ಬ್ಯಾಂಕ್‌ಗಳ ಸಾಲ ಸೌಲಭ್ಯ ಬಳಸಿಕೊಂಡು ಆರ್ಥಿಕ ಸದೃಢರಾಗಿ

KannadaprabhaNewsNetwork |  
Published : May 13, 2026, 04:15 AM IST
ಬೆಳಗಾವಿ | Kannada Prabha

ಸಾರಾಂಶ

ಕುಟುಂಬದ ಆರ್ಥಿಕ ಚೈತನ್ಯ ಹಾಗೂ ಶ್ರೇಯೋಭಿವೃದ್ಧಿಗೆ ಮಹಿಳೆಯರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಮಹಿಳೆಯರು ನಾಲ್ಕುಗೊಡೆಯಲ್ಲಿರದೇ ಬ್ಯಾಂಕ್‌ಗಳಲ್ಲಿನ ಸಾಲ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕ ಸದೃಢರಾಗಬೇಕು ಎಂದು ಮೂತ್ತೂಟ ಫಿನ್‌ಕಾರ್ಪ್‌ನ ವಡಗಾವಿ ಶಾಖಾ ವ್ಯವಸ್ಥಾಪಕಿ ಅಂಬಿಕಾ ಗಾಡಗೋಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕುಟುಂಬದ ಆರ್ಥಿಕ ಚೈತನ್ಯ ಹಾಗೂ ಶ್ರೇಯೋಭಿವೃದ್ಧಿಗೆ ಮಹಿಳೆಯರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಮಹಿಳೆಯರು ನಾಲ್ಕುಗೊಡೆಯಲ್ಲಿರದೇ ಬ್ಯಾಂಕ್‌ಗಳಲ್ಲಿನ ಸಾಲ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕ ಸದೃಢರಾಗಬೇಕು ಎಂದು ಮೂತ್ತೂಟ ಫಿನ್‌ಕಾರ್ಪ್‌ನ ವಡಗಾವಿ ಶಾಖಾ ವ್ಯವಸ್ಥಾಪಕಿ ಅಂಬಿಕಾ ಗಾಡಗೋಳಿ ಹೇಳಿದರು.

