ಬಸವೇಶ್ವರ ಬ್ಯಾಂಕ್‌ಗೆ ಅಗರವಾಲ ಅಧ್ಯಕ್ಷ, ಬಸವರಾಜ ಉಪಾಧ್ಯಕ್ಷ

KannadaprabhaNewsNetwork |  
Published : Jan 10, 2025, 12:45 AM IST
9ಬಿಎಸ್ವಿ01- ಬಸವನಬಾಗೇವಾಡಿಯ ಬಸವೇಶ್ವರ ಕೋ ಅಪರೇಟಿವ್ಹ ಬ್ಯಾಂಕಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಲೋಕನಾಥ ಅಗರವಾಲ ಅವರನ್ನು ಈರಣ್ಣ ಪಟ್ಟಣಶೆಟ್ಟಿ ಸನ್ಮಾನಿಸಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಪಟ್ಟಣದ ಪ್ರತಿಷ್ಠಿತ ಬಸವೇಶ್ವರ ಕೋ ಅಪರೇಟಿವ್ ಬ್ಯಾಂಕ್‌ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಗುರುವಾರ ಜರುಗಿದ ಚುನಾವಣೆಯಲ್ಲಿ ಎರಡು ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆಯಿತು. ನಾಮಪತ್ರ ಸಲ್ಲಿಕೆ ವೇಳೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅಧ್ಯಕ್ಷರಾಗಿ ಲೋಕನಾಥ ಅಗರವಾಲ, ಉಪಾಧ್ಯಕ್ಷರಾಗಿ ಬಸವರಾಜ ಗೊಳಸಂಗಿ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಎಸ್.ಎಂ.ಹಂಗರಗಿ ಘೋಷಣೆ ಮಾಡಿದರು. ಬಸವೇಶ್ವರ ಕೋ ಅಪರೇಟಿವ್ ಬ್ಯಾಂಕ್‌ಗೆ ಸತತವಾಗಿ 5ನೇ ಬಾರಿಗೆ ಅಧ್ಯಕ್ಷರಾಗಿ ಲೋಕನಾಥ ಅಗರವಾಲ, 2ನೇ ಬಾರಿಗೆ ಉಪಾಧ್ಯಕ್ಷರಾಗಿ ಬಸವರಾಜ ಗೊಳಸಂಗಿ ಆಯ್ಕೆಯಾಗಿ ದಾಖಲೆ ನಿರ್ಮಿಸಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದ ಪ್ರತಿಷ್ಠಿತ ಬಸವೇಶ್ವರ ಕೋ ಅಪರೇಟಿವ್ ಬ್ಯಾಂಕ್‌ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಗುರುವಾರ ಜರುಗಿದ ಚುನಾವಣೆಯಲ್ಲಿ ಎರಡು ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆಯಿತು. ನಾಮಪತ್ರ ಸಲ್ಲಿಕೆ ವೇಳೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅಧ್ಯಕ್ಷರಾಗಿ ಲೋಕನಾಥ ಅಗರವಾಲ, ಉಪಾಧ್ಯಕ್ಷರಾಗಿ ಬಸವರಾಜ ಗೊಳಸಂಗಿ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಎಸ್.ಎಂ.ಹಂಗರಗಿ ಘೋಷಣೆ ಮಾಡಿದರು. ಬಸವೇಶ್ವರ ಕೋ ಅಪರೇಟಿವ್ ಬ್ಯಾಂಕ್‌ಗೆ ಸತತವಾಗಿ 5ನೇ ಬಾರಿಗೆ ಅಧ್ಯಕ್ಷರಾಗಿ ಲೋಕನಾಥ ಅಗರವಾಲ, 2ನೇ ಬಾರಿಗೆ ಉಪಾಧ್ಯಕ್ಷರಾಗಿ ಬಸವರಾಜ ಗೊಳಸಂಗಿ ಆಯ್ಕೆಯಾಗಿ ದಾಖಲೆ ನಿರ್ಮಿಸಿದರು.

