ಜಗತ್ತಿಗೆ ಬೆಳಕು ನೀಡಿ ಜಗಜ್ಯೋತಿ ಎನಿಸಿಕೊಂಡವರು ಬಸವಣ್ಣ: ವಿರಕ್ತಮಠದ ಶ್ರೀ

KannadaprabhaNewsNetwork |  
Published : Apr 28, 2025, 12:46 AM IST
ಕ್ಯಾಪ್ಷನ26ಕೆಡಿವಿಜಿ34 ದಾವಣಗೆರೆಯಲ್ಲಿ ಬಸವ  ಜಯಂತಿ ಅಂಗವಾಗಿ ವಿನೋಬನಗರದಲ್ಲಿ ನಡೆದ ಪ್ರಭಾತ್ ಪೇರಿಗೆ ಡಾ.ಬಸವಪ್ರಭು ಸ್ವಾಮೀಜಿ, ಪಾಲಿಕೆ ಮಾಜಿ ಸದಸ್ಯ ಎ.ನಾಗರಾಜ ಚಾಲನೆ ನೀಡಿದರು. | Kannada Prabha

ಸಾರಾಂಶ

ಬಸವಣ್ಣನವರ ವಚನದಂತೆ ಎನಗಿಂತ ಕಿರಿಯರಿಲ್ಲ, ಶಿವಶರಣರಿಗಿಂತ ಹಿರಿಯರಿಲ್ಲ ಎಂಬಂತೆ ನಾವೆಲ್ಲರೂ ದೊಡ್ಡವರಾಗಬೇಕೆಂದರೆ ದೊಡ್ಡತನ, ದೊಡ್ಡಗುಣವನ್ನು ಬೆಳೆಸಿಕೊಳ್ಳಬೇಕು. ಎಲ್ಲರೂ ದೊಡ್ಡವರು ನಾನೇ ಸಣ್ಣವನು ಎಂಬ ಮನೋಭಾವ ನಮ್ಮೊಳಗೆ ಇರಬೇಕು. ಇಡೀ ಜಗತ್ತಿಗೆ ಬೆಳಕನ್ನು ಕೊಡುವಂತಹ ವ್ಯಕ್ತಿಯಾಗಿದ್ದರಿಂದ ಬಸವಣ್ಣ ಜಗಜ್ಯೋತಿ ಎನಿಸಿಕೊಂಡರು ಎಂದು ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಹೇಳಿದರು.

ಜನಜಾಗೃತಿ ಪಾದಯಾತ್ರೆ

ದಾವಣಗೆರೆ: ಬಸವಣ್ಣನವರ ವಚನದಂತೆ ಎನಗಿಂತ ಕಿರಿಯರಿಲ್ಲ, ಶಿವಶರಣರಿಗಿಂತ ಹಿರಿಯರಿಲ್ಲ ಎಂಬಂತೆ ನಾವೆಲ್ಲರೂ ದೊಡ್ಡವರಾಗಬೇಕೆಂದರೆ ದೊಡ್ಡತನ, ದೊಡ್ಡಗುಣವನ್ನು ಬೆಳೆಸಿಕೊಳ್ಳಬೇಕು. ಎಲ್ಲರೂ ದೊಡ್ಡವರು ನಾನೇ ಸಣ್ಣವನು ಎಂಬ ಮನೋಭಾವ ನಮ್ಮೊಳಗೆ ಇರಬೇಕು. ಇಡೀ ಜಗತ್ತಿಗೆ ಬೆಳಕನ್ನು ಕೊಡುವಂತಹ ವ್ಯಕ್ತಿಯಾಗಿದ್ದರಿಂದ ಬಸವಣ್ಣ ಜಗಜ್ಯೋತಿ ಎನಿಸಿಕೊಂಡರು ಎಂದು ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಹೇಳಿದರು.

