ಮಳೆಯಿಂದ ಹಾನಿಗೊಳಗಾದ ರಸ್ತೆ ದುರಸ್ತಿಗೆ ರು. 10 ಕೋಟಿ ಅನುದಾನ

KannadaprabhaNewsNetwork | Published : Mar 12, 2025 12:47 AM

ಸಾರಾಂಶ

ಹಿರೇಕೆರೂರು ತಾಲೂಕಿನ ಆರೀಕಟ್ಟಿಯಿಂದ ಬೆಟಕೇರೂರ ರಸ್ತೆ ಅಭಿವೃದ್ಧಿಗೆ ₹1.25 ಕೋಟಿಗೆ ಅನುಮೋದನೆ ದೊರೆತಿದೆ.

ಹಿರೇಕೆರೂರು: ತಾಲೂಕಿನಲ್ಲಿ 2024- 25ನೇ ಸಾಲಿನಲ್ಲಿ ವಾಡಿಕೆಗಿಂತ ಹೆಚ್ಚು ಸುರಿದ ಮಳೆಗೆ ಹಾನಿಗೊಳಗಾದ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ದುರಸ್ತಿಪಡಿಸಲು ಮಳೆ ಪರಿಹಾರ ಕಾರ್ಯಕ್ರಮದ ಅಡಿಯಲ್ಲಿ ಕ್ಷೇತ್ರಕ್ಕೆ ₹10 ಕೋಟಿ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದ್ದಾರೆ.ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತಾಲೂಕಿನ ಆರೀಕಟ್ಟಿಯಿಂದ ಬೆಟಕೇರೂರ ರಸ್ತೆ ಅಭಿವೃದ್ಧಿಗೆ ₹1.25 ಕೋಟಿಗೆ ಅನುಮೋದನೆ ದೊರೆತಿದೆ. ಅದೇ ರೀತಿ ಬೆಟಕೇರೂರ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ₹25 ಲಕ್ಷ, ಯಮ್ಮಿಗನೂರು ಗ್ರಾಮದಲ್ಲಿ ಸಿಸಿ ಗಟಾರ ನಿರ್ಮಾಣಕ್ಕೆ ₹25 ಲಕ್ಷ, ಹೊಲಬಿಕೊಂಡ ಗ್ರಾಮದಲ್ಲಿ ಸಿಸಿ ಗಟಾರ ನಿರ್ಮಾಣಕ್ಕೆ ₹10 ಲಕ್ಷ , ಡಮ್ಮಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ₹15 ಲಕ್ಷ, ಹಿರೇಕೊಣತಿ ಗ್ರಾಮದ ಚಿಕ್ಕೇರೂರ- ಹಂಸಭಾವಿ ರಸ್ತೆಯಿಂದ ಚಿಕ್ಕೋಣತಿ ಮುಖ್ಯ ರಸ್ತೆ ಅಭಿವೃದ್ಧಿಗೆ ₹20 ಲಕ್ಷ ಅನುದಾನಕ್ಕೆ ಅನುಮೋದನೆ ಸಿಕ್ಕಿದೆ.

ಮುದ್ದಿನಕೊಪ್ಪ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ₹15 ಲಕ್ಷ, ಜೋಗಿಹಳ್ಳಿ ಗ್ರಾಮದ ಸಿಸಿ ರಸ್ತೆ ನಿರ್ಮಾಣಕ್ಕೆ ₹10 ಲಕ್ಷ, ಶಂಕರನಹಳ್ಳಿ ಗ್ರಾಮದಿಂದ ಉಜನೀಪುರ ಗ್ರಾಮದವರೆಗೆ ರಸ್ತೆ ಬದಿ ಸಿಸಿ ಗಟಾರ ನಿರ್ಮಾಣಕ್ಕೆ ₹50 ಲಕ್ಷ, ಯಲವದಹಳ್ಳಿ ಗ್ರಾಮದಿಂದ ಆಲದಗೇರಿ ಗ್ರಾಮದವರೆಗೆ ರಸ್ತೆ ಅಭಿವೃದ್ಧಿಗೆ ₹1 ಕೋಟಿ ಅನುಮೋದನೆ ಸಿಕ್ಕಿದೆ. ಶೀಘ್ರದಲ್ಲಿಯೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದಿದ್ದಾರೆ.

ಹುರಳಿಕುಪ್ಪಿ ಬೀರಲಿಂಗೇಶ್ವರ ಜಾತ್ರೆ ಸಂಪನ್ನ

ಸವಣೂರು: ತಾಲೂಕಿನ ಹುರಳಿಕುಪ್ಪಿ ಗ್ರಾಮದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಸಂಪನ್ನಗೊಂಡಿತು.

ಗುರುವಾರ ರಾತ್ರಿ ಬೀರಲಿಂಗೇಶ್ವರ ಮೂರ್ತಿಗೆ ವಿಶೇಷ ಪೂಜೆ ಕೈಗೊಂಡು ಕರಿ ಕಟ್ಟುವ ಮೂಲಕ ವಿವಿಧ ಧಾರ್ಮಿಕ ಕೈಂಕರ್ಯ ಕಾರ್ಯಕ್ರಮ ಜರುಗಿತು.ಶುಕ್ರವಾರ ಪ್ರಾಥಃಕಾಲ ಅಭಿಷೇಕ ಪೂಜೆ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮ ಕೈಗೊಳ್ಳಲಾಯಿತು. ನಂತರ ಬೀರಲಿಂಗೇಶ್ವರ ಒಳಗುಡಿ ದೇವಸ್ಥಾನದಿಂದ ಪಲ್ಲಕ್ಕಿ ಉತ್ಸವ ಬಂಡಿ ವಿವಿಧ ವಾದ್ಯಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆ ದೇವಸ್ಥಾನ ತಲುಪಿತು. ನಂತರ ಭಕ್ತರು ದೀಡ ನಮಸ್ಕಾರ ಸೇರಿದಂತೆ ಹಲವಾರು ರೀತಿಯ ಹರಕೆ ತೀರಿಸಿದರು. ರಾತ್ರಿ ಬೀರಲಿಂಗೇಶ್ವರ ಡೊಳ್ಳಿನ ಪದ ಹಾಗೂ ಭಜನಾ ಮೇಳದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

Share this article