ಸಮಾಜದ ಅಭ್ಯುದಯಕ್ಕಾಗಿ ಮಾದಾರ ಪೀಠದ ಬಸವಮೂರ್ತಿ ಶ್ರೀಗಳು ಶ್ರಮ: ಹುಲ್ಲೇಹಳ್ಳಿ ಲಕ್ಷ್ಮಣ್

KannadaprabhaNewsNetwork |  
Published : Jul 21, 2026, 01:30 AM IST
20ಕೆಕೆಡಿಯು3ಎ. | Kannada Prabha

ಸಾರಾಂಶ

ಕಡೂರುಸಮಾಜದ ಅಭ್ಯುದಯಕ್ಕಾಗಿ ಮಾದಾರ ಪೀಠದ ಬಸವಮೂರ್ತಿ ಶ್ರೀಗಳು ಶ್ರಮಿಸುತ್ತಿದ್ದಾರೆ ಎಂದು ಶ್ರೀ ಬಸವಮೂರ್ತಿ ಶಿವಶರಣ ಮಾದಾರ ಚನ್ನಯ್ಯ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಹುಲ್ಲೇಹಳ್ಳಿ ಲಕ್ಷ್ಮಣ್ ಹೇಳಿದರು.

ಶ್ರೀ ಡಾ.ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹುಟ್ಟು ಹಬ್ಬದ ಆಚರಣೆ

ಕನ್ನಡಪ್ರಭ ವಾರ್ತೆ, ಕಡೂರು

ಸಮಾಜದ ಅಭ್ಯುದಯಕ್ಕಾಗಿ ಮಾದಾರ ಪೀಠದ ಬಸವಮೂರ್ತಿ ಶ್ರೀಗಳು ಶ್ರಮಿಸುತ್ತಿದ್ದಾರೆ ಎಂದು ಶ್ರೀ ಬಸವಮೂರ್ತಿ ಶಿವಶರಣ ಮಾದಾರ ಚನ್ನಯ್ಯ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಹುಲ್ಲೇಹಳ್ಳಿ ಲಕ್ಷ್ಮಣ್ ಹೇಳಿದರು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಪ್ರತಿಮೆ ಬಳಿ ಶ್ರೀ ಮಾದಾರ ಚನ್ನಯ್ಯ ಸೇವಾ ಸಮಿತಿಯಿಂದ ನಡೆದ ಚಿತ್ರದುರ್ಗದ ಶ್ರೀ ಡಾ.ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹುಟ್ಟು ಹಬ್ಬದ ಆಚರಣೆಯಲ್ಲಿ ಮಾತನಾಡಿದರು.

ಶ್ರೀಗಳು ತಮ್ಮ ದೀಕ್ಷೆ ಪಡೆದ ಬಳಿಕ ಸುಮಾರು ಎರಡೂವರೆ ದಶಕಗಳ ಕಾಲ ಸಮಾಜದ ಬೆಳವಣಿಗೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಮುಖ್ಯವಾಗಿ ಸಹನೆ, ಧೈರ್ಯ ಮತ್ತು ಸಮಾಜ ಸಂಘಟಿಸುವ ಜೊತೆಗೆ ಸಮಾಜದ ಯುವ ಸಮೂಹವನ್ನು ಸದಾ ಜಾಗೃತಿಗೊಳಿಸುವ ಕಾರ್ಯ ಮಠದ ಮೂಲಕ ನೆರವೇರಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಸಮ ಸಮಾಜದ ಕನಸನ್ನು ಕಂಡು ಅದರ ಸಾಕಾರಕ್ಕಾಗಿ ಶ್ರಮಿಸುತ್ತಿದ್ದಾರೆ ಅವರ ಹಾದಿಯಲ್ಲಿ ಜಿಲ್ಲೆಯ ಸೇವಾ ಸಮಿತಿ ರಚನಾತ್ಮಕವಾಗಿ ಕಾರ್ಯ ನಿರ್ವಹಿಸಲಿದೆ ಎಂದರು.

