ಕಾಂಗ್ರೆಸ್‌ನಲ್ಲಿ ಬಿಗಿ ಹಿಡಿತ ಸಾಧಿಸಿದ ಬಯ್ಯಾಪುರ

KannadaprabhaNewsNetwork |  
Published : Sep 13, 2026, 01:30 AM IST
12ಕೆಪಿಎಲ್ಎನ್ಜಿ01  | Kannada Prabha

ಸಾರಾಂಶ

ಕಾಂಗ್ರೆಸ್ನಲ್ಲಿ ತೀವ್ರ ಪೈಪೋಟಿ, ಪ್ರತಿಷ್ಟಿತ ಹಾಗೂ ಘಟಾನುಘಟಿ ನಾಯಕರ ಅಖಾಡವಾಗಿದ್ದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಯಲ್ಲಿ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ಪಕ್ಷದಲ್ಲಿ ಬಿಗಿಹಿಡಿತ ಸಾಧಿಸಿದ್ದಾರೆ.

ಗುರುರಾಜ ಗೌಡೂರು

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಕಾಂಗ್ರೆಸ್ನಲ್ಲಿ ತೀವ್ರ ಪೈಪೋಟಿ, ಪ್ರತಿಷ್ಟಿತ ಹಾಗೂ ಘಟಾನುಘಟಿ ನಾಯಕರ ಅಖಾಡವಾಗಿದ್ದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಯಲ್ಲಿ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ಪಕ್ಷದಲ್ಲಿ ಬಿಗಿಹಿಡಿತ ಸಾಧಿಸಿದ್ದಾರೆ.

1915ರಲ್ಲಿ ಸ್ಥಾಪನೆಯಾದ ಅಪೆಕ್ಸ್ ಬ್ಯಾಂಕ್ 111 ವರ್ಷಗಳ ಹಿನ್ನೆಲೆ ಹೊಂದಿದೆ. ಘಟಾನುಘಟಿ ರಾಜಕೀಯ ನಾಯಕರು ಬ್ಯಾಂಕ್ ಅಧ್ಯಕ್ಷರಾಗಿ ಅಧಿಕಾರ ನಡೆಸಿ ಪ್ರತಿಷ್ಟಿತ ಬ್ಯಾಂಕ್ ಆಗಿದೆ. ಇಂತಹ ಪ್ರತಿಷ್ಟಿತ ಬ್ಯಾಂಕಿಗೆ ಕಲ್ಯಾಣ ಕರ್ನಾಟಕದಿಂದ ಗುರುಪಾದಪ್ಪ ನಾಗಮಾರಪಳ್ಳಿ ಹೊರತುಪಡಿಸಿ ಅನ್ಯರು ಇಲ್ಲಿ ಹುದ್ದೆಗಳು ಪಡೆಯಲು ಸಾಧ್ಯವಾಗಿರಲಿಲ್ಲ. ಇಂತಹ ಪ್ರತಿಷ್ಟಿತ ಸಂಸ್ಥೆಗೆ ರಾಜಕೀಯ ಕಿರಿಯ ವಯಸ್ಸಿನಲ್ಲಿ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿ ರಾಜಕೀಯ ಕಾರ್ಖಾನೆಗೆ ಕೀರ್ತಿ ತಂದಿದ್ದಾರೆ.

ಪರಿಶಿಷ್ಟ ಜಾತಿಗೆ ಮೀಸಲಾದ ಲಿಂಗಸುಗೂರು ಕ್ಷೇತ್ರದಲ್ಲಿ ಮಾಜಿ ಶಾಸಕ, ಕೆಪಿಸಿಸಿ ಉಪಾಧ್ಯಕ್ಷ ಡಿ.ಎಸ್.ಹೂಲಗೇರಿ ಹಾಗೂ ಶರಣಗೌಡ ಪಾಟೀಲ್ ಬಯ್ಯಾಪುರ ಮಧ್ಯೆ ತೀವ್ರ ಪೈಪೋಟಿ ಇದೆ. ಅಲ್ಲದೇ ಕಾಂಗ್ರೆಸ್‌ನಲ್ಲಿ ಹಿಡಿತ ಸಾಧಿಸಲು ಇಬ್ಬರು ನಾಯಕರು ಹಾವು - ಮುಂಗೂಸಿಯಂತೆ ಕಚ್ಚಾಡುತ್ತಾರೆ. ಪರಸ್ಪರರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿವೆ. ಸ್ಥಳೀಯವಾಗಿ ಕಾಂಗ್ರೆಸ್ನಸ್‌ನಲ್ಲಿ ಬಣ ಮೇಲಾಟ ತಾರಕದಲ್ಲಿ ತೇಲಾಡುತ್ತಿದೆ.

