ಬಸವೇಶ್ವರ ವೃತ್ತ ದುರಸ್ತಿ ನಿರ್ಲಕ್ಷ ಖಂಡನೀಯ

KannadaprabhaNewsNetwork |  
Published : Apr 20, 2026, 03:00 AM IST
19ಇನದಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ನಗರದ ಪ್ರಮುಖ ರಸ್ತೆಯಲ್ಲಿರುವ ಶ್ರೀ ಬಸವೇಶ್ವರ ವೃತ ದುರಸ್ತಿ ಕಾಣದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ನಗರದ ಯುವ ಮುಖಂಡ ಮಹೇಶ ಕುಂಬಾರ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಇಂಡಿ

ನಗರದ ಪ್ರಮುಖ ರಸ್ತೆಯಲ್ಲಿರುವ ಶ್ರೀ ಬಸವೇಶ್ವರ ವೃತ ದುರಸ್ತಿ ಕಾಣದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ನಗರದ ಯುವ ಮುಖಂಡ ಮಹೇಶ ಕುಂಬಾರ ಆರೋಪಿಸಿದ್ದಾರೆ.

ಬಸವ ಜಯಂತಿ ಇದ್ದರೂ ವೃತ್ತಕ್ಕೆ ಅಳವಡಿಸಿರುವ ಗ್ರ್ಯಾನೆಟ್ ಕಲ್ಲುಗಳು ಕಳಚಿ ಬಿದ್ದಿವೆ. ದುರಸ್ತಿಗೊಳಿಸಿ ವೃತ್ತ ಅಂದಗೊಳಿಸಬೇಕಾದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ನಿರ್ಲಕ್ಷದಿಂದ ಅಸ್ತವ್ಯಸ್ತಗೊಂಡಿದೆ. ಬಸವ ನಾಡಿನಲ್ಲಿ ಹುಟ್ಟಿದ ನಾವು ಬಸವಣ್ಣನವರಿಗೆ ಗೌರವ ತೋರುವ ರೀತಿ ಇದೆಯೇ ಎಂದು ಪ್ರಶ್ನಿಸಿದ್ದಾರೆ. ತಾಲೂಕು ಆಡಳಿತ, ನಗರಸಭೆ ಬಸವೇಶ್ವರ ವೃತ್ತ ದುರಸ್ತಿ ವಿಷಯ ಗಂಭೀರವಾಗಿ ಪರಿಗಣಿಸಿ, ಕಳಚಿ ಬಿದ್ದ ವೃತ್ತದ ಕಲ್ಲುಗಳು ಅಳವಡಿಸಲು ಕ್ರಮ ಕೈಗೊಳ್ಳುವುದರ ಮೂಲಕ ಬಸವಣ್ಣನವರಿಗೆ ಗೌರವ ತೋರಿಸಬೇಕು. ಅಸ್ತವ್ಯಸ್ತವಾಗಿರುವ ವೃತ್ತದಲ್ಲಿಯೇ ಬಸವ ಜಯಂತಿಯಂದು ಬಸವಣ್ಣನವರಿಗೆ ಮಾಲಾರ್ಪಣೆ ಮಾಡುವುದು ಯೋಗ್ಯವಲ್ಲ ಎಂದು ಆರೋಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವೀಯ ಮೌಲ್ಯಗಳೊಡನೆ ಬದುಕಿದರೆ ಜೀವನ ಸಾರ್ಥಕ
ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸಿ