ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಚಳ್ಳಕೆರೆ ನಗರದಲ್ಲಿ ಸೋಮವಾರ ವೀರಶೈವ ಸಮಾಜ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಸವ ಮಂಟಪ ನಿರ್ಮಾಣ ಕಾರ್ಯಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿ, ಬಸವಣ್ಣನವರ ಕಾಲದ ಸಾಮಾಜಿಕ ಬದಲಾವಣೆ ಈ ಜಗತ್ತಿನ ಇತಿಹಾಸದಲ್ಲಿ ದಾಖಲಾಗುವಂತಹದ್ದು. ಶೋಷಿತ ಸಮುದಾಯಗಳಿಗೆ ದನಿಯಾಗುವ ಕೆಲಸವ ಹಾಗೂ ಅವರಿಗೊಂದು ಸಾಮಾಜಿಕ ಸ್ಥಾನ ಮಾನ ಕಲ್ಪಿಸುವ ನಿಟ್ಟಿನಲ್ಲಿ ಅಂದೇ ಬಸವಣ್ಣ ಮುಂದಡಿ ಇಟ್ಟಿದ್ದರು ಎಂದರು.
ಸ್ವಾತಂತ್ರ್ಯಾನಂತರ ನಾವು ಕಾಣುತ್ತಿರುವ ಸಂಸತ್ ವ್ಯವಸ್ಥೆಯ 12 ನೇ ಶತಮಾನದಲ್ಲಿ ಅನುಭವ ಮಂಟಪ ಆರಂಭಿಸುವ ಮೂಲಕ ಭವಿಷ್ಯದ ಪ್ರಜಾಸತ್ತಾತ್ಮಕ ನೆಲೆಗಳಿಗೆ ಬಸವಣ್ಣ ಅಂದೇ ಪೀಠಿಕೆ ಒದಗಿಸಿದ್ದರು. ಆಲಕ್ಷಿತ ಜನಸಮುದಾಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಸಾಮಾಜಿಕ ಸ್ಥಾನಮಾನ ಸಿಗುವಂತೆ ಮಾಡಿದವರು ಬಸವಾದಿ ಶರಣರು. ಇಂತಹ ಶರಣರ ಆಶಯಗಳನ್ನು ಈಡೇರಿಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ಬದ್ದವಾಗಿದೆ ಎಂದರು.ಇಂದಿರಾ ಗಾಂಧಿ ಕಾಲದಿಂದಲೂ ಕಾಂಗ್ರೆಸ್ ಪಕ್ಷ ಬಡವರ, ನಿರ್ಲಕ್ಷಿತರ ಪರವಾಗಿ ಹೋರಾಡುತ್ತಾ ಬಂದಿದೆ. ಈಗಲೂ ಕೂಡ ಕಾಂಗ್ರೆಸ್ ಸರ್ಕಾರ ಬಸವಣ್ಣರ ಕಾರ್ಯಗಳನ್ನು ನಿಜ ಅರ್ಥದಲ್ಲಿ ಅನುಸರಿಸುತ್ತಿದೆ. ಮುಖ್ಯಮಂತ್ರಿ ಅನುದಾನದಡಿಯಲ್ಲಿ ಒಂದು ಕೋಟಿ ವೆಚ್ಚದಲ್ಲಿ ಚಳ್ಳಕೆರೆ ನಗರದಲ್ಲಿ ಬಸವ ಮಂಟಪ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಬಸವಣ್ಣನ ಆಶಯಗಳ ಕೇವಲ ಮಾತಿನಲ್ಲಿ ಉಳಿಸಿಕೊಳ್ಳದೆ ನಿಜದನಿಯಲ್ಲಿ ಆಚರಿಸುವ ಪ್ರಯತ್ನಗಳು ಸಾರ್ವತ್ರಿಕಗೊಳ್ಳಬೇಕು ಎಂದರು.