ಕನ್ನಡಪ್ರಭ ವಾರ್ತೆ ಇಂಡಿ
ಎಸಿ ಅನುರಾಧಾ ವಸ್ತ್ರದ ಮಾತನಾಡಿ, ಸಾರ್ವಜನಿಕರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂ.5ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ. ಪರಿಸರ ನಾಶದಿಂದ ಪ್ರಾಣಿ ಪ್ರಪಂಚಕ್ಕೆ ತೊಂದರೆಯಾಗುತ್ತದೆ. ಪರಿಸರವು ಪ್ರತಿಯೊಂದು ಜೀವರಾಶಿಗೆ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಗುರುದೇವಾಶ್ರಮದ ಅಮೃತಾನಂದ ಮಹಾಸ್ವಾಮೀಜಿ ಮಾತನಾಡಿ, ವೃಕ್ಷ, ಪರಿಸರ ಪ್ರೇಮಿಯಾಗಿದ್ದ ಸಿದ್ದೇಶ್ವರ ಶ್ರೀಗಳು ವಿಜಯಪುರದ ಆಶ್ರಮದಲ್ಲಿ ಗಿಡಗಳನ್ನು ಹಚ್ಚಿದ್ದಾರೆ. ಪರಿಸರದ ಬಗ್ಗೆ ಸದಾ ಕಾಳಜಿ ಹೊಂದಿರುವ ಶ್ರೀಗಳ ಆದರ್ಶವನ್ನು ಪ್ರತಿಯೊಬ್ಬರ ಪಾಲಿಸಿಕೊಂಡು ಪರಿಸರ ರಕ್ಷಣೆ ಮಾಡಬೇಕು. ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟು ಇತರರಿಗೂ ಗಿಡ ನೆಡುವಂತೆ ಪ್ರೋತ್ಸಾಹಿಸಬೇಕು. ಇದು ಪರಿಸರವನ್ನು ಉಳಿಸುವ ಮಾರ್ಗ. ಮರ-ಗಿಡಗಳನ್ನು ಪೋಷಿಸಿದರೆ, ನಮ್ಮ ವೈಯಕ್ತಿಕ ಆರೋಗ್ಯದ ಜೊತೆಗೆ ಪರಿಸರವೂ ಸಂರಕ್ಷಣೆ ಆಗುತ್ತದೆ. ನಾವು ಬದುಕುವ ಪರಿಸರವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ಪರಿಸರ ರೋಗಗ್ರಸ್ಥವಾದರೆ ಪ್ರಾಣಿ ಪ್ರಪಂಚವೂ ರೋಗಿಯಾಗುತ್ತದೆ. ಪರಿಸರ ಶ್ರೀಮಂತವಾದರೆ ನಾವೆಲ್ಲ ಶ್ರೀಮಂತರಾಗುತ್ತೇವೆ ಎಂದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎನ್.ಡಿ.ಪಾಟೀಲ,ಎಸ್.ಎಚ್.ವಾಸನ ಮಾತನಾಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ವನೀತಾ ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಫೌಂಡೇಶನ್‌ದ ಅಧ್ಯಕ್ಷ ವಿಠಲಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಡಿವೈಎಸ್ಪಿ ಜಗದೀಶ, ತಹಸೀಲ್ದಾರ್ ಬಿ.ಎಸ್.ಕಡಕಭಾವಿ, ಚಡಚಣ ತಹಸೀಲ್ದಾರ್ ಎಸ್.ಬಿ.ಇಂಗಳೆ, ತಾಪಂ ಇಒ ನಂದೀಪ ರಾಠೋಡ, ಚಡಚಣ ಇಒ ಸಂಜಯ ಖಡಗೆಕರ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಚಡಚಣ ಬಿಇಒ ಸುಜಾತಾ ಹುನ್ನೂರ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಆರ್.ನಡುಗಡ್ಡಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಎಸ್.ಎಚ್.ಪಾಟೀಲ, ಕ್ರೀಡಾಧಿಕಾರಿ ಸಿ.ಎಸ್.ವಾಲಿಕಾರ, ದುಂಡಪ್ಪ ಸಾಹುಕಾರ ಖೇಡ, ಎಂ.ಆರ್.ಪಾಟೀಲ, ಶ್ರೀಮಂತ ಇಂಡಿ, ಭೀಮು ಗಡ್ಡದ, ಗ್ರಾಪಂ ಅಧ್ಯಕ್ಷೆ ಸಾವಿತ್ರಿ ಮೋರೆ, ಜಗದೀಶ ಕ್ಷತ್ರಿ ಮೊದಲಾದವರು ವೇದಿಕೆ ಮೇಲೆ ಇದ್ದರು.
ಆಲಮಟ್ಟಿ ಡ್ಯಾಮ್‌ನಿಂದ ನಮ್ಮ ಪಾಲಿಗೆ ಬರಬೇಕಾದ 80 ಟಿಎಂಸಿ ನೀರು ಬಳಕೆ ಮಾಡಿಕೊಂಡರೆ ವಿಜಯಪುರ ಜಿಲ್ಲೆ ನಂದನವನವಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಕೃಷ್ಣಾ ವ್ಯಾಜ್ಯ ಬಗೆಹರಿಸಿಕೊಡಬೇಕು. ಪಕ್ಕದ ರಾಜ್ಯ ಡ್ಯಾಂ ಎತ್ತರ ಕುರಿತು ಖ್ಯಾತೆ ತಗೆಯುತ್ತಿದ್ದು, ಅವರಿಗೆ ತಿಳುವಳಿಕೆ ಹೇಳುವ ಕೆಲಸ ಮಾಡಬೇಕು. ಆಲಮಟ್ಟಿ ಡ್ಯಾಂ ಎತ್ತರವಾದರೆ ಅವಳಿ ಜಿಲ್ಲೆಯ ಲಕ್ಷಾಂತರ ಭೂಮಿ ನೀರಾವರಿಗೆ ಒಳಪಡುತ್ತದೆ. 80 ಟಿಎಂಸಿ ನೀರು ಬಳಸಿಕೊಂಡರೆ ಈ ಭಾಗದಲ್ಲಿ ನೀರಾವರಿಯಾಗಿ ಬದಲಾವಣೆಗೆ ನಾಂದಿ ಹಾಡಿದಂತಾಗುತ್ತದೆ.
ಯಶವಂತರಾಯಗೌಡ ಪಾಟೀಲ, ಶಾಸಕ ಇಂಡಿ