ಬದುಕು ಕಟ್ಟಿಕೊಟ್ಟ ಸಂಸ್ಥೆ ಬಗ್ಗೆ ಉಪಕೃತವಿರಲಿ

KannadaprabhaNewsNetwork |  
Published : Sep 08, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್  | Kannada Prabha

ಸಾರಾಂಶ

Be grateful to the institution that gave you life.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಬದುಕು ಕಟ್ಟಿ ಕೊಟ್ಟ ಸಂಸ್ಥೆ ಬಗ್ಗೆ ಸದಾ ಉಪಕೃತರಾಗಿರುವುದು ಅಗತ್ಯವೆಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಮುರುಘರಾಜೇಂದ್ರ ಬೃಹನ್ಮಠದಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು ಹಾಗೂ ಎಸ್ ಜೆಎಂ ವಿದ್ಯಾಪೀಠದ ಶಾಲಾ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದವರು ಶ್ರಾವಣಮಾಸದ ಪ್ರಯುಕ್ತ ಸೋಮವಾರ ಹಮ್ಮಿಕೊಳ್ಳಲಾದ ವಚನಾಭಿಷೇಕದ ನಂತರ ಏರ್ಪಡಿಸಿದ್ದ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಯಾವುದೇ ಕೊರತೆ ಇಲ್ಲದವರು ಮಠ, ಆಶ್ರಮ ಅಥವಾ ಸಾರ್ವಜನಿಕ ವಿದ್ಯಾರ್ಥಿ ನಿಲಯಗಳಿಗೆ ಸೇರಲು ಬಯಸುವುದಿಲ್ಲ. ಅದೇ ಬಡತನ ಇರುವವರು ಸಂಸ್ಥೆಗಳಲ್ಲಿ ಆಶ್ರಯ ಪಡೆದು ಓದುತ್ತಾರೆ. ಅದರಂತೆ ಕಳೆದ ಏಳೆಂಟು ದಶಕಗಳ ಹಿಂದೆ ಸ್ಥಿತಿವಂತರು ಕಡಿಮೆ ಪ್ರಮಾಣದಲ್ಲಿದ್ದರು. ಬಹುತೇಕ ಗ್ರಾಮೀಣ ಭಾಗದ ಜನ ತಮ್ಮ ಮಕ್ಕಳನ್ನು ಮಠಗಳು, ಉಚಿತ ಪ್ರಸಾದ ನಿಲಯಗಳು, ಸರ್ಕಾರದ ಉಚಿತ ವಿದ್ಯಾರ್ಥಿ ನಿಲಯಗಳಿಗೆ ಸೇರಿಸಿದವರೇ ಆಗಿದ್ದಾರೆ. ಅಂತಹ ವ್ಯವಸ್ಥೆಯಲ್ಲಿ ಓದಿ ರಾಷ್ಟ್ರ, ರಾಜ್ಯಗಳ ಚುಕ್ಕಾಣಿ ಹಿಡಿದವರು, ಓದಲು ಬಂದವರು ದೊಡ್ಡ ದೊಡ್ಡ ಮಠಗಳ ಪೀಠಾಧ್ಯಕ್ಷರಾದ ಉದಾಹರಣೆ ಮುರುಘಾಮಠದ ಪರಂಪರೆಯಲ್ಲಿ ಸಾಕಷ್ಟಿದೆ ಎಂದರು.

ಒಂದು ಸಣ್ಣ ಕೆಲಸ ಮಾಡಿಕೊಟ್ಟವರಿಗೆ ನಾವು ಉಪಕೃತರಾಗಿರುತ್ತೇವೆ. ಅದೇ ಒಂದು ಸಂಸ್ಥೆಯಿಂದ ಅಥವಾ ಮಠದಿಂದ ಜೀವನ ಕಟ್ಟಿಕೊಂಡು ಆ ಸಂಸ್ಥೆಯೊಂದಿಗೆ ಒಡನಾಟ, ಪರಸ್ಪರ ಸಹಕಾರ, ಸಲಹೆ ಕೊಡದಿದ್ದರೆ ಹೇಗೆ ಎಂದು ಶ್ರೀಗಳು ಪ್ರಶ್ನಿಸಿದರು.

