ಹಿಂದೂ ಸಮಾಜ ಒಡೆಯುವ ಶಕ್ತಿಗಳ ಬಗ್ಗೆ ಎಚ್ಚರಿಕೆ ಇರಲಿ: ವಿಠ್ಠಲ ಕುಲಕರ್ಣಿ

KannadaprabhaNewsNetwork |  
Published : Feb 12, 2026, 03:30 AM IST
ಪೋಟೋ-10 ಜಿಎಲ್‌ ಡಿ1-  ಗುಳೇದಗುಡ್ಡ  ತಾಲೂಕಿನ  ಕೆಲವಡಿ ಗ್ರಾಮದಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ಆರ್ ಎಸ್ ಎಸ್   ವಿಜಯಪೂರ ವಿಭಾಗದ ಕಾರ್ಯವಾಹ ವಿಠ್ಠಲ ಕುಲಕರ್ಣಿ  ಮಾತನಾಡಿದರು.  | Kannada Prabha

ಸಾರಾಂಶ

ದೇಶದಲ್ಲಿ ಕುಟುಂಬಗಳ ನಡುವಿನ ಬಾಂಧವ್ಯ ಕಡಿಮೆಯಾಗುತ್ತಿದೆ. ಇದರಿಂದ ಲವ್ ಜಿಹಾದ್ ನಂತಹ ಸಮಸ್ಯೆಗಳು ಹೆಚ್ಚುತ್ತಿವೆ. ನಮ್ಮ ನಿಷ್ಕಾಳಜಿಯಿಂದ ಕುಟುಂಬದಲ್ಲೇ ಇಂತಹ ಘಟನೆಗಳು ನಡೆಯುತ್ತಿವೆ. ಹೀಗಾಗದಂತೆ ಮಕ್ಕಳ ಕಡೆಗೆ ಗಮನ ಹರಿಸಬೇಕು. ಸಮಾಜ ಒಡೆಯವ ಶಕ್ತಿಗಳ ಬಗ್ಗೆ ಎಚ್ಚರವಾಗಿರಬೇಕು ಎಂದು ಆರ್.ಎಸ್.ಎಸ್ ವಿಜಯಪುರ ವಿಭಾಗದ ಕಾರ್ಯವಾಹ ವಿಠ್ಠಲ ಕುಲಕರ್ಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ದೇಶದಲ್ಲಿ ಕುಟುಂಬಗಳ ನಡುವಿನ ಬಾಂಧವ್ಯ ಕಡಿಮೆಯಾಗುತ್ತಿದೆ. ಇದರಿಂದ ಲವ್ ಜಿಹಾದ್ ನಂತಹ ಸಮಸ್ಯೆಗಳು ಹೆಚ್ಚುತ್ತಿವೆ. ನಮ್ಮ ನಿಷ್ಕಾಳಜಿಯಿಂದ ಕುಟುಂಬದಲ್ಲೇ ಇಂತಹ ಘಟನೆಗಳು ನಡೆಯುತ್ತಿವೆ. ಹೀಗಾಗದಂತೆ ಮಕ್ಕಳ ಕಡೆಗೆ ಗಮನ ಹರಿಸಬೇಕು. ಸಮಾಜ ಒಡೆಯವ ಶಕ್ತಿಗಳ ಬಗ್ಗೆ ಎಚ್ಚರವಾಗಿರಬೇಕು ಎಂದು ಆರ್.ಎಸ್.ಎಸ್ ವಿಜಯಪುರ ವಿಭಾಗದ ಕಾರ್ಯವಾಹ ವಿಠ್ಠಲ ಕುಲಕರ್ಣಿ ಹೇಳಿದರು.

