ದಾವಣಗೆರೆ: ವಿಶ್ವಗುರು ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿಯನ್ನು ಜಿಲ್ಲಾ ವರದಿಗಾರರ ಕೂಟದಿಂದ ಆಚರಿಸಲಾಯಿತು.
ಹಿರಿಯ ಪತ್ರಕರ್ತ ದೇವೇಂದ್ರಪ್ಪ ಮಾತನಾಡಿ, ಜಾತಿ ವ್ಯವಸ್ಥೆಯ ವಿರುದ್ಧ ಬಸವಾದಿ ಶರಣ-ಶರಣೆಯರು ಧ್ವನಿ ಎತ್ತಿದ್ದರು. ಸಮಾನತೆ ತರಲು, ಮೇಲು-ಕೀಳೆಂಬ ತಾರತಮ್ಯ ನಿವಾರಣೆಗಾಗಿ ಬಸವಣ್ಣವರು ಅಂತರ್ಜಾತಿ ವಿವಾಹಕ್ಕೆ ಮುಂದಾದರು ಎಂದರು.
ಭೋವಿ ಸಮಾಜದ ಡಿ.ಬಸವರಾಜ ಮಾತನಾಡಿ, ನಾವೆಲ್ಲರೂ ಬಸವಾದಿ ಶರಣ-ಶರಣೆಯರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕಾಗಿದೆ ಎಂದು ಕರೆ ನೀಡಿದರು.ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್ ಮಾತನಾಡಿದರು. ಕೂಟದ ಹಿರಿಯರಾದ ಆರ್.ಎಸ್. ತಿಪ್ಪೇಸ್ವಾಮಿ, ಆರ್.ರವಿಬಾಬು, ದೇವಿಕಾ ಸುನಿಲ್, ಪಿ.ಎಸ್.ಲೋಕೇಶ, ರಮೇಶ, ರಾಮಮೂರ್ತಿ, ಪುನೀತ್ ಆಪ್ತಿ, ನಿಂಗಪ್ಪ, ಅನಿಲಕುಮಾರ್ ವಿ.ಭಾವಿ, ರವಿ ಭುವನೇಶ್ವರಿ, ಭಾಸ್ಕರ, ಭೋವಿ ಸಮಾಜದ ಮುಖಂಡರಾದ ಎಚ್.ಚಂದ್ರಪ್ಪ, ಎಚ್.ಮಂಜುನಾಥ, ಎಸ್.ಜಿ.ಸೋಮಶೇಖರ, ಮಂಜುನಾಥ, ಎಚ್.ಬಸವರಾಜ, ಬಿ.ಚೌಡೇಶ, ಗಿರಿಧರ ಸಾತಾಲ್, ಡಿ.ಶಿವಕುಮಾರ, ಗಣೇ ಶ, ಬಿ.ಎಚ್.ಉದಯಕುಮಾರ, ಬಿ.ಎಸ್.ಸುರೇಶ, ನೇರ್ಲಿಗೆ ಎಸ್.ಡಿ.ರಾಜೇಶ, ಸಿ.ರಮೇಶ, ಗಿರಿಧರ ಇತರರು ಇದ್ದರು.