ಶೋಷಿತರ ಮೇಲೆತ್ತಲು ಪ್ರಯತ್ನಿಸಿದ್ದ ಬಸವಣ್ಣ: ಪ್ರೊ. ಎಸ್.ಯು. ಸಜ್ಜನಶೆಟ್ರು

KannadaprabhaNewsNetwork |  
Published : Aug 26, 2026, 02:45 AM IST
ಪೊಟೋ-ಲಕ್ಷ್ಮೇಶ್ವರ ಸಮೀಪದ ಗೊಜನೂರು ಗ್ರಾಮದಲ್ಲಿ ನಡೆದ ವಚನ ಶ್ರಾವಣ-೨೦೨೬ ಕಾರ್ಯಕ್ರಮದಲ್ಲಿ ಪ್ರೊ. ಎಸ್.ಯು.ಸಜ್ಜನಶೆಟ್ರು ಮಾತನಾಡಿದರು. | Kannada Prabha

ಸಾರಾಂಶ

ರಾಜಪ್ರಭುತ್ವದ ಕಾಲದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಿತ್ತಿದ ಬಸವಣ್ಣನವರು ಸಮಾಜದಲ್ಲಿ ತುಳಿತಕ್ಕೊಳಗಾದವರನ್ನು ಮೇಲಕ್ಕೆತ್ತಿ, ಅವರಿಗೆ ಗೌರವಯುತ ಬದುಕಿನ ಅವಕಾಶ ಕಲ್ಪಿಸಿದರು.

ಲಕ್ಷ್ಮೇಶ್ವರ: ವಚನ ಸಾಹಿತ್ಯ ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ಹಾಗೂ ಅನುಸರಿಸಲು ಸರಳವಾಗಿರುವುದರಿಂದ ಹೆಚ್ಚು ಜನಪ್ರಿಯವಾಗಿವೆ ಎಂದು ಪ್ರೊ. ಎಸ್.ಯು. ಸಜ್ಜನಶೆಟ್ರು ಹೇಳಿದರು.

ಸಮೀಪದ ಗೊಜನೂರು ಗ್ರಾಮದ ಗ್ರಾಮದೇವತೆ ದೇವಸ್ಥಾನದ ಆವರಣದಲ್ಲಿ ಸೋಮವಾರ ಬಸವ ದಳ, ಬಸವ ಕೇಂದ್ರ ಹಾಗೂ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಮಾತನಾಡಿದರು.

೧೨ನೇ ಶತಮಾನಕ್ಕೂ ಮುನ್ನ ಪಾಂಡಿತ್ಯಪೂರ್ಣ ಸಾಹಿತ್ಯವಿದ್ದರೂ ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತಹ ಅನುಭಾವ ಸಾಹಿತ್ಯದ ಕೊರತೆ ಇತ್ತು. ಆದರೆ ಶರಣರ ಅನುಭವ, ಚಿಂತನೆ ಹಾಗೂ ಬದುಕಿನ ಸತ್ಯಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ವಚನಗಳ ಮೂಲಕ ನೀಡಲಾಯಿತು.

ಅನುಭವ ಮಂಟಪದಲ್ಲಿ ನಡೆದ ಚಿಂತನೆ ಮತ್ತು ಅನುಭಾವದ ಫಲವಾಗಿ ಹೊರಹೊಮ್ಮಿದವುಗಳೇ ವಚನಗಳು. ರಾಜಪ್ರಭುತ್ವದ ಕಾಲದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಿತ್ತಿದ ಬಸವಣ್ಣನವರು ಸಮಾಜದಲ್ಲಿ ತುಳಿತಕ್ಕೊಳಗಾದವರನ್ನು ಮೇಲಕ್ಕೆತ್ತಿ, ಅವರಿಗೆ ಗೌರವಯುತ ಬದುಕಿನ ಅವಕಾಶ ಕಲ್ಪಿಸಿದರು ಎಂದರು.

ವಚನ ಶ್ರಾವಣ ಕುರಿತು ಪ್ರಾಸ್ತಾವಿಕವಾಗಿ ಪ್ರಕಾಶ ಅಸುಂಡಿ ಮಾತನಾಡಿದರು. ಗ್ರಾಮದ ಪುಟಾಣಿ ಮಕ್ಕಳಾದ ಅಂಜು ಪರಸಣ್ಣವರ್, ಶಿವರಾಜ್ ಶಿರಹಟ್ಟಿ, ವೈಷ್ಣವಿ ಪಾಟೀಲ್, ಗೌರಮ್ಮ ಕುಸುಗಲ್, ಶರಣರ ವೇಷಭೂಷಣ ಧರಿಸಿ ಗಮನ ಸೆಳೆದರು.

ಬಸವದಳದ ಶರಣೆಯರಿಂದ ಪ್ರಾರ್ಥನೆ ಜರುಗಿತು, ವಿ.ಕೆ. ಕರಿಗೌಡ್ರ, ಎಂ.ಬಿ. ಲಿಂಗದಾಳ, ಶರಣು ಸಿನ್ನೂರ, ಎನ್.ಎಂ. ಪವಾಡಿಗೌಡ್ರ, ಶೇಖಣ್ಣ ಕವಳಿಕಾಯಿ, ಪದ್ಮಾವತಿ ಹಂಜಿಗಿ, ಗಂಗಮ್ಮ ಹೂಗಾರ, ಶಂಕರಗೌಡ ಪಾಟೀಲ, ಶಿವನಗೌಡ ಪಾಟೀಲ, ಶೇಖರಪ್ಪ ಸೊರಟೂರ, ಹನುಮಂತಗೌಡ ದೊಡ್ಡಗೌಡ್ರ, ಶಿವನಗೌಡ ಮೂಲಿಮನಿ, ಚಿನ್ನಪ್ಪ ಸಂಶಿ, ಹನುಮಂತಪ್ಪ ಯಳವತ್ತಿ, ನಿಂಗನಗೌಡ ಪಾಟೀಲ(ಕಲ್ಮನಿ), ಬಸಪ್ಪ ಮಜ್ಜಿಗುಡ್ಡ, ಮಹಾಂತಪ್ಪ ಸೊರಟೂರ, ಫಕ್ಕೀರೇಶ ಕಲ್ಲೂರು, ಬಸವರಾಜ ದನದಮನಿ, ಶಿವರಾಜಗೌಡ ಪಾಟೀಲ, ಸುಧಾ ಅಂಗಡಿ, ಗಿರಿಜಾ ಚಿಂಚಲಿಮಠ ಮುಂತಾದವರಿದ್ದರು. ಚನ್ನವೀರಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಚಂದ್ರಗೌಡ ದೊಡ್ಡಗೌಡ್ರ ಸ್ವಾಗತಿಸಿದರು. ಬಡಿಗಣ್ಣವರ ವಂದಿಸಿದರು. ಬಸವದಳದ ಶರಣೆಯರಿಂದ ವಚನ ಮಂಗಲ ಜರುಗಿತು. ಬಸವರಾಜ ಸಂಶಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೀಸಲು ಅರಣ್ಯದಲ್ಲಿ ಕಳ್ಳ ಬೇಟೆ ಯತ್ನ: ಮೂವರು ವಶಕ್ಕೆ
ಕೊಡಗಿನಲ್ಲಿ ಮುಸಲಧಾರೆ: ತ್ರಿವೇಣಿ ಸಂಗಮ ಮುಳುಗಡೆ