9ರಂದು ಸಂವಿಧಾನ ಜಾಥಾ: ಪಟ್ಟಣದಲ್ಲಿ ಅದ್ಧೂರಿ ಮೆರವಣಿಗೆ

KannadaprabhaNewsNetwork | Published : Feb 2, 2024 1:11 AM

ಸಾರಾಂಶ

ಪಟ್ಟಣಕ್ಕೆ ಇದೇ 8ರ ಸಂಜೆ ಸಂವಿಧಾನ ಜಾಗೃತಿ ಜಾಥ ಆಗಮಿಸಲಿದ್ದು ಪ್ರವಾಸಿಮಂದಿರದಲ್ಲಿ ತಂಗಲಿದೆ. ಇದೇ 9ರ ಬೆಳಿಗ್ಗೆ ಪ್ರವಾಸಿ ಮಂದಿರದಿಂದ ಮಿನಿ ವಿಧಾನಸೌಧದವರೆಗೆ ಅದ್ಧೂರಿ ಮೆರವಣಿಗೆ ನಡೆಸಲು ಪಟ್ಟಣ ಪಂಚಾಯಿತಿಯಲ್ಲಿ ಗುರುವಾರ ತಹಸೀಲ್ದಾರ್ ತನುಜಾ.ಟಿ.ಸವದತ್ತಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ತೀರ್ಮಾನಿಸ ಲಾಯಿತು.

- ಪಟ್ಟಣದ ಪಂಚಾಯಿತಿಯಲ್ಲಿ ಪೂರ್ವ ಭಾವಿ ಸಭೆಯಲ್ಲಿ ತೀರ್ಮಾನ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪಟ್ಟಣಕ್ಕೆ ಇದೇ 8ರ ಸಂಜೆ ಸಂವಿಧಾನ ಜಾಗೃತಿ ಜಾಥ ಆಗಮಿಸಲಿದ್ದು ಪ್ರವಾಸಿಮಂದಿರದಲ್ಲಿ ತಂಗಲಿದೆ. ಇದೇ 9ರ ಬೆಳಿಗ್ಗೆ ಪ್ರವಾಸಿ ಮಂದಿರದಿಂದ ಮಿನಿ ವಿಧಾನಸೌಧದವರೆಗೆ ಅದ್ಧೂರಿ ಮೆರವಣಿಗೆ ನಡೆಸಲು ಪಟ್ಟಣ ಪಂಚಾಯಿತಿಯಲ್ಲಿ ಗುರುವಾರ ತಹಸೀಲ್ದಾರ್ ತನುಜಾ.ಟಿ.ಸವದತ್ತಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ತೀರ್ಮಾನಿಸ ಲಾಯಿತು.ಪ್ರವಾಸಿ ಮಂದಿರದಿಂದ ಆರಂಭವಾಗುವ ಮೆರವಣಿಗೆಯಲ್ಲಿ ಸೇಂಟ್ ಜಾರ್ಜ್ ಶಾಲೆ, ಸರ್ಕಾರಿ ಶಾಲೆ ಹಾಗೂ ವಿದ್ಯಾರ್ಥಿ ನಿಲಯ ವಿದ್ಯಾರ್ಥಿಗಳೊಂದಿಗೆ ಹಾಗೂ ಪಟ್ಟಣ ವ್ಯಾಪ್ತಿಯ ಎಲ್ಲಾ ಶಾಲಾ, ಕಾಲೇಜು ಮಕ್ಕಳೊಂದಿಗೆ, ಸ್ವಸಹಾಯ ಸಂಘದ ಸದಸ್ಯರು ಪೂರ್ಣಕುಂಭ ಸ್ವಾಗತದೊಂದಿಗೆ ಅದ್ಧೂರಿ ಮೆರವಣಿಗೆ ನಡೆಸಲು ನಿರ್ಧರಿಸಲಾಯಿತು. ಪ್ರಮುಖ ವೃತ್ತ ಗಳಲ್ಲಿ ಬ್ಯಾನರ್ ಗಳನ್ನು ಅಳವಡಿಸಿ ಸಂವಿಧಾನ ಜಾಗೃತಿ ಜಾಥ ಆಗಮಿಸುತ್ತಿರುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಧ್ವನಿವರ್ಧಕದ ಮೂಲಕ ಎಲ್ಲಾ ಕಡೆ ವ್ಯಾಪಕ ಪ್ರಚಾರ ಮಾಡುವಂತೆ ಸಲಹೆ ನೀಡಲಾಯಿತು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮರಣ ಹೊಂದಿದವರ ಬ್ಯಾನರ್ ಹಾಕಿದ್ದು ಇದನ್ನು ತೆರವುಗೊಳಿ ಸಬೇಕು. ಕಟ್ಟಿರುವ ಬಾವುಟ, ಬ್ಯಾನರ್ ಗಳನ್ನು ತೆರವುಗೊಳಿಸುವಂತೆ ಸೂಚಿಸಲಾಯಿತು.ಬಸ್ತಿಮಠದ ಲಕ್ಷ್ಮೀಸೇನಾಭಟ್ಟಾರಕ ಸ್ವಾಮೀಜಿ, ವಿವಿಧ ಚರ್ಚ್ ಗಳ ಧರ್ಮಗುರುಗಳು, ಎಲ್ಲಾ ಧರ್ಮದ ಮುಖಂಡರು ಜಾಥದಲ್ಲಿ ಭಾಗವಹಿಸಲು ಆ ಭಾಗದ ಪಟ್ಟಣ ಪಂಚಾಯಿತಿ ಸದಸ್ಯರು ಆಹ್ವಾನಿಸುವಂತೆ ಸಲಹೆ ನೀಡಲಾಯಿತು.ಪಟ್ಟಣ ಪಂಚಾಯಿತಿ ಎಲ್ಲಾ ಸ್ವಸಹಾಯ ಸಂಘದ ಸದಸ್ಯರು, ಕಲಾ ತಂಡಗಳು ಭಾಗವಹಿಸುವಂತೆ ಆಹ್ವಾನಿಸಲು ತೀರ್ಮಾನಿಸಲಾಯಿತು. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸ ಲಾಯಿತು.ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಸದಸ್ಯರಾದ ಶೋಜಾ, ಕುಮಾರಸ್ವಾಮಿ, ಮುಕುಂದ. ಸುರಯ್ಯಬಾನು,ಕೊಪ್ಪ ಎಪಿಎಂಸಿ ನಿರ್ದೇಶಕ ಎಚ್.ಎಂ.ಶಿವಣ್ಣ, ಚಲುವಾದಿ ಸಂಘದ ಡಿ.ರಾಮು, ವಾಲ್ಮೀಕಿ ಸಂಘದ ಶ್ರೀನಿವಾಸ್ ಮತ್ತಿತರರು ಪಾಲ್ಗೊಂಡಿದ್ದರು.

Share this article