳಕಾಲ್ಮುರು ನೂತನ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ತಹಸೀಲ್ದಾರ್ ಟಿ.ಜಗದೀಶ್ ಉದ್ಘಾಟಿಸಿದರು. | Kannada Prabha

ಸಾರಾಂಶ

Basavalinga Swamiji's advice to build a cultured society

-ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಸಿದ್ದಯ್ಯನಕೋಟೆ ಶ್ರೀ ಬಸವಲಿಂಗ ಸ್ವಾಮೀಜಿ

-----

ಕನ್ನಡಪ್ರಭವಾರ್ತೆ ಮೊಳಕಾಲ್ಮುರು

ದುಶ್ಚಟಗಳಿಗೆ ದಾಸರಾಗಿ ಬದುಕು ಹಾಳು ಮಾಡಿಕೊಳ್ಳದೆ ಸಂಸ್ಕಾರವಂತ ಸಮಾಜ ನಿರ್ಮಾಣ ಮಾಡಬೇಕೆಂದು ಸಿದ್ದಯ್ಯನ ಕೋಟೆ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು. ತಾಲೂಕು ಆಡಳಿತ ಸೌಧದ ಆವರಣದಲ್ಲಿ ತಾಲೂಕು ಆಡಳಿತ ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾ ಮಠದ ಸಹಯೋಗದಲ್ಲಿ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ. ಮಹಾಂತ ಶಿವಯೋಗಿಗಳು ದುಶ್ಚಟಗಳಿಗೆ ದಾಸರಾಗಿ ದಿಕ್ಕು ತಪ್ಪುತ್ತಿರುವ ಸಮಾಜವನ್ನು ಸರಿ ದಾರಿಗೆ ತರುವ ಪ್ರಯತ್ನ ಮಾಡಿದರು.

ದುರ್ವ್ಯಸನಗಳು ಹಾಗೂ ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಸ್ಸು ಪರಿವರ್ತಿಸಿ ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು.

ತಹಸೀಲ್ದಾರ್ ಟಿ.ಜಗದೀಶ್ ಮಾತನಾಡಿ, ಶಾಲಾ ಮಕ್ಕಳು ತಮ್ಮ ಪೋಷಕರಿಗೆ ದುಷ್ಚಟಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿ ಹೇಳಿ ಇವುಗಳಿಂದ ದೂರವಿರಲು ಪ್ರೇರೇಪಿಸಬೇಕು. ದಿನಕ್ಕೊಂದು ಉತ್ತಮ ಕೆಲಸ ಮಾಡುವ ನಿರ್ಧಾರವನ್ನು ಕೈಗೊಳ್ಳುಬೇಕು ಎಂದರು.

ಚಲನ ಚಿತ್ರ ನಿರ್ದೇಶಕ ಜಿ.ಶ್ರೀನಿವಾಸಮೂರ್ತಿ, ವಿದ್ಯಾರ್ಥಿಗಳು ಸ್ವಾಮೀಜಿಯವರ ಉತ್ತಮ ಕಾರ್ಯ ಅರಿತು ಜಾಗೃತರಾಗಬೇಕು ಎಂದರು.

ಡಾ.ಮಹಾಂತ ಶಿವಯೋಗಿ ಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸ್ವಾಮೀಜಿ ಭಾವಚಿತ್ರ ಮೆರವಣಿಗೆ ನಡೆಸಿ ಸಾರ್ವಜನಿಕಲ್ಲಿ ಜಾಗೃತಿ ಮೂಡಿಸಲಾಯಿತು.

ಪಶು ಸಂಗೋಪನಾ ಇಲಾಖೆ ಇಎಎ ಡಾ.ರಂಗಸ್ವಾಮಿ, ಸಿಡಿಪಿಒ ನವೀನ್ ಕುಮಾರ್, ಅಬಕಾರಿ ಇಲಾಖೆ ಇನ್ಸ್‌ಪೆಕ್ಟರ್‌ ಮಹಮದ್ ಸಾದಿತ್ ವುಲ್ಲಾ, ಪಿಎಸ್‌ಐ ಜಿ.ಪಾಂಡುರಂಗ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪಟೇಲ್ ಪಾಪನಾಯಕ, ಪಪಂ ಮಾಜಿ ಅಧ್ಯಕ್ಷ ಜಿ.ಪ್ರಕಾಶ್, ಜ್ಯೂನಿಯರ್ ಕಾಲೇಜು ಪ್ರಾಚಾರ್ಯ ಗೋವಿಂದಪ್ಪ, ಕಸಾಪ ಅಧ್ಯಕ್ಷ ಜಿಂಕಾ ಶ್ರೀನಿವಾಸ್, ದಸಂಸ ಸಂಚಾಲಕ ಒ.ಕರಿಬಸಪ್ಪ, ಕೆರೆಕೊಂಡಾಪುರ ಪರಮೇಶ್, ಎಂ.ಡಿ.ಲತೀಫ್ ಸಾಬ್, ಪಿ.ಆರ್.ಕಾಂತರಾಜ್, ವಿನಯ್ ಕುಮಾರ್, ಕೆ.ಬಸಣ್ಣ, ಬೋಗೇಶ್ ಗೌಡ, ಕುಮಾರಸ್ವಾಮಿ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.------

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