ಕನ್ನಡಪ್ರಭ ವಾರ್ತೆ ವಿಜಯಪುರ: ಸಾಂಸ್ಕೃತಿಕ ನಾಯಕ ಎನಿಸಿಕೊಳ್ಳಬೇಕಾದರೆ ತನು, ಮನ, ಭಾವ, ಆಚಾರ, ವಿಚಾರಗಳು ಪರಿಪಕ್ವಗೊಂಡು ಆಂತರ್ಯದಲ್ಲಿ ಸಂಸ್ಕರಣಗೊಂಡಾಗ ಮಾತ್ರ ಸಾಧ್ಯ. ಜತೆಗೆ ಬಾಹ್ಯದಲ್ಲಿ ಇವುಗಳನ್ನು ಕಾರ್ಯರೂಪದಲ್ಲಿ ತಂದು ಸಾಂಸ್ಕೃತಿಕ ನಾಯಕನಾಗಿ ಸಮಾಜದಲ್ಲಿ ಎತ್ತರಕ್ಕೆ ಏರಲು ಬಸವಣ್ಣನವರಿಗೆ ಸಾಧ್ಯವಾಯಿತು ಎಂದು ಪ್ರಾಧ್ಯಾಪಕ ಡಾ.ಗುರುಲಿಂಗಪ್ಪ ಧಬಾಲೆ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ:
ಸಾಂಸ್ಕೃತಿಕ ನಾಯಕ ಎನಿಸಿಕೊಳ್ಳಬೇಕಾದರೆ ತನು, ಮನ, ಭಾವ, ಆಚಾರ, ವಿಚಾರಗಳು ಪರಿಪಕ್ವಗೊಂಡು ಆಂತರ್ಯದಲ್ಲಿ ಸಂಸ್ಕರಣಗೊಂಡಾಗ ಮಾತ್ರ ಸಾಧ್ಯ. ಜತೆಗೆ ಬಾಹ್ಯದಲ್ಲಿ ಇವುಗಳನ್ನು ಕಾರ್ಯರೂಪದಲ್ಲಿ ತಂದು ಸಾಂಸ್ಕೃತಿಕ ನಾಯಕನಾಗಿ ಸಮಾಜದಲ್ಲಿ ಎತ್ತರಕ್ಕೆ ಏರಲು ಬಸವಣ್ಣನವರಿಗೆ ಸಾಧ್ಯವಾಯಿತು ಎಂದು ಪ್ರಾಧ್ಯಾಪಕ ಡಾ.ಗುರುಲಿಂಗಪ್ಪ ಧಬಾಲೆ ಹೇಳಿದರು.
ನಗರದ ಬಿಎಲ್‌ಡಿಇ ಸಂಸ್ಥೆಯ ಆವರಣದಲ್ಲಿರುವ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಚಿಂತನ ಸಾಂಸ್ಕೃತಿಕ ಬಳಗ ಕಾರ್ಯಕ್ರಮದಲ್ಲಿ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಬಹುಮುಖ ವ್ಯಕ್ತಿತ್ವ ಹೊಂದಿದ ಬಸವಣ್ಣನವರು ಧಾರ್ಮಿಕ, ಸಾಮಾಜಿಕ, ರಾಜಕೀಯ, ಆಧ್ಯಾತ್ಮಿಕ ಮತ್ತು ಕಾಯಕ-ದಾಸೋಹ ಈ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿ ನಡೆ ನುಡಿಯಲ್ಲಿ ಒಂದಾಗಿ ಜಗತ್ತಿಗೆ ಬದುಕನ್ನು ಕಟ್ಟಿಕೊಟ್ಟಿದ್ದರಿಂದ ಅವರು ವಿಶ್ವವಂದ್ಯರು. ಅಂತೆಯೇ ಅವರಿಗೆ ಕರ್ನಾಟಕ ಸರ್ಕಾರ ‘ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡಿದ್ದು ಸ್ತುತ್ಯಾರ್ಹ ಕಾರ್ಯ ಎಂದರು.
ಮುಖ್ಯ ಆಡಳಿತಾಧಿಕಾರಿ ಡಾ.ಆರ್.ಬಿ.ಕೊಟ್ನಾಳ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಹಳಕಟ್ಟಿಯವರು ಬಸವಣ್ಣನವರ ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ್ದರಿಂದಲೇ ವಚನ ಪಿತಾಮಹ ಎನಿಸಿಕೊಂಡರು ಎಂದು ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.