770 ಅಮರ ಗಣಂಗಳನ್ನು ತನ್ನೇತ್ತರಕ್ಕೆ ಏರಿಸಿದ ಬಸವಣ್ಣ: ಸುರೇಶ ಚನ್ನಶೆಟ್ಟಿ

KannadaprabhaNewsNetwork |  
Published : May 16, 2024, 12:58 AM IST
ಚಿತ್ರ 15ಬಿಡಿಆರ್65 | Kannada Prabha

ಸಾರಾಂಶ

ಬೀದರ ತಾಲೂಕಿನ ನಿಜಾಂಪೂರ ಗ್ರಾಮದಲ್ಲಿ ನಿರ್ಹಂಕಾರ ಬಂಡಿ ಅವರ ಸಂಪಾದಿತ ಬಸವ ಬಳ್ಳಿ ಎಂಬ ಕೃತಿ ಬಿಡುಗಡೆಗೊಳಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೀದರ್

ಬಸವಣ್ಣನವರು ತಾವೊಬ್ಬರು ಬೆಳೆಯಲಿಲ್ಲ. ತನ್ನೆತ್ತರಕ್ಕೆ 770 ಅಮರ ಗಣಂಗಳನ್ನು ಏರಿಸಿದ ಜಗದ ಏಕೈಕ ಪುರುಷ ಬಸವಣ್ಣನವರು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ನುಡಿದರು.

ಬೀದರ್‌ ತಾಲೂಕಿನ ನಿಜಾಂಪೂರ ಗ್ರಾಮದಲ್ಲಿ ಮಂಗಳವಾರ ನಿರ್ಹಂಕಾರ ಬಂಡಿ ಅವರ ಸಂಪಾದಿತ ‘ಬಸವ ಬಳ್ಳಿ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಹಿಂದುಳಿದ, ಶೋಷಿತ ಸಮಾಜದ ಜನರನ್ನು ಅಪ್ಪಿಕೊಂಡು ಇವನಾರವ ಎನ್ನದೆ ಇವನಮ್ಮವನೆಂದು ಅಮರ ಗಣಂಗಳಾಗಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ.

ನಿಜಾಂಪೂರದ ಅನುಸೂಯಮ್ಮಾ ಪಾಟೀಲರ 50ನೇ ಪುಣ್ಯ ಸ್ಮರಣಾರ್ಥ ಅಂಗವಾಗಿ ಅವರ ಮಕ್ಕಳು ಕೃತಿಗೆ ದಾಸೋಹಿಗಳಾದದ್ದು ಅವಿಸ್ಮರಣೀಯ ಎಂದರು.

ಕವಯಿತ್ರಿ ಶೈಲಜಾ ಹುಡುಗೆ ಕೃತಿ ಪರಿಚಯ ಮಾಡುತ್ತ, ಬಸವ ಬಳ್ಳಿ ಕೃತಿಯು ಪುಟ್ಟ ಮಕ್ಕಳಿಂದ ದೊಡ್ಡವರಿಗೆ ಓದಲು ಅನುಕೂಲವಾಗುತ್ತದೆ ಮತ್ತು ಸರಾಗವಾಗಿ 50 ಶಿವ-ಶರಣರ ಪರಿಚಯ 50 ವಚನಗಳು ಕೊಡುತ್ತದೆ. ನಿರ್ಹಂಕಾರ ಬಂಡಿಯವರು ಏಳು ಗ್ರಂಥಗಳು ಓದಿ 50 ಶರಣರ ಪರಿಚಯ ಆಯ್ಕೆ ಮಾಡಿಕೊಂಡಿದ್ದು ಖುಷಿಯ ಸಂಗತಿ ಎಂದರು.

ಜಿಪಂ ಮಾಜಿ ಸದಸ್ಯೆ ಶಕುಂತಲಾ ಬೆಲ್ದಾಳೆ ಉದ್ಛಾಟಿಸಿ ಮಾತನಾಡಿ, ಪಾಟೀಲ್ ಸಹೋದರರು ತಮ್ಮ ತಾಯಿಯ ಸ್ಮರಣಾರ್ಥ ಬಸವ ಬಳ್ಳಿ ಕೃತಿ ಹೊರತರಲು ಸಹಕರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ತಮ್ಮ ತಾಯಿಯ ಹೆಸರು ಸ್ಥಿರಸ್ಥಾಯಿಯಾಗಿ ಉಳಿಸಿದ್ದಾರೆ ಎಂದರು.

