ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಶುಕ್ರವಾರ ತಾಲೂಕು ಆಡಳಿತ ಕಚೇರಿಯಲ್ಲಿ ಹಮ್ಮಿಕೊಂಡ ಮಹಾ ಮಾನವತಾವಾದಿ ಬಸವಣ್ಣ ಹಾಗೂ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ನಿಮ್ಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, 12ನೇ ಶತಮಾನ ಕ್ರಾಂತಿಪುರುಷ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮ ಸಮಾಜ ಕಟ್ಟಲು ಹೋರಾಡಿದರು. ಸಮಾಜದಲ್ಲಿ ಸಾಮಾಜಿಕ ಅನಿಷ್ಠಗಳನ್ನು ಹಾಗೂ ಕೆಳ ಸ್ತರದ ಜನತೆಯ ಶೋಷಣೆ ಹೋಗಲಾಡಿಸಲು ಪ್ರತಿಭಟಿಸಿದರು. ಇವರ ವಚನಗಳು ಕನ್ನಡ ಸಾಹಿತ್ಯಕ್ಕೆ ಕನ್ನಡಿಯಂತಿವೆ. ಇವರ ವಚನಗಳಲ್ಲಿಯ ಮನುಕುಲದ ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಹೇಮರೆಡ್ಡಿ ಮಲ್ಲಮ್ಮ ಕೂಡ ಶಿವಶರಣೆಯಾಗಿ ಸುಮಾರು 500 ವರ್ಷಗಳ ಹಿಂದೆ ಜೀವಿಸಿ ಮಹಾತಾಯಿಯಾಗಿ ಜಗತ್ತನ್ನು ಬೆಳಗಿದ್ದಾಳೆ. ಇವರ ಆದರ್ಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದರು.
ಬಸವಣ್ಣನವರ ಹಾಗೂ ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು. ಉಪತಹಸೀಲ್ದಾರ್ ವೀರೇಶ ಬಡಿಗೇರ, ಶಿರಸ್ತೆದಾರ ಸುಭಾಸ ವಡವಡಗಿ, ಮಲ್ಲಿಕಾರ್ಜುನ ತುಪ್ಪದ. ಆಕಾಶ, ಕಟ್ಟಿಮನಿ, ಎಂ.ಬಿ. ಮಠ, ಲಮಾಣಿ ಸೇರಿದಂತೆ ಕಚೇರಿ ಸಿಬ್ಬಂದಿ ಪಾಲ್ಗೊಂಡಿದ್ದರು.