ಕನ್ನಡಪ್ರಭ ವಾರ್ತೆ ಜಮಖಂಡಿ
ತಾಲೂಕಿನ ಕುಂಬಾರಹಳ್ಳದ ಪಿ.ಎಂ.ಶ್ರೀ ಸರಕಾರಿ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ, ಪಾಲಕ ಪೋಷಕರ ಸಭೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪಠ್ಯದ ಜೊತೆ ಇತರೆ ಪುಸ್ತಕಗಳನ್ನು ಓದಿ ಜ್ಞಾನಿಗಳಾಗಿ, ಗ್ರಂಥಗಳಲ್ಲಿ ಬರುವ ಜೀವನ ತತ್ವ, ಸತ್ವಗಳನ್ನು ಬಾಳಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಓಲೆಮಠದ ಆನಂದ ದೇವರು ಮಾತನಾಡಿ, ಯುವಜನರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಎಲ್ಲರಿಗೂ ತೊಟ್ಟಿಲ ಕಟ್ಟು, ಬಾಸಿಂಗ ಕಟ್ಟು, ಚಟ್ಟದ ಕಟ್ಟು ಸಾಮಾನ್ಯವಾಗಿದೆ. ನೀವು ಅದನ್ನು ಮೀರಿ ಜೀವನ ಕಟ್ಟಬೇಕಾಗಿದೆ. ಗುರುಹಿರಿಯರ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ತಿಳಿಸಿದರು.ನಿವೃತ್ತ ಮುಖ್ಯಶಿಕ್ಷಕ ಎಸ್.ಡಿ.ಸಂಖ ಮಾತನಾಡಿ, ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ , ನಮಿಸುವ ಕೈಗಳಿಗಿಂತ ದುಡಿಯುವ ಕೈಗಳು ಶ್ರೇಷ್ಠ ಎಂದು ಹೇಳಿದರು.
ಶಾಲೆಯ ಮುಖ್ಯಶಿಕ್ಷಕ ನಾರಾಯಣ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವರ್ಗ ಶಿಕ್ಷಕರಾದ ಶಾರದಾ ಮಠ ಶಿಕ್ಷಕ ಸಂಗನಬಸವ ಉಟಗಿ ಶಿಕ್ಷಕ ಬಾಹುಬಲಿ ಮುತ್ತೂರ ಇದ್ದರು. ವಿದ್ಯಾರ್ಥಿಗಳಾದ ಕೃತ್ತಿಕಾ ಬಣಕಾರ, ಸಾಗರ ಕುರಣಿ, ಭವಾನಿ ಗುಣದಾಳ, ಮುತ್ತುರಾಜ ತೇರದಾಳ, ಅಶ್ವಿನಿ ಮಾಂಗ, ಚೇತನ ಸಾಳಗುಂದಿ, ಚೈತ್ರ ತೇರದಾಳ ಅನಿಸಿಕೆ ಹಂಚಿ ಕೊಂಡರು.
ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ: ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದ ಐಶ್ವರ್ಯಾ ಕುರಣಿ, ತರುಣ ಘಟ್ನಟ್ಟಿ. ಮಧುಮತಿ ಚಿಕ್ಕಲಕಿ ಅವರನ್ನು ಪ್ರತಿಭಾ ಫಲಕ ನೀಡಿ ಸನ್ಮಾನಿಸಲಾಯಿತು. ಕನ್ನಡ ಮತ್ತು ಹಿಂದಿ ವಿಷಯದಲ್ಲಿ ನೂರಕ್ಕೆ ನೂರು ಅಂಕ ಮತ್ತು ಗಣಿತದಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಕ್ರೀಡೆಯಲ್ಲಿ ರಾಜ್ಯಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಕರೆಪ್ಪ ಹೆಗಡೆ ಮತ್ತು ನೀಲವ್ವಾ ಸೊನ್ನದ, ಚರ್ಚಾ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಸಾಧನೆಗೈದ ನಿಂಗವ್ವ ಮರನೂರ, ಚಿತ್ರಕಲೆಯಲ್ಲಿ ಸಾಧನೆಗೈದ ಮಕ್ಕಳು, ಆದರ್ಶ ವಿದ್ಯಾರ್ಥಿ, ವಿದ್ಯಾರ್ಥಿನಿ ಎಂದು ಆಯ್ಕೆಯಾದ ಸಾಗರ ಕುರಣಿ ಮತ್ತು ಭವಾನಿ ಗುಣದಾಳ ಹಾಗೂ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಹಾಗೂ ಸದಸ್ಯರನ್ನು ನ್ಮಾನಿಸಲಾಯಿತು.