ಪಿಯುಸಿ ವಿದ್ಯಾರ್ಥಿಗಳು ನೀಡಿದ ಗುರುವಂದನೆ
ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಶಿಕ್ಷಣ ಪಡೆದು ಸತ್ಪ್ರಜೆಯಾದರೆ ಅದೇ ನೀವು ಗುರುಗಳಿಗೆ ಸಲ್ಲಿಸುವ ಕಾಣಿಕೆ ಎಂದು ನಿವೃತ್ತ ಪ್ರಾಂಶುಪಾಲ ಎಂ. ರುದ್ರಪ್ಪ ಹೇಳಿದರು.ತಾಲೂಕಿನ ಸಖರಾಯಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ 2004-2005ನೇ ಸಾಲಿನ ಪಿಯುಸಿ ವಿದ್ಯಾರ್ಥಿಗಳು ನೀಡಿದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ ಶಿಕ್ಷಣವೇ ಜೀವನವಲ್ಲ, ಶಿಕ್ಷಣ ಬೇಕು. ಇದರಿಂದ ನಾಗರಿಕತೆ ಬೆಳೆ ಯುತ್ತದೆ. ಜೊತೆಗೆ ನಮ್ಮ ಮೃಗತ್ವ ಬದಲಾಗುತ್ತದೆ. ನಾವು ದೇಶಕ್ಕೆ ಏನಾದರೂ ಕೊಡುಗೆ ಸಲ್ಲಿಸಿದರೆ ಅದು ಗುರುಗಳಿಗೆ ನೀಡುವ ಗುರುವಂದನೆ. ವಿದ್ಯಾರ್ಥಿಗಳು ಇದನ್ನೆಲ್ಲಾ ಪಾಲಿಸಿ ಸತ್ಪ್ರ ಜೆಯಾಗಿ ಪೋಷಕರಿಗೂ ಮತ್ತು ಗುರುಗಳಿಗೂ ಹೆಮ್ಮೆ ತಂದಿದ್ದಾರೆ ಎಂದರು. ಫೌಜಿಯಾ ಮತ್ತು ಶ್ವೇತ ಮಾತನಾಡಿ, 2004-2005ರಲ್ಲಿ ಸುಮಾರು 150 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದೆವು. ಅವರೆಲ್ಲರೂ ಸೇರಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು. ಕಾಲೇಜಿನ ಪ್ರಾಚಾರ್ಯ ವಿರೂಪಾಕ್ಷ ಮಾತನಾಡಿ, ಸೋಲು ಜೀವನದ ಅವಿಭಾಜ್ಯ ಅಂಗ. ಸೋಲದಿದ್ದರೆ ಕಲಿಯ ಲಾಗುವುದಿಲ್ಲ. ಕಲಿಯದಿದ್ದರೆ ಬದಲಾಗುವುದಿಲ್ಲ. ಒಳ್ಳೆಯ ಬದುಕು ನಿಮ್ಮದಾಗಲಿ ಎಂದು ಹಾರೈಸಿದ ಅವರು, 2004-05 ರ ಕಾಲೇಜು ವಿದ್ಯಾರ್ಥಿಗಳು ಹೈಸ್ಕೂಲ್ ವಿದ್ಯಾರ್ಥಿಗಳಂತೆ ಹೇಳಿಕೊಟ್ಟದ್ದನ್ನೆಲ್ಲ ಕಲಿತು ಜೀವನದಲ್ಲಿ ಮುಂದೆ ಬಂದಿದ್ದಾರೆ. ಅವರೆಲ್ಲರ ಬದುಕು ಒಳಿತಾಗಲಿ ಎಂದರು. ಕಾರ್ಯಕ್ರಮಮದಲ್ಲಿ ಎಲ್ಲ ವಿದ್ಯಾರ್ಥಿಗಳು ಸೇರಿ ಡಿಜಿಟಲ್ ನಾಮಫಲಕ ನೀಡುತ್ತೇವೆ ಎಂದರು. ಈ ಸಂದರ್ಭದಲ್ಲಿ ವಿಶ್ವೇಶ್ವರ ಮೂರ್ತಿ, ಸಿದ್ಧಾನಾಯ್ಕ, ದಯಾನಂದ್, ವೀರಣ್ಣಗೌಡ,ಉಮೇಶ್, ಹಾಲಪ್ಪ, ಇಂದ್ರಮ್ಮನವರಿಗೆ ಗುರುವಂದನೆ ಸಲ್ಲಿಸಲಾಯಿತು.
9ಕೆಕೆಡಿಯು1.ಕಡೂರು ತಾಲೂಕಿನ ಸಖರಾಯಪಟ್ಟಣದ ಸರಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ 2004-05 ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮದಲ್ಲಿ ಗುರುಗಳೊಟ್ಟಿಗೆ ಭಾಗವಹಿಸಿರುವುದು..