ಕೃತಿಯ ಸಂಪಾದಕರಾದ ನಿರ್ಹಂಕಾರ ಬಂಡಿ ಮಾತನಾಡಿ, ‘ಪಾಪಿಯ ಧನ ಪ್ರಾಯಶ್ಚಿತಕ್ಕೆ’ ಎಂಬ ಬಸವಣ್ಣನವರ ವಚನ ಉಲ್ಲೇಖಿಸಿ ಶಿಕ್ಷಕ-ಕೃಷಿಕ ಸಹೋದದರು ವಚನ ಸಾಹಿತ್ಯ ಪ್ರಸಾರಕ್ಕೆ ತಮ್ಮ ಶುದ್ಧ ಕಾಯಕದ ಹಣ ದಾಸೋಹಗೈದದ್ದು ಸಮಾಜಕ್ಕೆ ಮಾದರಿಯಾಗಿದ್ದು ನಾನು ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯಲು ನನ್ನ ತಾಯಿಯವರಾದ ಕವಯತ್ರಿ ಇಂದುಮತಿ ಬಂಡಿಯವರೇ ಪ್ರೇರಣೆ ಎಂದು ಅನುಭವ ಹಂಚಿಕೊಂಡರು.

ಅನೀಲಕುಮಾರ ಪಾಟೀಲ್ ಸ್ವಾಗತಿಸಿದರು. ಗುರು ಪೂಜೆಯನ್ನು ಪದ್ಮಾವತಿ ಮತ್ತು ಕುಶಾಲಕುಮಾರ ಪಾಟೀಲ್ ದಂಪತಿಗಳು ನೆರವೇರಿಸಿದರು.

ನಿವೃತ್ತ ಶಿಕ್ಷಕ ಶಿವರಾಜ ಬಿರಾದಾರ ಮರಖಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನುಸೂಯಮ್ಮ ನವರು ಸಾತ್ವೀಕ ಜೀವನದ ಬದುಕು ಸಾಗಿಸಿದ ಬಗ್ಗೆ ತಿಳಿಸಿದರು.

ಆನಂದ ಪಾಟೀಲ್ ಕೋಳಾರ (ಕೆ), ಲಿಂಗರಾವ ಪಾಟೀಲ್ ನಿಜಾಂಪೂರ, ಕೋಳಾರ (ಕೆ) ಗ್ರಾ.ಪಂ ಅಧ್ಯಕ್ಷ ಪ್ರಶಾಂತ ಶರಗಾರ, ಗುರುನಾಥ ಬಿರಾದಾರ, ಸಂಗಶೆಟ್ಟಿ ಬಿರಾದಾರ, ಡಾ. ಸತೀಶ ಪರತಾಪೂರ, ಶರಣಬಸವ ಪಬ್ಲಿಕ್ ಸ್ಕೂಲ್ ಗೋರನಳ್ಳಿ-ಬೀದರ ಹಾಗೂ ಶಿವಶಂಕರ ಟೋಕರೆ, ಚನ್ನಪ್ಪಾ ಸಂಗೋಳಗಿ, ಸೋಮಶೇಖರ ನೀಲಪ್ಪನೋರ್, ಶಿವಾನಂದ ಅಟ್ಟೂರ, ಮಲ್ಲಿಕಾರ್ಜುನ್ ಚೌಳಿ, ಓಂಕಾರ ಉಪ್ಪೆ, ಗುಂಡಪ್ಪಾ ಹುಡಗೆ, ಭಾವನಾ ಕಲಬುರಗಿ, ನೀಲಗಂಗಾ ಬಂಡಿ, ಪರಮೇಶ್ವರಿ ಪಾಟೀಲ್, ಅನುರಾಧಾ ನೀಲಪ್ಪನೋರ್, ಸಪ್ನಾ ಬಿರಾದಾರ, ದೇವೆಂದ್ರ ನಾವದಗೇರಿ, ಬಸವಕಿರಣ ಬಂಡಿ, ಚಂದ್ರಶೇಖರ ಪಸಾರ ನಿರ್ಣಾ, ಸೂರ್ಯಕಾಂತ ಸೇಡಂ ಹಾಗೂ ಗ್ರಾಮದ ಹಿರಿಯರು, ಮಕ್ಕಳು ಸಮಾರಂಭದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