ಬ್ಯಾಂಕ್‌ ಸಭಾಭವನದಲ್ಲಿ ಜರುಗಿದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಸಹಕಾರಿ ಮಹಾಮಂಡಳದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಬ್ಯಾಂಕ್‌ನ ಪ್ರಗತಿಗೆ ಲೋಕನಾಥ ಅಗರವಾಲ ಅವರ ಕೊಡುಗೆ ಅಪಾರವಾಗಿದೆ. ನಷ್ಟದಲ್ಲಿದ್ದ ಬ್ಯಾಂಕ್‌ನ್ನು ಉನ್ನತ ಮಟ್ಟಕ್ಕೆ ತಂದು ಸುಮಾರು ಮೂರು ದಶಕಗಳಿಂದ ಅವರು ಅಧ್ಯಕ್ಷರಾಗಿ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಪ್ರಗತಿಗೆ ನಿಸ್ವಾರ್ಥತೆಯಿಂದ ದುಡಿಯುತಿದ್ದಾರೆ. ಬ್ಯಾಂಕ್‌ ಪ್ರಗತಿಗೆ ಲೋಕನಾಥ ಅಗರವಾಲ ಅವರ ಕೊಡುಗೆ ಅಪಾರ ಎಂದು ಹೇಳಿದರು.ಕರ್ನಾಟಕ ರಾಜ್ಯ ವಿಮಾ ಸಹಕಾರಿ ಮಹಾ ಮಂಡಳದ ಅಧ್ಯಕ್ಷ ಶಿವನಗೌಡ ಬಿರಾದಾರ ಮಾತನಾಡಿ, ಬ್ಯಾಂಕಿನ ಸಂಸ್ಥಾಪಕ ದಿ.ಆರ್.ಎಂ.ದುಂಬಾಳಿ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಲೋಕನಾಥ ಅಗರವಾಲ ಅವರು ಬ್ಯಾಂಕಿನ ಪ್ರಗತಿಗೆ ಗ್ರಾಹಕರ ಜೊತೆ ಆಡಳಿತ ಮಂಡಳಿಯ ನಿರ್ದೇಶಕರ ಸಲಹೆ ಸೂಚನೆಗಳ ಮೇರೆಗೆ, ಸಿಬ್ಬಂದಿ ಸಹಕಾರದೊಂದಿಗೆ ರಿಸರ್ವ್ ಬ್ಯಾಂಕ್‌ನ ನಿಯಮಾನುಸಾರ ಕಳೆದ 25ವರ್ಷಗಳಿಂದ ಬ್ಯಾಂಕ್‌ ಅಧ್ಯಕ್ಷರಾಗಿ ಸುಮಾರು 38 ವರ್ಷದಿಂದ ನಿರ್ದೇಶಕರಾಗಿ ಬ್ಯಾಂಕ್‌ನ್ನು ಲಾಭದತ್ತ ತೆಗೆದುಕೊಂಡು ಬಂದಿದ್ದಾರೆ. ಅವರು ಮತ್ತೊಮ್ಮೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು ಎಲ್ಲ ನಿರ್ದೇಶಕರ ಬ್ಯಾಂಕ್‌ನ ಅಭಿವೃದ್ಧಿಗೆ ಒಗ್ಗಟ್ಟಿನ ಪ್ರದರ್ಶನವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಜನತಾ ಬಜಾರ ಅಧ್ಯಕ್ಷ ಬಾಲಚಂದ್ರ ಮುಂಜಾನೆ, ಬ್ಯಾಂಕ್‌ ನಿರ್ದೇಶಕರಾದ ಶಂಕರಗೌಡ ಬಿರಾದಾರ, ಅನಿಲ ದುಂಬಾಳಿ, ನೀಲಪ್ಪ ನಾಯಕ, ಉಮೇಶ ಹಾರಿವಾಳ, ಜಗದೀಶ ಕೊಟ್ರಶೆಟ್ಟಿ, ಸಿದ್ರಾಮಪ್ಪ ಕಿಣಗಿ, ಶ್ರೀಶೈಲ ಪತ್ತಾರ, ಶಿವಾನಂದ ಪಟ್ಟಣಶೆಟ್ಟಿ, ಕಮಲಾ ತಿಪ್ಪನಗೌಡರ, ಸುರೇಖಾ ಪಡಶೆಟ್ಟಿ, ಬ್ಯಾಂಕ್‌ ವ್ಯವಸ್ಥಾಪಕ ಪಿ.ವೈ.ಬ್ಯಾಕೋಡ ಸೇರಿದಂತೆ ಇತರರು ಇದ್ದರು. ಬ್ಯಾಂಕ್‌ ನಿರ್ದೇಶಕ ಶಂಕರಗೌಡ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಬ್ಯಾಂಕಿನ ಮಾರಾಟಾಧಿಕಾರಿ ರಾಘವೇಂದ್ರ ಚಿಕ್ಕೊಂಡ ಸ್ವಾಗತಿಸಿ, ನಿರೂಪಿಸಿದರು. ಎಂ.ಜಿ.ಆದಿಗೊಂಡ ವಂದಿಸಿದರು.ಕೋಟ್‌

ಕಳೆದ 38 ವರ್ಷಗಳಿಂದ ಬ್ಯಾಂಕಿನ ನಿರ್ದೇಶಕನಾಗಿ, 5ನೇ ಅವಧಿಗೆ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿರುವುದು ನನಗೆ ಸಂತಸ ತರುವ ಜೊತೆಗೆ ಹೆಮ್ಮೆಯಾಗುತ್ತಿದೆ. ಬ್ಯಾಂಕ್‌ನ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರು ಹಾಗೂ ಸಹಕಾರಿ ಮುಖಂಡರು ನನ್ನ ಮೇಲೆ ನಂಬಿಕೆ ಇಟ್ಟು 5ನೇ ಬಾರಿಗೆ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ. ಅವರ ವಿಶ್ವಾಸದಂತೆ ಬ್ಯಾಂಕ್‌ನ್ನು ಮತ್ತಷ್ಟು ಪ್ರಗತಿಯತ್ತ ತೆಗೆದುಕೊಂಡು ಹೋಗಲಾಗುವುದು.ಲೋಕನಾಥ ಅಗರವಾಲ, ನೂತನ ಅಧ್ಯಕ್ಷ

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