ಹಗರಿಬೊಮ್ಮನಹಳ್ಳಿ: ಸಮಾನತೆಯ ಹರಿಕಾರ ಜಗಜ್ಯೋತಿ ಬಸವೇಶ್ವರರು ಮನುಕುಲಕ್ಕೆ ಮಾದರಿಯಾಗಿದ್ದಾರೆ ಎಂದು ಡಾ.ಮಹೇಶ್ವರ ಸ್ವಾಮೀಜಿ ತಿಳಿಸಿದರು.
ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಎಂ.ಶಿವರುದ್ರ, ಹಾಲಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು. ವಿವಿ ಸಂಘದ ನಿರ್ದೇಶಕ ಬದಾಮಿ ಕರಿಬಸರಾಜ, ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಕಲ್ಲೇಶ್ ಇಟ್ಟಿಗಿ, ವಿರೂಪಾಕ್ಷಗೌಡ, ಪಟ್ಟೇದ ಮಂಜುನಾಥ, ಹನಸಿ ದೇವರಾಜ, ಚಿಲಗೋಡು ದೊಡ್ಡಬಸಪ್ಪ, ಎಂ.ಎಂ.ಪೂರ್ಣಯ್ಯ, ವಲ್ಲಬಾಪುರ ಚಂದ್ರಶೇಖರ ಶಾಸ್ತ್ರಿ, ಕೆ.ಪಿ.ದೇವರಾಜ, ಬಿ.ಗಂಗಾಧರ, ಜ್ಞಾನೇಶ್ವರಯ್ಯ, ಕವಿತಾ ಹಾಲ್ದಾಳ್, ಪಂಕಜಾ ಪ್ರಸಾದ್, ಚಂದ್ರಶೇಖರ ರೆಡ್ಡಿ, ಕೊಟ್ರೇಶ್, ಈಶಪ್ಪ, ಅಕ್ಕಿ ಬಸವರಾಜ, ಮಲ್ಲಿಕಾರ್ಜುನ, ಶಬಾದಿ ಬಸಪ್ಪ, ಪೋಟೋ ವೀರೇಶ ಇತರರಿದ್ದರು.
ಹಗರಿಬೊಮ್ಮನಹಳ್ಳಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವೀರಶೈವ ಲಿಂಗಾಯತ ಸಮಾಜದ ಮಖಂಡರು ಬಸವ ಜಯಂತ್ಯುತ್ಸವದ ಹಿನ್ನೆಲೆಯಲ್ಲಿ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.