ನಗರದ ವಿನೋಬನಗರದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಆವರಣದಿಂದ ಬಸವ ಜಯಂತಿ ಪ್ರಭಾತ್ ಪೇರಿಯ ಜನಜಾಗೃತಿ ಪಾದಯಾತ್ರೆಗೆ ಚಾಲನೆ ನೀಡಿ ಶ್ರೀಗಳು ಮಾತನಾಡಿದರು.

ಬಸವಣ್ಣನವರಿಗೆ ಗುರು ಲಿಂಗ ಜಂಗಮ ಎಂದರೆ ಬಹಳ ಪ್ರೀತಿ ಎಂದು ಎಲ್ಲರಲ್ಲೂ ದೇವರನ್ನು ಕಂಡರು. ಅಂತಹ ವ್ಯಕ್ತಿ ನಮ್ಮ ಕನ್ನಡ ನಾಡಿನಲ್ಲಿ ಹುಟ್ಟಿದ್ದು ರಾಜ್ಯ ಸರ್ಕಾರ ಸಾಂಸ್ಕೃತಿಕ ರಾಯಭಾರಿ ಎಂದು ಘೋಷಿಸಿರುವುದು ಎಲ್ಲರಿಗೂ ಸಂತೋಷ ತಂದಿದೆ ಎಂದರು.

ಪಾಲಿಕೆ ಮಾಜಿ ಸದಸ್ಯ ಎ.ನಾಗರಾಜ ಮಾತನಾಡಿ, ಕಳೆದ 15 ವರ್ಷಗಳಿಂದ ನಿರಂತರವಾಗಿ ಈ ಭಾಗದ ಜನರು ಬಸವ ಜಯಂತಿ ಪ್ರಭಾತ್ ಪೇರಿ ಸೇರಿದಂತೆ ಶ್ರೀಮಠದಿಂದ ನಡೆಯುವ ಶರಣ ಸಂಸ್ಕೃತಿ ಉತ್ಸವ, ಜನಜಾಗೃತಿ ಪಾದಯಾತ್ರೆ, ದುಶ್ಚಟಗಳ ಕುರಿತು ಜಾಗೃತಿ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹ ನೀಡುತ್ತ ಬಂದಿದ್ದೇವೆ ಎಂದರು.

ದೂಡಾ ಸದಸ್ಯೆ ವಾಣಿ ಬಕ್ಕೇಶ, ಎನ್.ಬಕ್ಕೇಶ್, ಕಣಕುಪ್ಪಿ ಮುರುಗೇಶಪ್ಪ, ಹಾಸಬಾವಿ ಕರಿಬಸಪ್ಪ, ಪತ್ರಕರ್ತ ಅನಿಲ್ ಬಾವಿ, ಚನ್ನಬಸವ ಶೀಲವಂತ್, ಕೆ.ಸಿ.ಉಮೇಶ, ಮಹಾಂತೇಶ್, ಸುರೇಶ, ಸಂಗಪ್ಪ, ಸೋಮಶೇಖರ, ಲೋಕಣ್ಣ, ಯೋಗೀಶ, ಶ್ರೀನಿವಾಸ, ಬಾಬಣ್ಣ, ಮಂಜಣ್ಣ, ಬಸವರಾಜಪ್ಪ, ಜಗದೀಶ, ಪರಮೇಶ್ವರಪ್ಪ, ಕೊಟ್ರೇಶ, ರಾಮಚಂದ್ರ ರಾಯ್ಕರ್, ಹಾಲೇಶ, ಕುಬೇರಪ್ಪ, ಕೈದಾಳ ಮಂಜಣ್ಣ, ರಾಜು, ಮಹದೇವಮ್ಮ, ಶಿವಬಸಮ್ಮ, ಪ್ರೇರಣ, ಅಪೇಕ್ಷ, ಉಮಾದೇವಿ, ಜ್ಯೋತಿ, ಚಂದ್ರಶೇಖರಪ್ಪ, ಪಂಚಾಕ್ಷರಯ್ಯ, ಸತೀಶ್, ರಮೇಶ, ನಾಗರಾಜ ಅನೇಕರು ಭಾಗವಹಿಸಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...