ಗೋವಾದ ಡಿಚೋಲಿಯಲ್ಲಿ ಬೀರೇಶ್ವರ 231ನೇ ಶಾಖೆ ಆರಂಭ

KannadaprabhaNewsNetwork |  
Published : Nov 22, 2025, 03:15 AM IST
ಶಾಖೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಬೀರೇಶ್ವರ ಸಂಸ್ಥೆಯು ಒಂದೇ ಸೂರಿನಡಿ ಎಲ್ಲಾ ಸೇವೆಗಳನ್ನು ಒದಗಿಸುತ್ತಿದ್ದು, ಗೋವಾದ ಜನರ ಆರ್ಥಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಗೋವಾ ಬಿಜೆಪಿ ರಾಜ್ಯಾಧ್ಯಕ್ಷ ದಾಮುಜಿ ನಾಯಿಕ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಬೀರೇಶ್ವರ ಸಂಸ್ಥೆಯು ಒಂದೇ ಸೂರಿನಡಿ ಎಲ್ಲಾ ಸೇವೆಗಳನ್ನು ಒದಗಿಸುತ್ತಿದ್ದು, ಗೋವಾದ ಜನರ ಆರ್ಥಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಗೋವಾ ಬಿಜೆಪಿ ರಾಜ್ಯಾಧ್ಯಕ್ಷ ದಾಮುಜಿ ನಾಯಿಕ ಹೇಳಿದರು.

ಚಿಕ್ಕೋಡಿ ತಾಲೂಕಿನ ಯಕ್ಸಂಬಾದ ಜೊಲ್ಲೆ ಗ್ರೂಪ್‌ನ ಅಂಗಸಂಸ್ಥೆಯಾದ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಯ (ಮಲ್ಟಿ-ಸ್ಟೇಟ್) 231ನೇ ನೂತನ ಡಿಚೋಲಿಯಲ್ಲಿ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಸಾರ್ವಜನಿಕರು ತಮ್ಮ ವ್ಯವಹಾರವನ್ನು ಮಾಡುವ ಮೂಲಕ ಶಾಖೆಯ ಪ್ರಗತಿ ಪಥದಲ್ಲಿ ಮುನ್ನಡೆಸಬೇಕೆಂದು ಕೋರಿದರು.

ಪ್ರಭಾರ ಪ್ರಧಾನ ವ್ಯವಸ್ಥಾಪಕ ಬಹದ್ದೂರ ಗುರವ ಮಾತನಾಡಿ, ಗೋವಾ ಬಿಜೆಪಿ ರಾಜ್ಯಾಧ್ಯಕ್ಷ ದಾಮುಜಿ ನಾಯಿಕ ಹಾಗೂ ನಾಯಕರು ಮೊದಲಿನಿಂದಲೂ ಜೊಲ್ಲೆ ಗ್ರೂಪ್‌ನೊಂದಿಗೆ ಒಳ್ಳೆಯ ಸಂಬಂಧ ಒಡನಾಟ ಹೊಂದಿದ್ದಾರೆ. ನಮ್ಮ ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ಸದಾ ಬದ್ಧರಾಗಿದ್ದಾರೆ. ಕಳೆದ ವರ್ಷ 2 ಶಾಖೆಯ ಉದ್ಘಾಟನೆಯನ್ನು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಅವರು ಮಾಡಿದ್ದರು.ಅವರು ನಮ್ಮ ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಅವರ ಸಹಕಾರ ಹೀಗೆ ಇರಲಿ. ಅವರಿಗೆ ಜೊಲ್ಲೆ ಗ್ರೂಪ್ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿದರು.

ಉಪಪ್ರಧಾನ ವ್ಯವಸ್ಥಾಪಕರಾದ ರಮೇಶ ಕುಂಬಾರ ಮಾತನಾಡಿ, ಕಳೆದ 35 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಬೀರೇಶ್ವರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯು ಕರ್ನಾಟಕ ಮಾತ್ರವಲ್ಲದೆ ಗೋವಾ ಮತ್ತು ಮಹಾರಾಷ್ಟ್ರಗಳಲ್ಲೂ ತನ್ನ 230 ಶಾಖೆಗಳನ್ನು ಹೊಂದಿದೆ. ಅ.30ರವರೆಗೆ ₹ 4,588 ಕೋಟಿ ಠೇವಣಿ ಇದ್ದು, ₹ 3,610 ಕೋಟಿ ಸಾಲ ನೀಡಿದೆ. 4.27 ಲಕ್ಷಕ್ಕೂ ಹೆಚ್ಚು ಸದಸ್ಯರಿರುವ ಈ ಸೊಸೈಟಿ, ದಕ್ಷಿಣ ಭಾರತದ ಅತಿ ದೊಡ್ಡ ಬಹುರಾಜ್ಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.

ಗೋವಾ ನಗರಸಭೆ ಉಪಾಧ್ಯಕ್ಷ ದೀಪಾ ಪ್ರದೀಪ ಪಾಳ, ರಂಜನಾ ಸಮೀರ್ ವೈಗಂಕರ್, ತನುಜ ರಾಜರಾಮ್ ಗಾಂಕರ್, ದೀಪಾ ಸುನಿಲ್, ಶೇಣ್ವಿ ಶಿರಗಾಂವ್ಕರ್, ಚಂದ್ರಕಾಂತ ಭೋಜೆ ಪಾಟೀಲ, ಕನ್ನಡ ಸಾಹಿತ್ಯ ಪರಿಷತ್‌ ಗೋವಾ ಘಟಕದ ಅಧ್ಯಕ್ಷ ಸಿದ್ದಣ್ಣ ಮೇಟಿ, ಸಹಾಯಕ ಪ್ರಧಾನ ವ್ಯವಸ್ಥಾಪಕ ಶೇಖರ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

ಗೊಡಚಿ ವೀರಭದ್ರೇಶ್ವರ ಜಾತ್ರೆಗೆ ಸಕಲ ವ್ಯವಸ್ಥೆ
ಸಿಎಸ್‌ಆರ್ ₹200 ಕೋಟಿ ಅನುದಾನಡಿ 211 ಕೊಠಡಿ ನಿರ್ಮಾಣ