ಮುರುಘಾಮಠದ ಅಂದಿನ ಶ್ರೀ ಜಯದೇವ ಜಗದ್ಗುರು ಸ್ಥಾಪಿಸಿದ ಜಯದೇವ ಉಚಿತ ಪ್ರಸಾದ ನಿಲಯಗಳಲ್ಲಿ ಓದಿ ಈ ನಾಡು ಕಂಡ ಶ್ರೇಷ್ಠರಲ್ಲಿ ಒಬ್ಬರಾಗಿರುವ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ತಮ್ಮ ಮಗನಿಗೆ ಜಯದೇವ ಎನ್ನುವ ಹೆಸರನ್ನಿಡುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಮಠಗಳು ಓದಿನೊಂದಿಗೆ ಸಂಸ್ಕೃತಿ ಸನ್ನಡತೆಯ ವಿಶೇಷ ಬದುಕನ್ನು ರೂಪಿಸಿದೆ. ಮುರುಘಾಮಠಕ್ಕೆ ಓದಲು ಬಂದವರು ಅತ್ಯುನ್ನತ ಸ್ಥಾನ ಪಡೆದಿದ್ದಾರೆ. ಇಲ್ಲಿ ಸೇರಿರುವ ನಾವುಗಳೇ ಅನೇಕ ಮಠಗಳ ಜವಾಬ್ದಾರಿ ಹೊತ್ತು ಸಾಗಿದ್ದೇವೆ. ಅಂತಹ ಮುರುಘೇಶನ ಸನ್ನಿಧಿಗೆ ಬರುವ ಪರಿಪಾಠ ರೂಢಿಸಿಕೊಂಡರೆ ಅದು ನಿಮ್ಮ ಮುಂದಿನ ಪೀಳಿಗೆಗೆ ಒಳ್ಳೆಯ ದಾರಿಯಾಗುತ್ತದೆ ಎಂದರು.

ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ನಾನು, ಸಹ ನನ್ನ ಬಡತನ ಕಾರಣದಿಂದ ಶ್ರೀಮಠಕ್ಕೆ ಓದಲು ಬಂದವನಾಗಿದ್ದೆ. ಅಂದು ನಮ್ಮಲ್ಲಿಯೂ ತುಂಟತನಗಳಿದ್ದವು. ಜೀವನದಲ್ಲಿನ ಅನೇಕ ಪಾಠಗಳು ವ್ಯಕ್ತಿತ್ವವನ್ನು ರೂಪಿಸುತ್ತವೆ. ಮುರುಘಾಮಠ ನಮ್ಮಂತ ಅನೇಕ ಯುವ ಮಠಾಧೀಶರನ್ನು ತಯಾರು ಮಾಡಿದ ಕಮ್ಮಟವಾಗಿದ್ದು, ಅನೇಕರ ಬಾಳಿಗೆ ಬೆಳಕನ್ನು ನೀಡಿದೆ. ನಮಗೆ ಇದೊಂದು ತವರುಮನೆ ಇದ್ದ ಹಾಗೆ. ಅಂತಹ ಸಂಬಂಧವಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.

