ಕನ್ನಡಪ್ರಭ ವಾರ್ತೆ ಬೆಂಗಳೂರು
2023-24ನೇ ಸಾಲಿನ ಬಿಬಿಎಂಪಿ ಬಜೆಟ್‌ನಲ್ಲಿ ಘೋಷಿಸಲಾದ ಒಂದೊಂದೇ ಯೋಜನೆಗಳನ್ನು ಈಗ ಅನುಷ್ಠಾನಗೊಳಿಸಲಾಗುತ್ತಿದೆ. ಒಟ್ಟು 250 ಕಡೆಗಳಲ್ಲಿ ಶಿ ಶೌಚಾಲಯ ಸ್ಥಾಪಿಸುವುದಾಗಿ ಹೇಳಲಾಗಿತ್ತು. ಅದರಲ್ಲಿ ಆರಂಭಿಕ ಹಂತದಲ್ಲಿ 100 ಶೌಚಾಲಯಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
ಈ ಶೌಚಾಲಯಗಳು ಮಹಿಳೆಯರಿಗೆ ಮಾತ್ರ ಮೀಸಲಾಗಿರಲಿದೆ. ಶೌಚಾಲಯದಲ್ಲಿ ಫೀಡಿಂಗ್ ಕೊಠಡಿ, ವಿಶ್ರಾಂತ ಕೊಠಡಿಗಳೂ ನಿರ್ಮಾಣವಾಗಲಿದೆ. ಎಲ್ಲೆಲ್ಲಿ ಶೌಚಾಲಯ ನಿರ್ಮಾಣ ಮಾಡಬೇಕು ಎಂಬ ಬಗ್ಗೆ ಬಿಬಿಎಂಪಿ ಈಗಾಗಲೇ ಸ್ಥಳವನ್ನೂ ಗುರುತಿಸಿ, ಪಟ್ಟಿ ಸಿದ್ಧಪಡಿಸಿದೆ. ಮುಂದಿನ 6 ತಿಂಗಳೊಳಗೆ ನೂತನ ಶೌಚಾಲಯಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಗುರಿಯನ್ನು ಬಿಬಿಎಂಪಿ ಹೊಂದಿದೆ.