ಕರ್ನಾಟಕ ಮಾದರ ಮಹಾಸಭಾ ಜಿಲ್ಲಾಧ್ಯಕ್ಷ ವೈ.ಟಿ.ಗೋವಿಂದಪ್ಪ ಮಾತನಾಡಿ ಸಮಾಜವನ್ನು ಸರಿ ದಾರಿಗೆ ತರುವಲ್ಲಿ ಪೂಜ್ಯಶ್ರೀಗಳ ಪಾತ್ರ ಪ್ರಮುಖವಾಗಿದೆ. 20 ವರ್ಷಕ್ಕೂ ಹೆಚ್ಚು ಕಾಲ ಮಠದ ಶ್ರೀಗಳಾಗಿ ದೀಕ್ಷೆ ಪಡೆದ ನಂತರ ಸಮಾಜದ ಸಂಘಟನೆಯಲ್ಲಿ ಕಲ್ಲು-ಮುಳ್ಳುಗಳನ್ನು ದಾಟಿ ನಾಡಿನ ಪ್ರಮುಖ ಮಠಾಧೀಶರ ಸಾಲಿನಲ್ಲಿ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ ಎಂದರು.

ಈ ಸಂದರ್ಭದಲ್ಲಿ ಶ್ರೀ ಮಾದರ ಚನ್ನಯ್ಯ ಸೇವಾ ಸಮಿತಿ ಜಿಲ್ಲಾ ಉಪಾಧ್ಯಕ್ಷ ಸಿ. ಸುರೇಶ್, ಪ್ರಧಾನ ಕಾರ್ಯದರ್ಶಿ ಕಡೂರ ಹಳ್ಳಿ ಪ್ರಶಾಂತ್, ಬಾಣೂರು ನಾಗರಾಜ್, ಕುಪ್ಪಾಳು ಬಸವರಾಜ್, ಆಲಘಟ್ಟ ಆನಂದ್ ಮತ್ತಿತರಿದ್ದರು.

20ಕೆಕೆಡಿಯು3.

ಕಡೂರು ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಶ್ರೀ ಮಾದಾರ ಚನ್ನಯ್ಯ ಸೇವಾ ಸಮಿತಿಯಿಂದ ಚಿತ್ರದುರ್ಗದ ಶ್ರೀ ಡಾ.ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಲಾಯಿತು. ಹುಲ್ಲೇಹಳ್ಳಿ ಲಕ್ಷ್ಮಣ್, ಪ್ರಶಾಂತ್, ವೈ.ಟಿ.ಗೋವಿಂದಪ್ಪ, ಸಿ.ಸುರೇಶ್ ಮತ್ತಿತರರಿದ್ದರು.ಪೋಟೋ ಕ್ಯಾಪ್ಷನ್ - 20ಕೆಕೆಡಿಯು3ಎ.

ಕಡೂರು ತಾಲೂಕಿನ ಸಖರಾಯಪಟ್ಟಣದ ಸಮೀಪದ ನಾಗೇನಹಳ್ಳಿಯಲ್ಲಿ ವಿಧಾನ ಪರಿಷತ್ ಗೆ ಸುಪ್ರಿಂ ಕೋರ್ಟ್ ಆದೇಶದಂತೆ ವಿಧಾನಪರಿಷತ್‌ ಸದಸ್ಯರಾಗಿ ಗಾಯತ್ರಿ ಶಾಂತೇಗೌಡ ಆಯ್ಕೆಯಾದ್ದರಿಂದ ಮಾಜಿ ಗ್ರಾ.ಪಂ. ಅಧ್ಯಕ್ಷ ವಸಂತಕುಮಾರ್ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ತಾ.ಪಂ.ನ ಮಾಜಿ ಅಧ್ಯಕ್ಷ ಎನ್ ಹೆಚ್ ಮೋಹನ್, ಗ್ರಾ.ಪಂ.ಮಾಜಿ ಅಧ್ಯಕ್ಷ ಕೃಷ್ನಮೂರ್ತಿ , ಮುಖಂಡರಾದ ಸುರೇಶ್, ಅಶೋಕ್, ಮಂಜುನಾಥ್, ಬಡ್ಡಿಮಹೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಶ್ವತ ನಿವಾಸಿ ಪತ್ರ ಆತಂಕಕಾರಿ: ಅಶೋಕ್‌
ಮೋದಿ ದುರ್ಬಲ, ದುಷ್ಟರಕ್ಷಕ ಪ್ರಧಾನಿ: ಸಿದ್ದು ಕಿಡಿ