ದೇಶದ ಹಿರಿಮೆ ಉಳಿಸಲು ನಾವು ಜಾಗೃತಿ ವಹಿಸಬೇಕಿದೆ. ಎಲ್ಲಕ್ಕಿಂತ ದೇಶ ದೊಡ್ಡದು. ಉತ್ತಮವಾಗಿ ಜೀವನವನ್ನು ನಡೆಸಲು ಭಾರತಕ್ಕಿಂತ ಒಳ್ಳೆಯ ದೇಶ ಸಿಗುವುದಿಲ್ಲ.
ಹಿಂದೂ ಸಮ್ಮೇಳನಕ್ಕೆ ಚಾಲನೆ ನೀಡಿದ ರಾಣಿಬೆನ್ನೂರು ರಾಮಕೃಷ್ಣ ವಿವೇಕಾನಂದ ಆಶ್ರಮ ಅಧ್ಯಕ್ಷ
ಕನ್ನಡಪ್ರಭ ವಾರ್ತೆ ಹೊನ್ನಾವರ
ದೇಶದ ಹಿರಿಮೆ ಉಳಿಸಲು ನಾವು ಜಾಗೃತಿ ವಹಿಸಬೇಕಿದೆ. ಎಲ್ಲಕ್ಕಿಂತ ದೇಶ ದೊಡ್ಡದು. ಉತ್ತಮವಾಗಿ ಜೀವನವನ್ನು ನಡೆಸಲು ಭಾರತಕ್ಕಿಂತ ಒಳ್ಳೆಯ ದೇಶ ಸಿಗುವುದಿಲ್ಲ ಎಂದು ರಾಣಿಬೆನ್ನೂರು ರಾಮಕೃಷ್ಣ ವಿವೇಕಾನಂದ ಆಶ್ರಮ ಅಧ್ಯಕ್ಷ ಸ್ವಾಮಿ ಪ್ರಕಾಶನಂದ ಮಹಾರಾಜ್ ನುಡಿದರು.
ತಾಲೂಕಿನ ಕೆಕ್ಕಾರು ರಘೋತ್ತಮ ಮಠದಲ್ಲಿ ನವಿಲಗೋಣ ಮಂಡಲ ಕಡತೋಕಾ ಚೌಕಗ್ರಾಮದ ಹಿಂದು ಸಮ್ಮೇಳನ ಸಮಿತಿಯವರು ಆಯೋಜಿಸಿದ ಹಿಂದೂ ಸಮ್ಮೇಳನಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಧರ್ಮದ ಆಚರಣೆಯನ್ನು ನಾವು ಸರಿಯಾಗಿ ಮಾಡುತ್ತಿಲ್ಲ. ಜಾತಿ ನಡುವಿನ ತಿಕ್ಕಾಟ, ಸಮಾಜದಲ್ಲಿ ಅಶಾಂತಿ ಬೆಳೆಯುತ್ತಿರುವುದು ನಮ್ಮ ಧರ್ಮ ಸೊರಗಲು ಕಾರಣವಾಗಿದೆ. ನಾವೆಲ್ಲರೂ ಒಂದು ಎನ್ನುವ ಭಾವನೆ ಬೆಳೆಸಿಕೊಂಡು, ನಮ್ಮ ಧಾರ್ಮಿಕ ಆಚರಣೆಯನ್ನು ಕೈಬಿಡದೆ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದರು.
ವಿಭಾಗ ಸಂಪರ್ಕ ಪ್ರಮುಖರಾದ ಶ್ರೀಧರ ಹಿರೇಹ, ವಕ್ತಾರರಾದ ಅಮೃತವರ್ಷಿಣಿ ಉಮೇಶ, ಹಿಂದೂ ಧರ್ಮದ ಹಿನ್ನೆಲೆ, ಧಾರ್ಮಿಕ ಆಚರಣಾ ಕ್ರಮಗಳು, ಧರ್ಮದ ಮೇಲೆ ನಡೆಯುತ್ತಿರುವ ಆಕ್ರಮಣ, ಸತ್ಯರ್ಮಗಳ ಪಾಲನೆಯ ಕುರಿತು ಮಾಹಿತಿ ನೀಡಿದರು.
ಸಮ್ಮೇಳನ ಸಮಿತಿಯ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಪ್ರಾಸ್ತವಿಕ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.