ತಿಂಗಳ ಬಸವ ಬೆಳಕು -121ರ ಸಭೆಯಲ್ಲಿ ಕಲ್ಯಾಣ ಕ್ರಾಂತಿ ವಿಷಯ ಮಂಡಿಸಿದ ಮಹಾಂತೇಶ ನವಲಕಲ್
ನಗರದ ಲಿಂಗಣ್ಣ ಸತ್ಯಂಪೇಟೆ ವೇದಿಕೆಯಲ್ಲಿ ಬಸವಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ ವತಿಯಿಂದ ಏರ್ಪಡಿಸಿದ್ದ ಶರಣ ಸಿದ್ದಲಿಂಗಪ್ಪ ಕಾಕನಾಳೆ ಮತ್ತು ಸರಸ್ವತಿ ಕಾಕನಾಳೆ ಸ್ಮರಣೋತ್ಸವ ನಿಮಿತ್ತ ತಿಂಗಳ ಬಸವ ಬೆಳಕು -121 ರ ಸಭೆಯಲ್ಲಿ ಭಾಗವಹಿಸಿ ಕಲ್ಯಾಣ ಕ್ರಾಂತಿ ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಬಸವಣ್ಣರ ಸದಾ ವಿನಯ ಹಾಗೂ ನಿಷ್ಠುರವಾದ ಮಾತುಗಳು ಕಲ್ಯಾಣ ರಾಜ್ಯವನ್ನು ಕಟ್ಟಲು ಸಾಧ್ಯವಾಯಿತು. ಬಿಜ್ಜಳನ ಮಗ ಸೋವಿದೇವನ ಮಹತ್ವಾಕಾಂಕ್ಷೆಯಿಂದಾಗಿ ಪಟ್ಟಭದ್ರರು ಶರಣರನ್ನು ಹಾಗೂ ಅವರ ಸಾಹಿತ್ಯವನ್ನು ನಾಶ ಮಾಡಲು ಪಟತೊಟ್ಟಂತೆ ಬೆನ್ನುಬಿದ್ದರು. ವಚನ ಸಾಹಿತ್ಯ ಮತ್ತು ಶರಣರ ವಾಸ್ತವ ಬದುಕು ಪರಾವಲಂಬಿ ಜೀವಿಗಳಿಗೆ ನುಂಗದ ತುತ್ತಾಯಿತು ಎಂದರು.ಹರಳಯ್ಯ ಮಧುವರಸರ ಕುಟುಂಬ ಸಂಬಂಧವನ್ನು ಕಂಡು ಪುರೋಹಿತರು ಕೆಂಡಾಮಂಡಲವಾದರು. ಬಸವಣ್ಣ ಮತ್ತು ಬಿಜ್ಜಳ ಸ್ನೇಹ ಅನಿವಾರ್ಯವಾಗಿ ಕಡಿದುಹೋಯಿತು. ಇದುವರೆಗೆ ದೊರೆತಿರುವ ಶಾಸನಗಳು ಇತಿಹಾಸವನ್ನು ಸಾರಿ ಸಾರಿ ಹೇಳುತ್ತಿವೆ ಎಂದು ಅವರು ವಿವರಿಸಿದರು.
ಬಸವಮಾರ್ಗ ಪ್ರತಿಷ್ಠಾನದ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಾಮಾಣಿಕತೆ- ಸಾಮಾಜಿಕ ಕಾಳಜಿತೇ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಲಿಂ. ಸಿದ್ಧಲಿಂಗಪ್ಪ ಕಾಕನಾಳೆಯವರು ನಮ್ಮೆಲ್ಲರಿಗೆ ಆದರ್ಶ ಎಂದರು.
ಬಸವರಾಜ ಹೇರುಂಡಿ, ಶಿವಯೋಗಪ್ಪ ಮುಡಬೂಳ, ಮಲ್ಲಿಕಾರ್ಜುನ ಗುಡಿ, ಭೀಮಣ್ಣ ಮೇಟಿ, ಷಣ್ಮುಖ ಸಾಹು, ಶಿವಕುಮಾರ ಆವಂಟಿ, ಬಸವರಾಜ ಆನೇಗುಂದಿ, ಅಕ್ಕಮಹಾದೇವಿ ಬಳಗ ಶಹಾಪುರ, ಅಡಿವೆಪ್ಪ ಜಾಕಾ, ನಾಗಪ್ಪ ಬೊಮ್ಮನಳ್ಳಿ, ವಿಶ್ವನಾಥ ಬುಂಕಲದೊಡ್ಡಿ, ಸಿದ್ದರಾಮ ಹೊನ್ಕಲ್, ಹಂಪಯ್ಯ ಚಂದ್ರಕಲಾ ಕೆಂಭಾವಿ, ರೇಖಾ ಯಡ್ರಾಮಿ, ಖಾಜಾ ಪಟೇಲ್, ತಿಪ್ಪಣ್ಣ ಜಮಾದಾರ, ಮಲ್ಲಿಕಾರ್ಜುನ ಸತ್ಯಂಪೇಟೆ, ಮಲ್ಲಪ್ಪ ನಾಡಗೌಡ, ದೇವಿಂದ್ರಪ್ಪ ಬಡಿಗೇರ, ವಿರೂಪಾಕ್ಷಿ ಸಿಂಪಿ, ಭಂಡಾರಿ ವಕೀಲ, ಚೆನ್ನಪ್ಪ ಗುಂಡಾನೋರ, ಮಲ್ಲಣ್ಣ ಶಿರವಾಳ, ಭೀಮರಾಯ ಶಿರವಾಳ, ಸಿದ್ದಲಿಂಗಪ್ಪ ಆನೇಗುಂದಿ ಇತರರಿದ್ದರು.