ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಿ.ವಿ.ವಿ.ಸಂಘ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಅಕ್ಕನ ಬಳಗ, ಶಿವಾನುಭವ ಸಮಿತಿ, ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ವಿಶ್ವಗುರು ಬಸವ ಜಯಂತಿ ನಿಮಿತ್ತ ಶುಕ್ರವಾರ ಹಮ್ಮಿಕೊಂಡ ಬಸವಣ್ಣನ ಭಾವಚಿತ್ರದ ಭವ್ಯ ಶೋಭಾಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
12ನೇ ಶತಮಾನದಲ್ಲಿಯೇ ಸಮಾಜಿಕ ಕ್ರಾಂತಿಯ ಹರಿಕಾರರಾಗಿ ಅನುಭವ ಮಂಟಪದ ಮುಖಾಂತರ ಪ್ರಜಾಪ್ರಭುತ್ವದ ಕಲ್ಪನೆ ನೀಡಿ, ಎಲ್ಲ ಸಮುದಾಯದ ಎಲ್ಲ ಜನರಿಗೂ ಸಮಬಾಳು, ಸಮಪಾಲು ಎಂಬ ತತ್ವದಡಿ ಸಮಾನತೆ ಸಾರುವ ಮೂಲಕ ಕಾಯಕ ಮಹತ್ವವನ್ನು ತಿಳಿಸಿದ್ದು ವಿಶ್ವಗುರು ಬಸವಣ್ಣ ಎಂದರು.ಟೀಕಿನಮಠದ ಮಲ್ಲಿಕಾರ್ಜುನ ಶ್ರೀಗಳು, ಬಿಲ್ ಕೆರೂರಿನ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಜರುಗಿದ ಶೋಭಾಯಾತ್ರೆ, ಬಿ.ವಿ,ವಿ. ಸಂಘ ಬೀಳೂರ ಗುರುಬಸವ ದೇವಸ್ಥಾನದಿಂದ ಬೃಹತ್ ಮೆರವಣಿಗೆ ಪ್ರಾರಂಭವಾಗಿ ಕಾಲೇಜು ರಸ್ತೆ, ಬಸವೇಶ್ವರ ವೃತ್ತ, ಮಹಾತ್ಮ ಗಾಂಧಿ ರಸ್ತೆ, ಪೊಲೀಸ್ ಚೌಕ್, ವಲ್ಲಬಾಯಿ ಚೌಕ್, ಅಡತ್ ಬಜಾರ್, ಟೀಕಿನ ಮಠ, ಚರಂತಿಮಠದ ಶಿವಾನುಭವ ಮಂಟಪ ತಲುಪಿ ಶೋಭಾಯಾತ್ರೆ ಮುಕ್ತಾಯಗೊಂಡಿತು.
ಬಸವಜಯಂತಿ ನಿಮಿತ್ತ ರೈತಾಪಿ ಜನರು ಎತ್ತುಗಳಿಗೆ ಸ್ನಾನ ಮಾಡಿಸಿ ಅವುಗಳನ್ನು ಶೃಂಗರಿಸಿ ಪೂಜೆ ಸಲ್ಲಿಸಿದ ಸುಮಾರು 25ಕ್ಕೂ ಹೆಚ್ಚು ಜೋಡಿ ಎತ್ತುಗಳು ಶೋಭಾಯಾತ್ರೆಯ ಮೆರವಣಿಗೆಯಲ್ಲಿ ಪಾಲ್ಗೊಂಡು ಜನರ ಗಮನ ಸೆಳೆದವು.