- 6 ವರ್ಷದ ಕರಡಿಯನ್ನು ಅರಣ್ಯಕ್ಕೆ ಬಿಟ್ಟ ಇಲಾಖೆ ಅಧಿಕಾರಿಗಳು
ತಾಲೂಕಿನ ಉಬ್ರಾಣಿ ಹೋಬಳಿಯ ಮರವಂಜಿ ಗ್ರಾಮದ ಬಳಿಯ ತಾಂಡಕ್ಕೆ ಹೋಗುವ ರಸ್ತೆ ಬದಿಯ ಶ್ರೀ ಈಶ್ವರ ದೇವಾಲಯ ಬಳಿ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿನಲ್ಲಿ ಗುರುವಾರ ರಾತ್ರಿ ಕರಡಿ ಸೆರೆಯಾಗಿದೆ.
ಒಂದೂವರೆ ತಿಂಗಳಿಂದ ದೇವಾಲಯದ ಬಳಿ ಕರಡಿ ತಿರುಗಾಡುವುದನ್ನು ಗ್ರಾಮದ ಕೆಲವರು ನೋಡಿದ್ದರು. ಚನ್ನಗಿರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿಯನ್ನೂ ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ವಲಯ ಅರಣ್ಯಾಧಿಕಾರಿ ಶ್ವೇತಾ ಅವರು ಇಲಾಖೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ, ಕರಡಿ ತಿರುಗಾಡುತ್ತಿದ್ದ ಪ್ರದೇಶದ ಆಯಟ್ಟಿನ ಪ್ರದೇಶದಲ್ಲಿ ಬೋನು ಅಳವಡಿಸಿದ್ದರು.ಗುರುವಾರ ರಾತ್ರಿ 11 ಗಂಟೆ ಸಮಯದಲ್ಲಿ 6 ವರ್ಷದ ಕರಡಿ ಸೆರೆಸಿಕ್ಕಿದೆ. ಈ ಕರಡಿಯನ್ನು ಸುರಕ್ಷಿತವಾದ ದಟ್ಟಅರಣ್ಯಕ್ಕೆ ಬಿಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಕರಡಿಯ ಸೆರೆಯಿಂದ ಗ್ರಾಮದ ಜನರಲ್ಲಿ ಆತಂಕ ದೂರವಾಗಿದೆ.
- - - -21ಕೆಸಿಎನ್ಜಿ3,4: ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದ ಈಶ್ವರ ದೇವಾಲಯದ ಬಳಿ ಅರಣ್ಯ ಇಲಾಖೆ ಅಳವಡಿಸಿದ್ದ ಬೋನ್‌ಗೆ ಕರಡಿ ಸೆರೆಯಾಗಿರುವುದು.