ಕಿಕ್ಕೇರಿ:
ಐಕನಹಳ್ಳಿ ಗ್ರಾಪಂನಲ್ಲಿ ಏರ್ಪಡಿಸಿದ್ದ ಬಸವೇಶ್ವರ 893ನೇ ಜಯಂತಿಯಲ್ಲಿ ಮಾತನಾಡಿ, ನಮ್ಮ ನಾಡು ಶಾಂತಿಯ ಬೀಡಾಗಲು 12ನೇ ಶತಮಾನದಲ್ಲಿಯೇ ಅನುಭವ ಮಂಟಪವನ್ನು ಕಲ್ಯಾಣದಲ್ಲಿ ಸ್ಥಾಪಿಸಿದರು. ವಿಶ್ವದ ಪ್ರಥಮ ಸಂಸತ್ ಇದಾಗಿದ್ದು, ಸರ್ವರಿಗೂ ನ್ಯಾಯ ಸಿಗುವಂತೆ ಈ ಮಂಟಪವನ್ನು ಚರ್ಚಾ ವೇದಿಕೆಯಾಗಿ ಪರಿವರ್ತಿಸಿದರು ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆ ಪರಿಕಲ್ಪನೆಯನ್ನು ತಮ್ಮ ಕಲ್ಯಾಣದಲ್ಲಿ ತೋರಿಸಿಕೊಟ್ಟರು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕವಾಗಿ ಸಮಾನತೆ ದೊರಕಿಸಲು ಬಿಜ್ಜಳ ದೊರೆಯ ಮಂತ್ರಿಯಾಗಿ ಸಾಧಿಸಿ ಜಗಕ್ಕೆ ನೀಡಿದರು. ಮೇಲು ಕೀಳು ಜಾತಿಪದ್ಧತಿ ನಿರ್ಮೂಲನೆಗೆ ಅಂತರಜಾತಿ ವಿವಾಹಕ್ಕೆ ಒತ್ತು ನೀಡಿದ ಮಹಾನ್ ಶಾಂತಿಧೂತರು ಎಂದರು.ಭಕ್ತಿ ಪಂಥದ ಸುಧಾರಕರಾಗಿ, ಕನ್ನಡ ಭಾಷೆ ಗಟ್ಟಿಗೊಳಿಸಲು ವಚನದ ಮೂಲಕ ಬಲು ದೊಡ್ಡ ಸಂದೇಶ ನೀಡಿದ್ದಾರೆ. ಇವರ ವಚನಗಳು ಅಮೃತ ಸಮಾನವಾಗಿದೆ. ಆದರ್ಶ, ವಚನಗಳು, ಸಿದ್ಧಾಂತಗಳನ್ನು ಎಳೆಯ ಮನಸ್ಸಿನಲ್ಲಿ ಉಳಿಯುವಂತೆ ಮಾಡುವುದು ಇಡೀ ಸಮುದಾಯದ ಜವಾಬ್ದಾರಿಯಾಗಿದೆ ಎಂದರು.
ಕಿಕ್ಕೇರಿ, ಮಂದಗೆರೆ, ಮಾದಾಪುರ, ಆನೆಗೊಳ, ಐಕನಹಳ್ಳಿ ಗ್ರಾಪಂ, ವಿವಿಧ ಶಾಲಾ ಕಾಲೇಜುಗಳಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸುವ ಮೂಲಕ ಬಸವೇಶ್ವರರನ್ನು ಸ್ಮರಿಸಲಾಯಿತು.
ಮದ್ದೂರು:ತಾಲೂಕಿನ ಬೆಸಗರಹಳ್ಳಿಯಲ್ಲಿ ಬಸವ ಜಯಂತಿ ಅಂಗವಾಗಿ ಬಸವೇಶ್ವರನ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಪೂಜಾ ಕಾರ್ಯಕ್ರಮ ಹಾಗೂ ನಂತರ ರುದ್ರಾಭಿಷೇಕ ಮಹಾಮಂಗಳಾರತಿ ನಡೆಯಿತು.