ದಾವಣಗೆರೆಯ ಡಾ. ಬಸವಪ್ರಭು ಸ್ವಾಮೀಜಿ, ಹರಿಹರ ಪೀಠದ ವಚನಾನಂದ ಸ್ವಾಮೀಜಿ, ಬೇಲೂರಿನ ಶಿವಕುಮಾರ ಸ್ವಾಮೀಜಿ, ಕೋರಣೇಶ್ವರ ಸ್ವಾಮೀಜಿ, ರಾವಂದೂರಿನ ಮೋಕ್ಷಪತಿ ಸ್ವಾಮೀಜಿ, ಬಸವನಾಗಿದೇವ ಸ್ವಾಮೀಜಿ, ಬಸವ ಹರಳಯ್ಯ ಸ್ವಾಮೀಜಿ, ಮಾತೆ ಜಯದೇವಿ ತಾಯಿ, ಚಿನ್ಮಯಿತಾಯಿ, ಬಸವ ಮುರುಘೇಂದ್ರ ಸ್ವಾಮೀಜಿ, ಬಸವಾದಿತ್ಯ ದೇವರು, ಬಸವಲಿಂಗಮೂರ್ತಿ ಶರಣರು ಸೇರಿದಂತೆ ಭಕ್ತರು, ವಿವಿಧ ಸಂಘ ಸಂಸ್ಥೆಗಳ ಸಮಾಜಗಳ ಪದಾಧಿಕಾರಿಗಳಾದ ಚಿದಾನಂದಪ್ಪ, ಮಲ್ಲಿಕಾರ್ಜುನಪ್ಪ, ಗಾಯತ್ರಿ ಶಿವರಾಂ, ಡಾ.ಬಿ. ರಾಜಶೇಖರಪ್ಪ, ಡಾ.ಪಿ ಯಶೋದ, ನಾಗರಾಜ ಸಂಗಂ, ಗುತ್ತಿನಾಡು ಪ್ರಕಾಶ್, ಭರಮಸಾಗರ ಪ್ರದೀಪ್, ಶಿವಬಸಯ್ಯ, ಬಸವರಾಜ ಕಟ್ಟಿ, ಗೀತಾ ರುದ್ರೇಶ್, ಜಯಶೀಲ ವೀರಣ್ಣ, ಶೈಲಜಾಬಾಬು, ಜಿ.ಟಿ ನಂದೀಶ್, ಸಿ.ಎಂ ಧರ್ಮಪ್ಪ, ಸಿ.ಎಂ ಚಂದ್ರಪ್ಪ, ನಾಗಭೂಷಣ, ಕಡೂರು ಕುಮಾರ್, ಸ್ವಾನ್ ಕೃಷ್ಣಮೂರ್ತಿ, ದುಮ್ಮಿ ಶಿವಕುಮಾರ್ ಸೇರಿದಂತೆ ಹಳೆಯ ವಿದ್ಯಾರ್ಥಿಗಳು ಹಾಗೂ ನಿವೃತ್ತ ನೌಕರರು ಭಾಗವಹಿಸಿದ್ದರು.

ಜಮುರಾ ಕಲಾವಿದ ಉಮೇಶ್ ಪತ್ತಾರ್ ಶ್ರೀ ಮುರುಘರಾಜೇಂದ್ರ ಭಕ್ತಿಗೀತೆ ಹಾಡಿದರೆ ಕೋಕಿಲಾ ಎಂ.ಜೆ ಹಾಗೂ ಶಶಿಕಲಾ ಬಸವರಾಜ್ ವಚನಗೀತೆಗಳನ್ನು ಹಾಡಿದರು. ಪಿ. ವೀರೇಂದ್ರಕುಮಾರ್ ಸ್ವಾಗತಿಸಿದರು.

ಪೋಟೋ ಕ್ಯಾಪ್ಸನ್

ಬಸವಕೇಂದ್ರ ಮುರುಘಾಮಠದಲ್ಲಿ ನಡೆದ ವಚನಾಭಿಷೇಕ ಕಾರ್ಯಕ್ರಮದದಲ್ಲಿ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿದರು.

----------

ಫೋಟೋ 7ಸಿಟಿಡಿ1

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳು ಧರ್ಮ-ಸಂಸ್ಕಾರದಿಂದ ದೂರ: ಎಲೆರಾಂಪುರ ಶ್ರೀ
ಗುತ್ತಿಗೆದಾರರ ಸಂಘಕ್ಕೆ ಕಾಟಿಹಳ್ಳಿ ಕರಿಯಪ್ಪ ಅಧ್ಯಕ್ಷ