ನಗರದ ಮೂತ್ತೂಟ ಫಿನ್‌ಕಾರ್ಪ್‌ನ ವಡಗಾವಿಯ ಶಾಖೆಯಲ್ಲಿ ನಡೆದ ವಿಶ್ವ ತಾಯಂದಿರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮನೆಯಲ್ಲಿ ಶಾಂತಿ, ನೆಮ್ಮದಿ ಸಮೃದ್ಧಿಯಾಗಿ ನೆಲೆಯೂರಬೇಕಾದರೇ ಆ ಮನೆಯ ಹೆಣ್ಮಕ್ಕಳ ಪಾತ್ರ ಅತೀ ಮುಖ್ಯವಾಗಿರುತ್ತದೆ. ಕುಟುಂಬದಲ್ಲಿ ಹಣಕಾಸಿನ ಸಮಸ್ಯೆಗಳು ಬಂದಾಗಲೇ ಮನೆಯಲ್ಲಿ ಶಾಂತಿ, ನೆಮ್ಮೆದಿ ಹಾಳಾಗುವುದು. ಹೀಗಾಗಿ ಮಹಿಳೆಯರು ಬ್ಯಾಂಕ್‌ನಲ್ಲಿರುವ ಸಾಲ ಸೌಲಭ್ಯಗಳನ್ನು ಬಳಸಿಕೊಂಡು ತಮ್ಮ ಕುಟುಂಬದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಹಾಗೆಯೇ ತಮ್ಮ ಕಾಲು ಮೇಲೆ ತಾವು ನಿಲ್ಲುವುದಕ್ಕೆ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧ್ಯಕ್ಷೆ ಮಂಜುಳಾ ಬೆನ್ನಿವಾಡೆ ಮಾತನಾಡಿ, ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರೊಂದಿಗೆ ವಿಶ್ವ ತಾಯಂದಿರ ದಿನ ಆಚರಿಸಿರುವುದು ಅರ್ಥಗರ್ಭಿತವಾಗಿದೆ ಎಂದು ಶ್ಲಾಘಿಸಿದರು.ಸುಮಾರು 150ಕ್ಕೂ ಅಧಿಕ ತಾಯಂದಿರು ಆಚರಣೆಯಲ್ಲಿ ಭಾಗವಹಿಸಿದ್ದರು. ಆಶಾ ಕಾರ್ಯಕರ್ತರಲ್ಲಿ ಮತ್ತು ಎಸ್‌ಡಬ್ಲೂಜೆ ಸದಸ್ಯರಲ್ಲಿ ಜಾಗೃತಿ ಮೂಡಿಸಲಾಯಿತು. ಹಿರಿಯ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಸಮರ್ಪಿತ ಸೇವೆ, ಬದ್ಧತೆ ಮತ್ತು ಕಠಿಣ ಪರಿಶ್ರಮ ಸೇರಿದಂತೆ ಸಮಾಜಕ್ಕೆ ನೀಡಿದ ಕೊಡುಗೆ ಗುರುತಿಸಿ ಅವರನ್ನು ಸನ್ಮಾನಿಸಲಾಯಿತು.ಆರ್‌ಪಿ ಉತ್ಪನ್ನಗಳ ಕುರಿತು ವಿವರಿಸುವ ಮೂಲಕ ಸಮುದಾಯದ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸಲು ಮತ್ತು ತಳಮಟ್ಟದಲ್ಲಿ ಮಹಿಳಾ ಕಲ್ಯಾಣ ಗುಂಪುಗಳೊಂದಿಗೆ ಉತ್ತಮ ಸಂಬಂಧಗಳನ್ನು ಬೆಳೆಸಲಾಯಿತು.ಪ್ರಾದೇಶಿಕ ವ್ಯವಸ್ಥಾಪಕ ವಿನಾಯಕ.ಎಚ್‌, ಪ್ರದೇಶ ವ್ಯವಸ್ಥಾಪಕ ಕಿರಣ್.ಬಿ, ಚಾನಲ್‌ ಮುಖ್ಯಸ್ಥ ನವೀನ್ ಮತ್ತು ಐಆರ್‌ಎಂ ಶಿವು, ಮಾರ್ಕೆಟಿಂಗ್‌ ಹೆಡ್‌ ಹೀರಾಲಾಲ್‌ ಜೆ.ಡಿ, ಶಾಖಾ ಸಿಬ್ಬಂದಿಯರಾದ ಆಕಾಶ.ಎಂ, ಕಾವೇರಿ.ಬಿ, ಜ್ಯೋತಿ.ಎಸ್‌, ಮಾರುತಿ.ಪಿ, ಶಿಬಂ.ಪಿ, ಶಿಪಾಲಿ.ಕೆ ಸೇರಿದಂತೆ ಆರ್‌ಎಂ, ಎಎಂ, ಐಆರ್‌ಎಂಎಸ್ ಮತ್ತು ಚಾನಲ್ ಮುಖ್ಯಸ್ಥರು, ಸಿಬ್ಬಂದಿ ಉಪಸ್ಥಿತರಿದ್ದರು.ಮನೆಯಲ್ಲಿ ಶಾಂತಿ, ನೆಮ್ಮದಿ ಸಮೃದ್ಧಿಯಾಗಿ ನೆಲೆಯೂರಬೇಕಾದರೇ ಆ ಮನೆಯ ಹೆಣ್ಮಕ್ಕಳ ಪಾತ್ರ ಅತೀ ಮುಖ್ಯವಾಗಿರುತ್ತದೆ. ಕುಟುಂಬದಲ್ಲಿ ಹಣಕಾಸಿನ ಸಮಸ್ಯೆಗಳು ಬಂದಾಗಲೇ ಮನೆಯಲ್ಲಿ ಶಾಂತಿ, ನೆಮ್ಮೆದಿ ಹಾಳಾಗುವುದು. ಹೀಗಾಗಿ ಮಹಿಳೆಯರು ಬ್ಯಾಂಕ್‌ನಲ್ಲಿರುವ ಸಾಲ ಸೌಲಭ್ಯಗಳನ್ನು ಬಳಸಿಕೊಂಡು ತಮ್ಮ ಕುಟುಂಬದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಹಾಗೆಯೇ ತಮ್ಮ ಕಾಲು ಮೇಲೆ ತಾವು ನಿಲ್ಲುವುದಕ್ಕೆ ಪ್ರಯತ್ನಿಸಬೇಕು.

-ಅಂಬಿಕಾ ಗಾಡಗೋಳಿ, ವ್ಯವಸ್ಥಾಪಕಿ, ಮೂತ್ತೂಟ ಫಿನ್‌ಕಾರ್ಪ್‌ ವಡಗಾವಿ ಶಾಖೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಲಿಕೆಯಲ್ಲಿ ಕನ್ನಡಪರ ನಿರ್ಣಯ ಅಂಗೀಕಾರವಾಗುತ್ತಾ?
ಬೆಳಗಾವಿ ಒನ್ ಕೇಂದ್ರದಲ್ಲಿ ಸರ್ವರ್‌ ಸಮಸ್ಯೆನಾ?