ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲಾ ಕಸಾಪದಿಂದ ಕನ್ನಡ ಭವನದಲ್ಲಿ ಶುಕ್ರವಾರ ಜರುಗಿದ ಪ್ರಥಮ ವಚನ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಬಸವಾದಿ ಶರಣರು ಸಮಾಜದ ಎಲ್ಲ ವರ್ಗ, ವರ್ಣ, ಜಾತಿಯ ಜನರನ್ನು ಅಪ್ಪಿಕೊಳ್ಳುವ ಮೂಲಕ ಸಮಾಜದಲ್ಲಿ ಸಮಾನತೆಯ ಬೀಜ ಬಿತ್ತಿದರೆಂದರು.
ಇನ್ನೂ ಅನೇಕ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವದ ಕಲ್ಪನೆಯೇ ಇಲ್ಲದಿರುವಾಗ ಪ್ರಜಾಪ್ರಭುತ್ವ ಕಲ್ಪನೆಯ ಪಾರ್ಲಿಮೆಂಟ್ ವ್ಯವಸ್ಥೆಯನ್ನು 12ನೇ ಶತಮಾನದಲ್ಲಿಯೇ ಜಾರಿಗೆ ತಂದಿದ್ದರು ಎಂದು ಹೇಳಿದರು.ಸಾನ್ನಿಧ್ಯ ವಹಿಸಿದ್ದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವ ಮಾತನಾಡಿ, ಮಹಿಳೆಗೆ ಸ್ವಾತಂತ್ರ್ಯ ಮತ್ತು ಸಮಾನತೆ ತಂದು ಕೊಟ್ಟ ಶರಣರ ವಿಚಾರಗಳು ಸಾರ್ವಕಾಲಿಕವಾಗಿವೆ ಎಂದರು.
ಇದಕ್ಕೂ ಮುನ್ನ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಕನ್ನಡ ಭವನದವರೆಗೆ ವಚನ ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ವಚನಗಳ ಕಟ್ಟು ಹೊತ್ತು ಮೆರವಣಿಗೆ ನಡೆಯಿತು. ಶರಣರ ವಿವಿಧ ವೇಷ ಧರಿಸಿದ ಮಕ್ಕಳು ಗಮನ ಸೆಳೆದರು.
ಜಗದೀಶ ಮರಪಳ್ಳಿ, ಪ್ರೊ. ಶ್ರೀದೇವಿ ಹರವಾಳ, ಗೌರಿ ಕರಣಗಿ, ಶೈಲಜಾ ಚವ್ಹಾಣ, ಜಗದೇವಿ ಚೆಟ್ಟಿ, ರಮೇಶ ಪಾಟೀಲ, ಜಗನ್ನಾಥ ರಾಚೋಟಿ, ಶಂಕ್ರೆಪ್ಪ ಮಹಾಶೆಟ್ಟಿ, ಶಂಕರ ಕಟ್ಟಿ ಸಂಗಾವಿ, ಅಲ್ಲಾವುದ್ದೀನ್ ಸಾಗರ, ಸಂದೀಪ ದೇಸಾಯಿ, ಗಣೇಸರಾವ ಹುಲಿಮನಿ, ಧರ್ಮರಾಯ ಜವಳಿ, ಮೋದಿನ್ ಪಟೇಲ್, ಚಂದ್ರಕಾಂತ ನಾಟಿಕಾರ ಅವರನ್ನು ಸತ್ಕರಿಸಲಾಯಿತು.ವಚನಗಳನ್ನು ಬದುಕಲ್ಲಿ ಅಳಡಿಸಿಕೊಳ್ಳಿ: ನೀಲಾಂಬಿಕಾ
ಸ್ತ್ರೀಯರಿಗೆ ಸಮಾನತೆ ಕಲ್ಪಿಸಿದ್ದು ವಚನಕಾರರ ಇನ್ನೊಂದು ವೈಶಿಷ್ಟ್ಯ ವಾಗಿದೆ. ಅಂಗದ ಮೇಲೆ ಇಷ್ಟಲಿಂಗ ಕರುಣಿಸುವ ಮೂಲಕ ವಿಶ್ವ ಮಾನವ ಸಂದೇಶ ತುಂಬಿದರು. ಕಾಯಕ ಮತ್ತು ದಾಸೋಹ ಎಂಬ ಎರಡು ಹೊಸ ಪರಿಕಲ್ಪನೆಯನ್ನು ಹುಟ್ಟು ಹಾಕಿದ ಶರಣರು, ನುಡಿದಂತೆ ನಡೆದರು. ನಡೆದಂತೆ ನುಡಿದರು. ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರ ನಿರ್ಮೂಲನೆ ಮಾಡಿ ವೈಚಾರಿಕ ಸಮಾಜಕ್ಕೆ ಭದ್ರ ಬುನಾದಿ ಹಾಕಿದರೆಂದರು.