ಕನ್ನಡಪ್ರಭ ವಾರ್ತೆ ರಾಮನಾಥಪುರ
ಈ ಸಂದರ್ಭದಲ್ಲಿ ಗ್ರಾಮದ ವಿವಿಧ ಸಂಘಸಂಸ್ಥೆಗಳು ಗ್ರಾಮಸ್ಥರು ಸೇರಿ ಸರಿಯಾಗಿ 12 ಗಂಟೆಗೆ ಸುಮಾರು 30 ಅಡಿ ಎತ್ತರದ ರಥದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ರಸ್ತೆಗಳಲ್ಲೂ ರಥವನ್ನು ಎಳೆಯಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿಗಳಾದ ವಾಸುದೇವ ಅನಂತನಾರಾಯಣರವರು, ಮುಖ್ಯ ಅರ್ಚಕ ವೀ ಸಂಪತ್ ಅಯ್ಯಂಗಾರ್ ಮುಂತಾದವರು ಇದ್ದರು. ರಥೋತ್ಸವದ ಹಿನ್ನೆಲೆಯಲ್ಲಿ ವಿವಿಧ ಸಮಾಜದವರು ಭಕ್ತರುಗಳಿಗೆ ದಾಸೋಹ, ಮಜ್ಜಿಗೆ, ಪಾನಕ ಮುಂತಾದ ವ್ಯವಸ್ಥೆಯನ್ನು ಮಾಡಿಸಿಕೊಟ್ಟರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ನಾರಾಯಣ್, ರವೀಂದ್ರ, ಟಿ.ಸಿ. ಅಂಬರೀಶ್, ಬಿ. ಆರ್. ಮಧುಕರ್, ಬಿ.ವಿ. ಸುರೇಶ್, ಕೆಂಡಗಣ್ಣ, ರಂಜಿನಿ, ಯೋಗೇಶ್, ಕುಮಾರೇಗೌಡ, ಜೆ. ನಾಗರಾಜು, ನವೀನ್, ವಾಗೀಶ್, ರವಿ, ಶಿವು ಮುಂತಾದವರು ಭಾಗವಹಿಸಿದ್ದರು.