- ಚನ್ನಗಿರಿ ತಾಪಂನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಇಂದಿನ ಸಮಾಜದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಗಮನೀಯ ಸಾಧನೆ ತೋರುತ್ತ, ವರ್ಚಸ್ಸನ್ನು ವೃದ್ಧಿಸಿಕೊಂಡು ಶ್ರೇಷ್ಠತೆ ಪಡೆಯುತ್ತಿದ್ದಾರೆ ಎಂದು ಸ್ಥಳೀಯ ಜೆ.ಎಂ.ಎಫ್.ಸಿ ನ್ಯಾಯಲಯದ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶಮಶ್ರೀವತ್ಸ ಹೇಳಿದರು.ಮಂಗಳವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಡೆದ ಅಂತರ ರಾಷ್ಟ್ರೀಯ ಮಹಿಳಾ ದಿನ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಹೆಣ್ಣಾಗಿ ಹುಟ್ಟಿರುವುದೇ ಪೂರ್ವಜನ್ಮದ ಪುಣ್ಯವಾಗಿದೆ. ಬೆಳಗ್ಗೆ ನಿದ್ರೆಯಿಂದ ಮೇಲೇಳುತ್ತಿದ್ದಂತೆಯೇ ಒಂದಿಲ್ಲೊಂದು ಕೆಲಸ ಕಾರ್ಯಗಳಲ್ಲಿ ಮಹಿಳೆಯರು ತೊಡಗಿಸಿಕೊಳ್ಳುತ್ತಿದ್ದಾರೆ. ಪುರುಷರಿಗೆ ಸಮಾನವಾಗಿ ಹೊಲ, ಗದ್ದೆ, ಮನೆ ಕೆಲಸಗಳಿಂದ ಹಿಡಿದು ಸಮಾಜ ಸೇವೆ, ರಾಜಕಾರಣ, ಸಾಹಿತ್ಯ ಸೇವೆ, ಭೂಮಿಯ ಮೇಲೆ ಸಂಚರಿಸುವ ವಾಹನಗಳಿಂದ ಹಿಡಿದು ಗಗನದಲ್ಲಿ ಸಂಚರಿಸುವಂತಹ ಆಕಾಶ ಯಾನಗಳನ್ನು ಚಲಾಯಿಸುತ್ತಾ ಅಂತರಿಕ್ಷದ ಸಂಶೋಧನೆಗಳಿಂದಲೂ ಯಶಸ್ಸು ಪಡೆಯುತ್ತಿದ್ದಾರೆ ಎಂದು ಶ್ಲಾಘಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ರಾಜಪ್ಪ ವಹಿಸಿ ಮಾತನಾಡಿದರು. ಕೆ.ಎಸ್.ಪ್ರತಿಭಾ ಅವರು ಮಹಿಳೆಯರ ಸಾಧನೆಗಳನ್ನು ಕುರಿತು ಅತಿಥಿ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಜಿ.ಮಹಾಲಕ್ಷ್ಮೀ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಬಿ.ಕೆ.ಉತ್ತಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಆರ್.ನಿರ್ಮಲಾ, ಗ್ರೇಡ್-2 ತಹಸೀಲ್ದಾರ್ ರುಕ್ಮಿಣಿಬಾಯಿ, ವಕೀಲರ ಸಂಘದ ಉಪಾಧ್ಯಕ್ಷ ಆರ್.ಬಾಬುಜಾನ್, ಕಾರ್ಯದರ್ಶಿ ಜಗದೀಶ್, ಖಜಾಂಚಿ ಮಲ್ಲಿಕಾರ್ಜುನ್, ಎನ್.ಆರ್.ಪಾಟೀಲ್ ಉಪಸ್ಥಿತರಿದ್ದರು.- - - -11ಕೆಸಿಎನ್‌ಜಿ1.ಜೆಪಿಜಿ:
ಮಹಿಳಾ ದಿನ ಸಮಾರಂಭವನ್ನು ನ್ಯಾಯಾಧೀಶರಾದ ಶಮಶ್ರೀವತ್ಸ ಉದ್ಘಾಟಿಸಿದರು.