ಮೂಢ ನಂಬಿಕೆ ತೊಡೆದು ಹಾಕಲು ಹೋರಾಡಿದ ಬಸವಣ್ಣ: ಡಾ.ಅಜಯಸಿಂಗ್

KannadaprabhaNewsNetwork |  
Published : Apr 03, 2024, 01:30 AM IST
ಜೇವರ್ಗಿ : ಪಟ್ಟಣದ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ತಾಲೂಕು ಬಸವಕೇಂದ್ರದಿಂದ ಆಯೋಜಿಸಿದ್ದ ಶರಣ ಸಂಗಮ ಕಾರ‍್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಗುರುಮಿಠಕಲ್‌ನ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಡಾ.ಅಜಯಸಿಂಗ್, ದೊಡ್ಡಪ್ಪಗೌಡ ಪಾಟೀಲ್, ಶಿವರಾಜ ಪಾಟೀಲ್, ರಾಜಶೇಖರ ಸೀರಿ, ಶರಣಬಸವ ಕಲ್ಲಾ ಇದ್ದರು. | Kannada Prabha

ಸಾರಾಂಶ

ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಸಮಾಜದಲ್ಲಿ ಬೇರೂರಿದ್ದ ಮೂಢ ನಂಬಿಕೆ, ಕಂದಾಚಾರಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಜೀವನದುದ್ದಕ್ಕೂ ಹೋರಾಟ ನಡೆಸಿದ್ದಾರೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ.ಅಜಯಸಿಂಗ್ ಹೇಳಿದರು.

ಕನ್ನಡಪ್ರಭ ವಾರ್ತೆ ಜೇವರ್ಗಿ

ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಸಮಾಜದಲ್ಲಿ ಬೇರೂರಿದ್ದ ಮೂಢ ನಂಬಿಕೆ, ಕಂದಾಚಾರಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಜೀವನದುದ್ದಕ್ಕೂ ಹೋರಾಟ ನಡೆಸಿದ್ದಾರೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ.ಅಜಯಸಿಂಗ್ ಹೇಳಿದರು.

ಅವರು ಪಟ್ಟಣದ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ತಾಲೂಕು ಬಸವಕೇಂದ್ರದಿಂದ ಆಯೋಜಿಸಿದ್ದ ಶರಣ ಸಂಗಮ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಟ್ಟಣದಲ್ಲಿ ಮಹಾತ್ಮ ಬಸವೇಶ್ವರರ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ ಗೊಳಿಸಲಾಗುವುದು. ಅಣ್ಣ ಬಸವಣ್ಣನವರು ಸಾಮಾಜಿಕ ಸಮಾನತೆಯ ಜೊತೆಗೆ ಸ್ತ್ರೀ ಸಮಾನತೆಗಾಗಿ ಹೊರಾಡಿದ ಮಹಾನ ಶರಣರಾಗಿದ್ದರು, ಬಸವಣ್ಣನವರು ಅನೇಕ ವಚನಗಳನ್ನು ರಚಿಸುವ ಮೂಲಕ ಮನುಕುಲಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಇಂಡಿಯನ್ ಐಡಲ್ ಮತ್ತು ಕನ್ನಡ ಕೋಗಿಲೆ ಗಾಯಕಿ ಕು. ಶಿವಾನಿ ಶಿವದಾಸ ಸ್ವಾಮಿ ಸಂಗೀತ ಸೇವೆ ಸಲ್ಲಿಸಿದರು. ಕಾರ‍್ಯಕ್ರಮದ ದಾಸೋಹಿಗಳು ಲಿಂ. ಬಸವಂತರಾಯ ಕಲ್ಲಾ ಅವರ ಸ್ಮರಣೋತ್ಸವ ನಿಮಿತ್ತ ಡಾ.ನಾಗರಾಜ ಕಲ್ಲಾ, ಡಾ.ಪವನಕುಮಾರ ಕಲ್ಲಾ, ಮಹೇಶ ಕಲ್ಲಾ ದಾಸೋಹಿಸೇವೆ ಸಲ್ಲಿಸಿದರು.

ಕಾರ‍್ಯಕ್ರಮದಲ್ಲಿ ಗುರುಮಿಠಕಲ್‌ನ ಖಾಸಾ ಮಠದ ಪೀಠಾಧಿಪತಿ ಶ್ರೀ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಷಣ್ಮುಖ ಶಿವಯೋಗಿ ಟ್ರಸ್ಟ್ ಕಮಿಟಿ ಅಧ್ಯಕ್ಷ ರಾಜಶೇಖರ ಸೀರಿ, ಬಸವಕೇಂದ್ರದ ತಾಲೂಕಾಧ್ಯಕ್ಷ ಶರಣಬಸವ ಕಲ್ಲಾ, ಬಸವಕೇಂದ್ರ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಪಾಟೀಲ್ ಸೇಡಂ, ಪ್ರಮುಖರಾದ ಶಿವನಗೌಡ ಹಂಗರಗಿ, ವಿಜಯಕುಮಾರ ಪಾಟೀಲ್ ಸೇಡಂ, ಸಂಗಣ್ಣಗೌಡ ಪಾಟೀಲ್ ಗುಳ್ಯಾಳ, ಷಣ್ಮುಖಪ್ಪ ಹಿರೇಗೌಡ, ನೀಲಕಂಠ ಅವುಂಟಿ, ಸದಾನಂದ ಪಾಟೀಲ್, ಕಂಠೆಪ್ಪ ಮಾಸ್ತರ, ಅವ್ವಣ್ಣಗೌಡ ಬಿರಾದಾರ, ಬಾಪುಗೌಡ ಬಿರಾಳ, ಈರಣ್ಣ ಭೂತಪೂರ, ದೇವಿಂದ್ರ ಹಳಿಮನಿ, ರಾಮಣ್ಣ ತೊನಸಳ್ಳಿ ಸೇರಿದಂತೆ ನೂರಾರು ಬಸವಾಭಿಮಾನಿಗಳು ಶರಣ ಸಂಗಮ ಕರ‍್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಮಟ್ಟದ ಸ್ಕ್ವಾಶ್ ಚಾಂಪಿಯನ್‌ಶಿಪ್: ಹರಿಹರ ತಂಡಕ್ಕೆ ರನ್ನರ್ ಅಪ್ ಟ್ರೋಫಿ
ಬೀದಿ ದೀಪ ಅಳವಡಿಸಲು ಒತ್ತಾಯಿಸಿ ಪ್ರತಿಭಟನೆ