ಸದ್ದು-ಗದ್ದವಿಲ್ಲದೇ ಮೇಲ್ಮಟ್ಟ ರಾಜಕಾರಣದಲ್ಲಿ ಯಶಸ್ಸು ಸಾಧಿಸಲು ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ, ಹಗಲಿರಳು ರಾಜಕೀಯ ಉಸಿರಾಗಿಸಿ ಕೊಂಡಿರುವ ಅಮರೇಗೌಡ ಪಾಟೀಲ್ ಬಯ್ಯಾಪುರ ಮೇಲ್ಮಟ್ಟದ ರಾಜಕೀಯದಲ್ಲಿ ಅತ್ಯಂತ ನಿಕಟ ಸಂಪರ್ಕ ಹೊಂದಿದ್ದು, ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಅಪೆಕ್ಸ್‌ ಬ್ಯಾಂಕ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ರಾಜಕೀಯವಾಗಿ ಅತ್ಯಂತ ಪ್ರತಿಷ್ಟಿತ ಕ್ಷೇತ್ರವಾದ ಲಿಂಗಸುಗೂರಲ್ಲಿ ರಾಜಕೀಯ ಹಿಡಿತ ಸಾಧಿಸಲು ಉಮೇದಿ ಉಂಟು ಮಾಡಿದೆ. ಏಕೆಂದರೆ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಮುಖವಾಗಿ ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷರು, ನಗರ ಯೋಜನಾ ಪ್ರಾಧಿಕಾರ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಬಯ್ಯಾಪುರ ಬಣದ ಮೇಲುಗೈ ಕಾಣಬಹುದಾಗಿದ್ದು ಈಗ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಸ್ಥಾನ ಪಡೆದಿರುವುದು ಬಯ್ಯಾಪುರ ಬಣದಲ್ಲಿ ರಾಜಕೀಯವಾಗಿ ಯಶಸ್ಸು ಸಾಧಿಸಿದ್ದು, ಕಾಂಗ್ರೆಸ್‌ನಲ್ಲಿ ಬಯ್ಯಾಪುರ ಬಿಗಿ ಹಿಡಿತಕ್ಕೆ ಸಾಕ್ಷಿಯಾಗಿದೆ.

ಸಿಎಂ ಡಿ.ಕೆ.ಶಿವಕುಮಾರ, ಸಹಕಾರ ಸಚಿವ ಲಕ್ಷ್ಮಣ ಸವದಿ ಯುವಕನೆಂದು ಭರವಸೆಯಿಂದ ಉಪಾಧ್ಯಕ್ಷ ಸ್ಥಾನ ನೀಡಿದ್ದಾರೆ. ಅಪೆಕ್ಸ್ ಬ್ಯಾಂಕಿನಲ್ಲಿ 15 ವರ್ಷ ಗಳಿಂದ ನಿರ್ದೇಶಕನಾಗಿದ್ದು, ದೊಡ್ಡ ಜವಾಬ್ದಾರಿ ನೀಡಿದ ಮುಖ್ಯಮಂತ್ರಿಗಳು ಹಾಗೂ ಸಚಿವ ಲಕ್ಷ್ಮಣ ಸವದಿಯವರಿಗೆ ಅಭಿನಂದನೆಗಳು ಸಲ್ಲಿಸುತ್ತಾ, ರೈತರ ಹಿತಾಸಕ್ತಿಗೆ ತಕ್ಕಂತೆ ಕೆಲಸ ಮಾಡುವೆ ಎಂದು ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಾಪುರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಜಾಪ್ರಭುತ್ವದಲ್ಲಿ ಯುವ ಮತದಾರರ ಪಾತ್ರ ಮಹತ್ವದ್ದು: ಡಾ.ಕುಮಾರ
ಹಿರೇಮಠ ಸಂಸ್ಥಾನ ಆಧ್ಯಾತ್ಮ ಸಂಸ್ಕಾರದ ನೆಲೆಗಟ್ಟು: ಹಾವಗಿ ಲಿಂಗೇಶ್ವರಶ್ರೀ