ಪರಿಸರ ಪ್ರಕೃತಿಗೆ ಧಕ್ಕೆ ಉಂಟಾಗದಂತೆ ಎಚ್ಚರ ವಹಿಸಿ: ಕಿರಣ್ ಜಿ ಗೌರಯ್ಯ

KannadaprabhaNewsNetwork |  
Published : Oct 21, 2025, 01:00 AM IST
ಕಾರ್ಯಕ್ರಮ ಸಂದರ್ಭ | Kannada Prabha

ಸಾರಾಂಶ

ಕೊಡಗು ಜಿಲ್ಲೆಯ ಪರಿಸರ ಪ್ರಕೃತಿಗೆ ಧಕ್ಕೆ ಉಂಟಾಗದಂತೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕು ಎಂದು ತಾಲೂಕು ತಹಸೀಲ್ದಾರ್‌ ಕಿರಣ್‌ ಜಿ. ಗೌರಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ ಕುಶಾಲನಗರ ಪುರಸಭೆ ಮತ್ತು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಆಶ್ರಯದಲ್ಲಿ ಕುಶಾಲನಗರ ಮಹಾತ್ಮಾ ಗಾಂಧಿ ಮೆಮೋರಿಯಲ್ ಪದವಿ ಕಾಲೇಜು ಎನ್ ಎಸ್ ಎಸ್ ತಂಡ ಮತ್ತು ಕುಶಾಲನಗರ ತಾಲೂಕು ಬ್ಯುಟಿಷಿಯನ್ ವೇದಿಕೆ ಸಹಯೋಗದೊಂದಿಗೆ ಪ್ಲಾಸ್ಟಿಕ್ ವಸ್ತುಗಳ ಬಳಕೆ ಹಾಗೂ ಮಾರಾಟವನ್ನು ನಿರ್ಬಂಧಿಸಿರುವ ಬಗ್ಗೆ ಪಟ್ಟಣದ ಮುಖ್ಯರಸ್ತೆಯ ಉದ್ದಿಮೆದಾರರು ಮತ್ತು ನಗರ ನಿವಾಸಿಗಳ ಗಮನಕ್ಕೆ ತರುವ ಅಭಿಯಾನ ನಡೆಯಿತು. ಅಭಿಯಾನಕ್ಕೆ ತಾಲೂಕು ತಹಸೀಲ್ದಾರ್ ಕಿರಣ್ ಜಿ ಗೌರಯ್ಯ ಮತ್ತು ಪುರಸಭೆ ಮುಖ್ಯ ಅಧಿಕಾರಿ ಟಿ ಜೆ ಗಿರೀಶ್ ಅವರು ಚಾಲನೆ ನೀಡಿ ಸ್ವಚ್ಛತೆ ಬಗ್ಗೆ ಸಂದೇಶ ನೀಡಿದರು.ಕಸ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಕೊಡಗು ಜಿಲ್ಲೆಯ ಪರಿಸರ ಪ್ರಕೃತಿಗೆ ಧಕ್ಕೆ ಉಂಟಾಗದಂತೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕು ಎಂದು ಹೇಳಿದ ತಾಲೂಕು ತಹಸೀಲ್ದಾರ್ ಕಿರಣ್ ಜಿ ಗೌರಯ್ಯ ನಮ್ಮ ಕಸ ನಮ್ಮದು ಎಂಬ ಧ್ಯೇಯ ವಾಕ್ಯದೊಂದಿಗೆ ಉತ್ತಮ ಪರಿಸರ ನಿರ್ಮಾಣ ಆಗಬೇಕಾಗಿದೆ ಎಂದರು.ಕಾವೇರಿ ನದಿ ಸ್ವಚ್ಛತಾ ಅಭಿಯಾನದ ಪ್ರಮುಖರಾದ ಎಂ ಎನ್ ಚಂದ್ರಮೋಹನ್, ಪುರಸಭೆ ಹಿರಿಯ ಆರೋಗ್ಯ ಅಧಿಕಾರಿ ಉದಯಕುಮಾರ್, ಎಂ ಜಿ ಎಂ ಪದವಿ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಕೆ ಆರ್ ಮಂಜೇಶ್, ಶರಣ್ ಕೆ ಕೆ, ಕುಶಾಲನಗರ ತಾಲೂಕು ಬ್ಯುಟಿಷಿಯನ್ ಅಸೋಸಿಯೇಷನ್ ಅಧ್ಯಕ್ಷರಾದ ನಾಗಮಣಿ, ಗೌರವಾಧ್ಯಕ್ಷರಾದ ವನಿತ ಚಂದ್ರಮೋಹನ್, ಕಾವ್ಯ ಗೌಡ ಎನ್ಎಸ್ಎಸ್, ಪುರಸಭೆ ಸಿಬ್ಬಂದಿ ಇದ್ದರು.ಈ ಸಂಬಂಧ ಸ್ಟಿಕರ್ ಗಳನ್ನು ಪಟ್ಟಣದ ನೂರಾರು ಸಂಖ್ಯೆಯ ಅಂಗಡಿ ಮಳಿಗೆಗಳಲ್ಲಿ ಅಂಟಿಸಿ ಪ್ಲಾಸ್ಟಿಕ್ ಬದಲಿಗೆ ಉಪಯೋಗಿಸಬಹುದಾದ ವಸ್ತುಗಳ ಬಗ್ಗೆ ಮಾಹಿತಿ ನೀಡಲಾಯಿತು.

PREV

Recommended Stories

ಹೊಸೂರಿಗೆ ಮೆಟ್ರೋ ವಿಸ್ತರಣೆ ಅಸಾಧ್ಯ: ರಾಜ್ಯ ಸರ್ಕಾರಕ್ಕೆ ಬಿಎಂಆರ್‌ಸಿಎಲ್‌ ವರದಿ
ತಾಂತ್ರಿಕ ಕ್ಷೇತ್ರದಲ್ಲಿ ಕನ್ನಡ ಬೆಳೆಸಬೇಕಿದೆ: ಸಾಹಿತಿ ಪ್ರೊ. ಎಸ್. ಜಿ. ಸಿದ್ದರಾಮಯ್ಯ