ಕನ್ನಡಪ್ರಭ ವಾರ್ತೆ ಬೆಂಗಳೂರು
ಮಕ್ಕಳಿಗೆ ನಾಯಿ ಕೆಮ್ಮು, ದಡಾರ, ಮಂಪ್ಸ್, ಹಿಬ್ ಮೆನಿಂಜೈಟಿಸ್, ಮೆನಿಂಗೊಕೊಕಲ್ ಕಾಯಿಲೆ, ನ್ಯುಮೋಕೊಕಲ್ ಕಾಯಿಲೆ, ಹೆಪಟೈಟಿಸ್ ಹಾಗೂ ಪೊಲಿಯೋದಂತಹ ಗಂಭೀರ ಕಾಯಿಲೆಗಳಿಂದ ದೂರವಿಡಲು ಅಗತ್ಯವಿರುವ ಲಸಿಕೆಗಳನ್ನು ಬಿಬಿಎಂಪಿ ಆರೋಗ್ಯ ವಿಭಾಗದಿಂದ ನೀಡಲಾಗುತ್ತದೆ. ಈ ಲಸಿಕೆಗಳನ್ನು ಮನೆಗೆ ತೆರಳಿ ಲಸಿಕೆ ನೀಡಲು ಪಾಲಿಕೆಯ ಆರೋಗ್ಯ ಸಿಬ್ಬಂದಿಗೆ ದ್ವಿಚಕ್ರ ವಾಹನ ನೀಡುವ ಯೋಜನೆಯೇ ವ್ಯಾಕ್ಸಿನ್ ವ್ಹೀಲ್ ಕಾರ್ಯಕ್ರಮವಾಗಿದೆ.
2 ರಿಂದ 3 ಕೋಟಿ ರು, ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಪ್ರತಿ ವಾರ್ಡ್‌ಗೆ ಒಂದು ದ್ವಿಚಕ್ರ ವಾಹನದಂತೆ 225 ದ್ವಿಚಕ್ರ ವಾಹನ ಖರೀದಿ ಮಾಡಲು ಚಿಂತನೆ ನಡೆಸಲಾಗಿದೆ. ಈ ಕುರಿತು ಬಿಬಿಎಂಪಿ ಆರೋಗ್ಯ ವಿಭಾಗದಿಂದ ಹಣಕಾಸು ವಿಭಾಗಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದು, 2024-25ನೇ ಸಾಲಿನ ಬಜೆಟ್‌ನಲ್ಲಿ ಅನುದಾನ ನೀಡುವಂತೆ ಕೋರಲಾಗಿದೆ.ವಲಯಕ್ಕೆ 1 ಆ್ಯಂಬುಲೆನ್ಸ್:
ತುರ್ತು ಸಂದರ್ಭದಲ್ಲಿ ರೋಗಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲು ಬಿಬಿಎಂಪಿಯ ವಲಯಕ್ಕೆ ಒಂದು ಆ್ಯಂಬುಲೆನ್ಸ್ ಖರೀದಿ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಒಟ್ಟು ಎಂಟು ವಲಯಗಳಿಗೆ ಎಂಟು ಆ್ಯಂಬುಲೆನ್ಸ್ ಖರೀದಿಸಲು ನಿರ್ಧರಿಸಲಾಗಿದೆ.