ಸಮೀಪದ ಕೆಲವಡಿ ಗ್ರಾಮದ ಲಕ್ಷ್ಮೀರಂಗನಾಥ ದೇವಸ್ಥಾನ ಆವರಣದಲ್ಲಿ ಕೆಲೂಡಿ ಹಾಗೂ ಕುಟಕನಕೇರಿ ಹಿಂದೂ ಸಮ್ಮೇಳನ ಸಂಚಲನಾ ಸಮಿತಿ ಹಮ್ಮಿಕೊಂಡಿದ್ದ ಹಿಂದೂ ಸಮ್ಮೇಳನದಲ್ಲಿ ಮಾತನಾಡಿ, ನಮ್ಮ ಜಾತಿಯೇ ಶ್ರೇಷ್ಠ ಎಂಬ ಮನೋಭಾವದಿಂದ ಜಾತಿ-ಜಾತಿಗಳ ನಡುವೆ ವೈಷಮ್ಯ ಬೆಳೆದು ಹಿಂದೂ ಸಮಾಜ ವಿಘಟಿತವಾಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಬದಲಾವಣೆ ಮಾಡಿ, ಆತ ದೇಶಕ್ಕಾಗಿ ಬದುಕಬೇಕು. ದೇಶಕ್ಕಾಗಿ ಪ್ರಾಣ ಕೊಡಲು ಸಿದ್ಧನಿರಬೇಕು ಎಂಬ ಧ್ಯೇಯದಿಂದ ರಾಷ್ಟ್ರೀಯ ಸ್ವಯಂ ಸಂಘ 100 ವರ್ಷಗಳಿಂದ ಮಾಡಿದ ತಪ್ಪಸಿನ ಫಲದಿಂದ ಇಂದು ಹಿಂದೂ ಸಮಾಜ ಒಗ್ಗೂಡುತ್ತಿದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಡಾ.ನೀಲಕಂಠ ಶಿವಾಚಾರ್ಯ ಶ್ರೀಗಳು ಮಾತನಾಡಿ, ಆರ್.ಎಸ್.ಎಸ್ ನೂರು ವರ್ಷಗಳಿಂದ ಹಿಂದೂ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ. ಇನ್ನೂ ನಾವು ಎಚ್ಚರವಾಗದಿದ್ದರೆ ಹಿಂದೂಗಳಿಗೆ ಉಳಿಗಾಲವಿಲ್ಲ. ಹಿಂದೂ ಸಮಾಜವನ್ನು ಒಡೆದಾಳುವ ವಿಷಬೀಜಗಳಿಂದ ದೂರವಿರಬೇಕು. ನಮ್ಮ ಸಂಸ್ಕೃತಿ, ನಮ್ಮ ಪರಂಪರೆ ಮುಂದುವರಿಸಬೇಕು ಎಂದರು.

ಮರಡಿಮಠದ ಕಾಡಸಿದ್ದೇಶ್ವರ ಶ್ರೀಗಳು, ಗುರುಪಾದ ದೇವರು ಸಾನ್ನಿಧ್ಯ ವಹಿಸಿದ್ದರು. ಹಿಂದೂ ಸಮ್ಮೇಳನ ಸಂಚಲನಾ ಸಮಿತಿ ಆಧ್ಯಕ್ಷ ಮುತ್ತನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ರಾಜಶೇಖರ ಶೀಲವಂತ, ಸಂಪತ್ತಕುಮಾರ ರಾಠಿ, ನಾಗೇಶ ಮನುಗೂಳಿ. ಮಂಜುನಾಥ ಮನುಗೂಳಿ, ಮುತ್ತಪ್ಪ ತೆಗ್ಗಿ, ಅಡಿವೆಪ್ಪ ಹಡಗಲಿ, ಬೊಮ್ಮಣ್ಣ ಮದಕಟ್ಟಿ, ಬಸವರಾಜ ಮನ್ನೂರ, ಕಮಲಕಿಶೋರ ಮಾಲಪಾಣಿ, ಮುತ್ತಪ್ಪ ಕಾಳನ್ನವರ, ಮಲ್ಲನಗೌಡ ಗೌಡರ, ವೆಂಕಟೇಶ ಇಳಗೇರಿ, ರಂಗಪ್ಪ ಜಂಗ್ಗಿ, ತಿಪ್ಪಣ್ಣ ಪೂಜಾರ, ಶಶಿ ಪೂಜಾರ, ಮಲ್ಲು ಗಂಗಶೆಟ್ಟಿ, ಸಂಗಣ್ಣ ಹುನಗುಂದ, ಗಂಗಪ್ಪ ಚಿನ್ನಣ್ಣವರ, ರವಿ ಶೇಬಿನಕಟ್ಟಿ, ವಿಠ್ಠಲ ಪತ್ತಾರ, ಬಸವರಾಜ ಕುಂಬಾರ, ಬಸನಗೌಡ ಪಾಟೀಲ, ಶಿವಯ್ಯ ತುಪ್ಪದ, ತಿಮ್ಮಣ್ಣ ಬಂಡಿವಡ್ಡರ, ಅಶೋಕ ಹೊಸೂರ, ಮಂಜು ಬಂಡಿವಡ್ಡರ, ಸಂಗು ಹಿರೇಮಠ, ರಂಗಪ್ಪ ಕಾಳನ್ನವರ, ಮಹಾದೇವ ಜಗತಾಪ ಸೇರಿದಂತೆ ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?
ಸಂಸ್ಕೃತಿಯ ಸಂರಕ್ಷಣೆ ಹೊಣೆ ಯುವಶಕ್ತಿ ಮೇಲಿದೆ: ಸಂಜೀವ ಚವ್ಹಾಣ