ವಿದ್ಯಾರ್ಥಿ ಬದುಕಿನ ಜೀವನಕ್ಕೆ ಬಿಇಡಿ ಪರಿವರ್ತನೆ ಹಂತ

KannadaprabhaNewsNetwork |  
Published : Apr 06, 2025, 01:50 AM IST
ಚಿತ್ರ 1 | Kannada Prabha

ಸಾರಾಂಶ

ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಡಾ.ಬಿ.ಸಿ.ಅನಂತ ರಾಮು ಉದ್ಘಾಟಿಸಿದರು.

ವಿದ್ಯಾರ್ಥಿ ಸಂಘದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ನೆರವೇರಿಸಿ ಪ್ರಾಚಾರ್ಯ ಡಾ ಬಿ.ಸಿ.ಅನಂತರಾಮು ಹೇಳಿಕೆಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬಿ.ಇಡಿ ಎನ್ನುವುದು ವಿದ್ಯಾರ್ಥಿ ಜೀವನದಿಂದ ಬದುಕಿನ ಜೀವನದ ಕಡೆಗೆ ಕೊಂಡೊಯ್ಯುವ ಪರಿವರ್ತನೆಯ ಹಂತ ಎಂದು ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಸಿ.ಅನಂತರಾಮು ತಿಳಿಸಿದರು.

ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಡಿಯಲ್ಲಿ ವೆಂಕಟೇಶ್ವರ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಶನಿವಾರ ನಡೆದ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ನೆರವೇರಿಸಿ ಅವರು ಮಾತನಾಡಿದರು.

ಬಿ.ಇಡಿ ಶಿಕ್ಷಣ ಬದುಕು ಕಟ್ಟಿಕೊಡುವ ಶಿಕ್ಷಣವಾಗಬೇಕೇ ವಿನಃ ಶೋಕಿಯಾಗಬಾರದು. ಮನೆಯಲ್ಲಿ ತಂದೆ-ತಾಯಿ, ಗುರು-ಹಿರಿಯರಲ್ಲಿ ಉತ್ತಮ ಬಾಂಧವ್ಯ ಬೆಸೆಯುವಂತ ಶಿಕ್ಷಣ ಮಕ್ಕಳಿಗೆ ಕಲಿಸಬೇಕಿದೆ. ಸಧೃಡ ಸಮಾಜ ನಿರ್ಮಿಸುವುದೇ ಶಿಕ್ಷಕರ ಪರಮ ಧ್ಯೇಯವಾಗಬೇಕು. ಇದರ ಮುಂದೆ ಎಲ್ಲವೂ ಗೌಣ. ಮಾನವೀಯತೆ

ಸತ್ಯ, ನಿಷ್ಠೆ, ಶ್ರದ್ಧೆ, ಕಠಿಣ ಪರಿಶ್ರಮವಿದ್ದಾಗ ಮಾತ್ರ ಜೀವನದಲ್ಲಿ ಏನಾದರೂ ಸಾಧನೆ ಮಾಡಬಹುದು ಎಂದು ಹೇಳಿದರು.

ಸಹಾಯಕ ಪ್ರಾಧ್ಯಾಪಕ ಡಾ.ಜಿ.ಇ.ಭೈರಸಿದ್ದಪ್ಪ ಮಾತನಾಡಿ, ಶಿಕ್ಷಕ ಒಬ್ಬ ನಟ, ಕಲಾವಿದ ಇದ್ದಂತೆ. ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕನಿಗೆ ಕಲೆ ಅತ್ಯಗತ್ಯವಾಗಿ ಬೇಕು. ಅನೇಕ ವಿಚಾರಗಳನ್ನು ಮಕ್ಕಳ ಮನಸ್ಸಿಗೆ ಮುಟ್ಟಿಸಬೇಕಾದರೆ ಶಿಕ್ಷಕ ಸಕಲ ಕಲಾ ವಲ್ಲಭನಾಗಿರಬೇಕು. ಕಲೆ ಇದ್ದವರು ಮಾತ್ರ ಅತ್ಯುತ್ತಮವಾಗಿ ಬೋಧಿಸಲು ಸಾಧ್ಯ ಎಂದರು.

ಪ್ರತಿಯೊಬ್ಬರಲ್ಲಿಯೂ ಒಂದಲ್ಲ ಒಂದು ರೀತಿಯ ಪ್ರತಿಭೆ, ಕೌಶಲ್ಯ ವಿರುತ್ತದೆ. ಆದರೆ ತಮ್ಮಲ್ಲಿರುವ ಜ್ಞಾನವನ್ನು ಹೇಗೆ ಮತ್ತೊಬ್ಬರಿಗೆ ತಲುಪಿಸಬೇಕೆನ್ನುವ ಚಾಣಾಕ್ಷತನ ಮುಖ್ಯ. ಪ್ರತಿಭೆಯಿದ್ದು ಪ್ರಯತ್ನವಿಲ್ಲದಿದ್ದರೆ ಜೀವನದಲ್ಲಿ ಯಶಸ್ಸು ಗಳಿಸುವುದು ಕಷ್ಟ. ನಿರಂತರ ಅಧ್ಯಯನದಿಂದ ಉತ್ತಮ ಶಿಕ್ಷಕನಾಗಬಹುದು. ಸ್ಪರ್ಧಾತ್ಮಕ ಯುಗದಲ್ಲಿ ಸಿಕ್ಕ ಅವಕಾಶವನ್ನು ಕೈಚೆಲ್ಲಿ ಕೂರಬಾರದು ಎಂದು ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು.ಈ ವೇಳೆ ಎಸ್‌ಎಲ್‌ವಿ ಸ್ಕೂಲ್ ಆಫ್ ನರ್ಸಿಂಗ್ ಪ್ರಾಂಶುಪಾಲ ಡಾ.ಎಂ.ಎಂ.ಮಹಾಂತೇಶ, ಸಹಾಯಕ ಪ್ರಾಧ್ಯಾಪಕರಾದ ಡಾ.ಕೆ.ಪಿ.ನಾಗಭೂಷಣಶೆಟ್ಟಿ, ಪ್ರೊ.ಆರ್.ಎಸ್. ರಾಜು, ಪ್ರೊ.ವಿ.ಪ್ರಕಾಶ್, ಡಾ.ಜಿ.ಬಿ.ರಾಜಪ್ಪ, ಡಾ.ಬಿ.ಚಂದ್ರಪ್ಪ, ಡಾ.ಲಿಂಗರಾಜ್ ಆರ್.ಹಂಚಿನಮನಿ, ಗ್ರಂಥಪಾಲಕ ಬಸವರಾಜು, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಎಂ.ವಿ.ಗೋವಿಂದರಾಜು, ಸುಶ್ಮ, ಆಯಿಷಾ ಮುಸ್ಕಾನ್ ಮುಂತಾದವರು ಹಾಜರಿದ್ದರು. ಇದೆ ವೇಳೆ ಬಿ.ಇಡಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ಪಲ್ಲವಿ, ಕಾಂಚನ, ನಿಖಿತ ಅವರನ್ನು ಸನ್ಮಾನಿಸಲಾಯಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