ಗಂಗಾಪರಮೇಶ್ವರ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ
ಕನ್ನಡ ಪ್ರಭ ವಾರ್ತೆ ಚಿತ್ತಾಪುರ
ಪದವಿ ಅಥವಾ ಉನ್ನತ ಶಿಕ್ಷಣ ಪಡೆಯುತ್ತಿರುವ ಯುವ ಪೀಳಿಗೆ ಕೇವಲ ಪಠ್ಯದ ಜ್ಞಾನವಿದ್ದರೆ ಸಾಲದು ಸಮಾಜವನ್ನು ಸುರಕ್ಷಿತವಾಗಿಡಲು ಕಾನೂನಿನ ಅರಿವು ಪಡೆಯುವದು ಅನಿವಾರ್ಯ ಎಂದು ಹಿರಿಯ ಸಿವಿಲ್ ನ್ಯಾ. ಕಿಶನ್.ಬಿ.ಮಾಡಲಗಿ ಹೇಳಿದರು.ಗಂಗಾಪರಮೇಶ್ವರ ಕಾಲೇಜಿನ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಗಂಗಾಪರಮೇಶ್ವರಿ ಕಾಲೇಜಿನವರ ಸಂಯುಕ್ತಾಶ್ರಯದಲ್ಲಿ ಪೋಕ್ಸೋ ಕಾಯ್ದೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಇತ್ತೀಚೆಗೆ ಸೈಬರ್ ಜಗತ್ತಿನಲ್ಲಿ ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುವ ಜಾಲ ಹೆಚ್ಚಾಗಿವೆ. ಈ ಕುರಿತು ಯುವ ಪೀಳಿಗೆ ಎಚ್ಚೆತ್ತುಕೊಳ್ಳಬೇಕು. ಪೊಕ್ಸೊ ಕಾಯ್ದೆಯನ್ನು ಭಾರತ ಸರ್ಕಾರವು ೨೦೧೨ ರಲ್ಲಿ ಜಾರಿಗೆ ತರಲಾಗಿದೆ.
ಮಕ್ಕಳ ಮೇಲೆ ನಡೆವ ಲೈಂಗಿಕ ದೌರ್ಜನ್ಯ ಕಿರುಕುಳ, ಅಶ್ಲೀಲತೆಯಂತಹ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವುದು ಈ ಕಾಯ್ದೆಯ ಮುಖ್ಯ ಉದ್ದೇಶ ಎಂದರು.
ನ್ಯಾ. ಅಭಿಷೇಕ ಆರ್. ಜೊಷಿ, ಪ್ರಾಚಾರ್ಯ ಮುರುಳಿಧರ ಪಾಟೀಲ್ ಮಾತನಾಡಿದರು.
ಅಪರ ಜಿಲ್ಲಾ ಸರ್ಕಾರಿ ವಕೀಲ ವಿ.ಅರ್ ಕಾಂತಾ, ಸಹಾಯಕ ಸರ್ಕಾರಿ ಅಭಿಯೊಜಕಿ ಅಂಜನಾದೇವಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸೊಮಶೇಖರ ಕರದಳ್ಳಿ ಇದ್ದರು.
ಚಿತ್ತಾಪುರ ಗಂಗಾಪರಮೇಶ್ವರಿ ಕಾಲೇಜು ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಗಂಗಾಪರಮೇಶ್ವರಿ ಕಾಲೇಜಿನವರ ಸಂಯುಕ್ತಾಶ್ರಯದಲ್ಲಿ ಪೋಕ್ಸೋ ಕಾಯ್ದೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾ. ಕಿಶನ್ ಮಾಡಲಗಿ ಉದ್ಘಾಟಿಸಿದರು.